ಹಿಂದೂ-ಮುಸ್ಲಿಂ ದಂಪತಿ ಜಾಹಿರಾತು: ತನಿಷ್ಕ್ ಜ್ಯುವೆಲರಿಗೆ ಟ್ವೀಟರಿಗರಿಂದ ಮಂಗಳಾರತಿ, ವಿಡಿಯೋ!

ಹಿಂದೂ-ಮುಸ್ಲಿಂ ದಂಪತಿಯ ಜಾಹಿರಾತು ಮೂಲಕ ತನಿಷ್ಕ್ ಜ್ಯುವೆಲರಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ತನಿಷ್ಕ್ ತನ್ನ ಜಾಹಿರಾತುವನ್ನು ಡಿಲೀಟ್ ಮಾಡಿದೆ. 

Published: 13th October 2020 04:29 PM  |   Last Updated: 13th October 2020 05:01 PM   |  A+A-


Ad Photo

ಜಾಹಿರಾತಿನ ಫೋಟೋ

Posted By : Vishwanath S
Source : The New Indian Express

ಹಿಂದೂ-ಮುಸ್ಲಿಂ ದಂಪತಿಯ ಜಾಹಿರಾತು ಮೂಲಕ ತನಿಷ್ಕ್ ಜ್ಯುವೆಲರಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ತನಿಷ್ಕ್ ತನ್ನ ಜಾಹಿರಾತುವನ್ನು ಡಿಲೀಟ್ ಮಾಡಿದೆ. 

ಜಾಹಿರಾತುವಿನಲ್ಲಿ ಮುಸ್ಲಿಂ ಅತ್ತೆ ಹಿಂದೂ ವಧುವಿಗೆ ಸೀಮಂತ ಮಾಡುತ್ತಿರುವುದನ್ನು ಚಿತ್ರೀಕರಿಸಲಾಗಿದೆ. ಇನ್ನು ಈ ವಿಡಿಯೋ ವನ್ನು ಟ್ವೀಟ್ ಮಾಡಿದ್ದ ತನಿಷ್ಕ್, ತಮ್ಮ ಸ್ವಂತ ಮಗುವಿನಂತೆ ಪ್ರೀತಿಸುವ ಕುಟುಂಬದಲ್ಲಿ ಅವಳು ಮದುವೆಯಾಗಿದ್ದಾಳೆ. ಅವಳಿಗಾಗಿ ಮುಸ್ಲಿಂ ಕುಟುಂಬ ಸಾಮಾನ್ಯವಾಗಿ ಮಾಡದ ಕಾರ್ಯಕ್ರಮವನ್ನು ಆಚರಿಸಿದೆ. ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ಎರಡು ವಿಭಿನ್ನ ಧರ್ಮಗಳ ಸುಂದರ ಸಂಗಮ ಎಂದು ಅಡಿ ಬರಹ ನೀಡಿತ್ತು. 

ಈ ವಿಡಿಯೋ ನೋಡಿದ ಟ್ವೀಟರಿಗರು ಇಂತಹ ಜಾಹಿರಾತು ಮೂಲಕ ತನಿಷ್ಕ್ ಜ್ಯುವೆಲರಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದೆ. ಅಲ್ಲದೆ ಲವ್ ಜಿಹಾದ್ ಒಂದು ಇಸ್ಲಾಮೋಫೋಬಿಕ್ ಪಿತೂರಿ ಸಿದ್ಧಾಂತವಾಗಿದ್ದು, ಮುಸ್ಲಿಂ ಪುರುಷರು ಇತರ ಧರ್ಮಗಳ ಮಹಿಳೆಯರನ್ನು ಪ್ರೀತಿಸುವಂತೆ ಮಾಡುತ್ತಾರೆ. ನಂತರ ಮತಾಂತರವನ್ನು ಉತ್ತೇಜಿಸಲು ಅವರನ್ನು ಮದುವೆಯಾಗುತ್ತಾರೆ ಎಂದು ಟ್ವೀಟ್ ಮಾಡಿ ಟ್ರೋಲ್ ಮಾಡುತ್ತಿದ್ದರು. 

ಇಂತಹ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿರುವ ತನಿಷ್ಕ್ ಜ್ಯುವೆಲರಿಯನ್ನು ಬಹಿಷ್ಕರಿಸುವಂತೆ ಟ್ವೀಟರಿಗರು ಕರೆ ನೀಡಿದ್ದರು. ಇನ್ನು ವಿಡಿಯೋ ಸಂಬಂಧ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ತನಿಷ್ಕ್ ಸದ್ಯ ಈ ವಿಡಿಯೋವನ್ನು ಡಿಲೀಟ್ ಮಾಡಿದೆ. 

ಬಾಯ್ ಕಾಟ್ ತನಿಷ್ಕ್ ಟ್ರೆಂಡ್ ಆಗುತ್ತಿದ್ದಂತೆ ಕೇರಳ ಸಂಸದ ಶಶಿ ತರೂರ್ ಟ್ವೀಟ್ ಮಾಡಿ ತನಿಷ್ಕ್ ಜ್ಯುವೆಲರಿಯ ಜಾಹಿರಾತನ್ನು ಬೆಂಬಲಿಸಿದ್ದಾರೆ. 

ತಮ್ಮ ಟ್ವೀಟ್ ನಲ್ಲಿ ತರೂರ್, ಈ ಸುಂದರವಾದ ಜಾಹೀರಾತಿನ ಮೂಲಕ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಎತ್ತಿ ತೋರಿಸಿದ್ದಕ್ಕಾಗಿ ಹಿಂದೂತ್ವಾ ಧರ್ಮಾಧಿಕಾರಿಗಳು ತನಿಷ್ಕ್ ಜ್ಯುವೆಲರಿಯನ್ನು ಬಹಿಷ್ಕರಿಸಬೇಕೆಂದು ಕರೆ ನೀಡಿದ್ದಾರೆಂದು ಬರೆದುಕೊಂಡಿದ್ದಾರೆ.

Stay up to date on all the latest ವಾಣಿಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp