ಪಿಎನ್‌ಬಿ ಹಗರಣ: ಯುಕೆ ನ್ಯಾಯಾಲಯದಲ್ಲಿ ನೀರವ್ ಮೋದಿ ಜಾಮೀನು ಅರ್ಜಿ ವಜಾ

ಪರಾರಿಯಾಗಿರುವ ವಜ್ರದ ವ್ಯಾಪಾರಿ  ನೀರವ್ ಮೋದಿಗೆ ಯುಕೆ ನ್ಯಾಯಾಲಯದಲ್ಲಿ ದೊಡ್ಡ ಹಿನ್ನೆಡೆಯಾಗಿದೆ. ಯುಕೆ ನ್ಯಾಯಾಲಯ ಸೋಮವಾರ ಮೋದಿಯ ಜಾಮೀನು ಅರ್ಜಿಯನ್ನು ಮತ್ತೊಮ್ಮೆ ತಿರಸ್ಕರಿಸಿದೆ.

Published: 26th October 2020 07:17 PM  |   Last Updated: 26th October 2020 07:17 PM   |  A+A-


ನೀರವ್ ಮೋದಿ

Posted By : Raghavendra Adiga
Source : Online Desk

ಲಂಡನ್: ಪರಾರಿಯಾಗಿರುವ ವಜ್ರದ ವ್ಯಾಪಾರಿ  ನೀರವ್ ಮೋದಿಗೆ ಯುಕೆ ನ್ಯಾಯಾಲಯದಲ್ಲಿ ದೊಡ್ಡ ಹಿನ್ನೆಡೆಯಾಗಿದೆ. ಯುಕೆ ನ್ಯಾಯಾಲಯ ಸೋಮವಾರ ಮೋದಿಯ ಜಾಮೀನು ಅರ್ಜಿಯನ್ನು ಮತ್ತೊಮ್ಮೆ ತಿರಸ್ಕರಿಸಿದೆ.

ಈ ತಿಂಗಳ ಆರಂಭದಲ್ಲಿ, ಯುಕೆ ನ್ಯಾಯಾಲಯವು ಪ್ರಸ್ತುತ ನಡೆಯುತ್ತಿರುವ ಹಸ್ತಾಂತರ ಸಂಬಂಧ ವಿಚಾರಣೆಯಲ್ಲಿ ಮುಂದಿನ ನಿಗದಿತ ವಿಚಾರಣೆಯವರೆಗೆ ನೀರವ್ ಮೋದಿಯ  ರಿಮಾಂಡ್ ಅನ್ನು ವಿಸ್ತರಿಸಿ ಆದೇಶಿಸಿತ್ತು.

ಕಳೆದ ತಿಂಗಳು, ಮೋದಿ ಕಾನೂನು ಸಲಹೆಗಾರ ಯುಕೆ ನ್ಯಾಯಾಲಯಕ್ಕೆ ತಿಳಿಸಿದಂತೆ  ನೀರವ್ ಮೋದಿ ಭಾರತದಲ್ಲಿ ನ್ಯಾಯಯುತ ವಿಚಾರಣೆಯನ್ನು ಎದುರಿಸುವ ಸಾಧ್ಯತೆ ಇಲ್ಲ ಅವರ ಪ್ರಕರಣದ ರಾಜಕೀಯ ಸ್ವರೂಪ ಪಡೆಯಬಹುದು, ಮತ್ತು ಭಾರತೀಯ ಕಾರಾಗೃಹಗಳಲ್ಲಿ ಸಾಕಷ್ಟು ವೈದ್ಯಕೀಯ ಸೌಲಭ್ಯಗಳ ಕೊರತೆ ಇದ್ದು  ಅವರು "ಆತ್ಮಹತ್ಯೆಯ ಅಪಾಯ" ವನ್ನು ಎದುರಿಸುತ್ತಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿಅಂದಾಜು 2 ಬಿಲಿಯನ್ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪದ ಮೇಲೆ 49 ವರ್ಷದ ವಜ್ರದ ವ್ಯಾಪಾರಿ  ಭಾರತಕ್ಕೆ ಬೇಕಾಗಿರುವವನಾಗಿದ್ದಾರೆ. 
 

Stay up to date on all the latest ವಾಣಿಜ್ಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp