ಕ್ಲೈಮೇಟ್ ಕೌಂಟ್‌ಡೌನ್ ಉಪಕ್ರಮಕ್ಕಾಗಿ ಟೆಡ್‌ನೊಂದಿಗೆ ಪಾಲುದಾರಿಕೆ ಪ್ರಕಟಿಸಿದ ಜಿಯೋ

ಹವಾಮಾನ ಬದಲಾವಣೆಗಾಗಿ 'ಕೌಂಟ್ ಡೌನ್' ಉಪಕ್ರಮದೊಂದಿಗೆ ಹವಾಮಾನ ಬದಲಾವಣೆಗಾಗಿ ಟೆಡ್ ನೊಂದಿಗೆ ಜಿಯೋ ಕೈಜೋಡಿಸಿದೆ.
ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ

ಮುಂಬೈ: ಹವಾಮಾನ ಬದಲಾವಣೆಗಾಗಿ 'ಕೌಂಟ್ ಡೌನ್' ಉಪಕ್ರಮದೊಂದಿಗೆ ಹವಾಮಾನ ಬದಲಾವಣೆಗಾಗಿ ಟೆಡ್ ನೊಂದಿಗೆ ಜಿಯೋ ಕೈಜೋಡಿಸಿದೆ.

2020ನೇ ವರ್ಷವನ್ನು ನಾವೆಲ್ ಕೊರೊನಾವೈರಸ್ ನ ವರ್ಷವೆಂದು ನೆನಪಿಸಿಕೊಳ್ಳಲಾಗುತ್ತದೆ. ಒಂದು ಸಮಾಜವಾಗಿ ನಾವು ಹೇಗೆ ಬದುಕುತ್ತೇವೆ ಮತ್ತು ಕಾರ್ಯನಿರ್ವಹಿಸುತ್ತೇವೆ ಎನ್ನುವುದನ್ನು ಅದು ಮರುವ್ಯಾಖ್ಯಾನಿಸಿದೆ. 

ಈ ವರ್ಷದಲ್ಲಿ ಹಸಿರುಮನೆ ಅನಿಲಗಳ ಪ್ರಮಾಣ ತಾತ್ಕಾಲಿಕವಾಗಿ ಕಡಿಮೆಯಾಗಿದೆಯಾದರೂ, ಹಸಿರುಮನೆ ಅನಿಲ ಹೊರಸೂಸುವಿಕೆಯ ಹವಾಮಾನ ಪರಿಣಾಮಗಳು ಇದ್ದೇ ಇವೆ. ನಮ್ಮ ಗ್ರಹ ಬಿಸಿಯಾಗುತ್ತಲೇ ಇದೆ ಮತ್ತು ಸಾಗರಗಳು ಇನ್ನೂ ಆಮ್ಲೀಕರಣಗೊಳ್ಳುತ್ತಿವೆ. 

ಹವಾಮಾನ ಬಿಕ್ಕಟ್ಟಿಗೆ ಪರಿಹಾರಗಳನ್ನು ಬೆಂಬಲಿಸಲು ಮತ್ತು ಚುರುಕುಗೊಳಿಸಲು, ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು, ಟೆಡ್ ಕ್ಲೈಮೇಟ್ ಕೌಂಟ್ ಡೌನ್ ಒಂದು ಜಾಗತಿಕ ಉಪಕ್ರಮವಾಗಿದೆ.

ಎಲ್ಲರಿಗೂ ಹೆಚ್ಚು ಸುರಕ್ಷಿತ, ಸ್ವಚ್ಛ ಹಾಗೂ ತೃಪ್ತಿಕರವಾದ ಶೂನ್ಯ-ಇಂಗಾಲದ ಜಗತ್ತಿನ ಕಡೆಗಿನ ಓಟದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 2030ರ ವೇಳೆಗೆ ಅರ್ಧಕ್ಕೆ ಇಳಿಸುವ ಮೂಲಕ ಉತ್ತಮ ಭವಿಷ್ಯವನ್ನು ನಿರ್ಮಿಸುವುದು ಇದರ ಗುರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com