ಸ್ಯಾಮ್ ಸಂಗ್ ಗ್ಯಾಲೆಕ್ಸಿ M31 ಪ್ರೈಮ್ ಗೆ ಅಮೇಜಾನ್ ನಲ್ಲಿ ಭರ್ಜರಿ ರಿಯಾಯಿತಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಂ31 ಪ್ರೈಮ್ ಗೆ ಅಮೇಜಾನ್ ನಲ್ಲಿ ಭರ್ಜರಿ ರಿಯಾಯಿತಿ ನೀಡಲಾಗಿದೆ. 

Published: 14th October 2020 01:52 PM  |   Last Updated: 14th October 2020 02:03 PM   |  A+A-


Samsung launches Galaxy M31 Prime with Amazon in India

ಸ್ಯಾಮ್ ಸಂಗ್ ಗ್ಯಾಲೆಕ್ಸಿ M31 ಪ್ರೈಮ್ ಗೆ ಅಮೇಜಾನ್ ನಲ್ಲಿ ಭರ್ಜರಿ ರಿಯಾಯಿತಿ

Posted By : Srinivas Rao BV
Source : IANS

ನವದೆಹಲಿ: ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಂ31 ಪ್ರೈಮ್ ಗೆ ಅಮೇಜಾನ್ ನಲ್ಲಿ ಭರ್ಜರಿ ರಿಯಾಯಿತಿ ನೀಡಲಾಗಿದೆ. 

ಅಮೇಜಾನ್-ಸ್ಯಾಮ್ ಸಂಗ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವಿಶೇಷ ಆವೃತ್ತಿಯ ಸ್ಮಾರ್ಟ್ ಫೋನ್ ಇದಾಗಿದ್ದು, 6000 ಎಂಎಎಚ್ ಬ್ಯಾಟರಿ ಹೊಂದಿದ್ದು ಹಬ್ಬದ ಸೀಸನ್ ಗಾಗಿಯೇ ಬಿಡುಗಡೆ ಮಾಡಲಾಗಿದೆ. ನೀಲಿ ಬಣ್ಣ, ಸ್ಪೇಸ್ ಬ್ಲಾಕ್ ಹಾಗೂ ಐಸ್ ಬರ್ಗ್ ಬ್ಲೂ ಬಣ್ಣಗಳಲ್ಲಿ ಲಭ್ಯವಿರುವ ಈ ಮೊಬೈಲ್ ಗೆ 16,499 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. 

ಅ.17 ರಿಂದ ಪ್ರಾರಂಭವಾಗುವ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನ ಅವಧಿಯಲ್ಲಿ ಅಮೇಜಾನ್.ಇನ್ ಗ್ರಾಹಕರು ಹೆಚ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಗಳನ್ನು ಬಳಕೆ ಮಾಡಿ ಈ ಮೊಬೈಲ್ ಖರೀದಿಸಿದರೆ, ಶೇ.10 ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.

ಗ್ಯಾಲೆಕ್ಸಿ ಎಂ31 ಪ್ರೈಮ್ ಗಾಗಿ ನಾವು ಅಮೇಜಾನ್ ಜೊತೆ ಅತ್ಯಂತ ನಿಕಟವಾಗಿ ಕೆಲಸ ಮಾಡಿದ್ದೇವೆ ಎಂದು ಸ್ಯಾಮ್ ಸಂಗ್ ತಿಳಿಸಿದೆ.

ಈ ವಿಶೇಷ ಮೊಬೈಲ್ ನಲ್ಲಿ ಅಮೇಜಾನ್ ಆಪ್ ಗೆ ಸಂಬಂಧಿಸಿದಂತೆ ಪ್ರೀ ಇನ್ಸ್ಟಾಲ್ಡ್ ಡೆಡಿಕೇಟೆಡ್ ಫೋಲ್ಡರ್ ನ್ನು ನೀಡಲಾಗಿರುತ್ತದೆ. 6.4 ಇಂಚಿನ ಇನ್ಫಿನಿಟಿ ಯು ಸಮೋಲ್ಡ್ ಡಿಸ್ಪ್ಲೇ ನ್ನು ಹೊಂದಿದೆ. 64+8+5+5 ಮೆಗಾ ಪಿಕ್ಸಲ್ ಕ್ವಾಡ್ ಕ್ಯಾಮರಾ ಸೆಟಪ್, 4 ಕೆ ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯ, ಹೈಪರ್ ಲ್ಯಾಪ್ಸ್ ನಲ್ಲಿ ಶೂಟಿಂಗ್ ಮಾಡುವ ಸೌಲಭ್ಯ, ಲೋ ಲೈಟ್ ಫೋಟೋಗ್ರಾಫಿಗಾಗಿ ನೈಟ್ ಮೋಡ್ ಸೌಲಭ್ಯಗಳು ಈ ಹೊಸ ಸ್ಮಾರ್ಟ್ ಫೋನ್ ನಲ್ಲಿ ಸಿಗಲಿವೆ. 

ಮುಂಭಾಗದಲ್ಲಿ 32 ಎಂಪಿ ಕ್ಯಾಮರಾವಿದ್ದು, 4 ಕೆ ವಿಡಿಯೋ ರೆಕಾರ್ಡಿಂಗ್ ಗೆ ಅನುಕೂಲಕರವಾಗಿದೆ. ಎಕ್ಸಿನೋಸ್ 9611 ಪ್ರೊಸೆಸರ್, 6 ಜಿಬಿ RAM 128 ಜಿಬಿ ಸ್ಟೋರೇಜ್, 512 ಜಿಬಿ ವರೆಗೆ ವಿಸ್ತರಿಸಬಹುದಾದ ಸಾಮರ್ಥ್ಯವನ್ನು ಈ ಮೊಬೈಲ್ ಹೊಂದಿದೆ. 

Stay up to date on all the latest ವಾಣಿಜ್ಯ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp