ಹಬ್ಬಕ್ಕಾಗಿ ಚಿನ್ನ ಖರೀದಿಸುತ್ತಿದ್ದೀರಾ? ಈ ಸಲಹೆಗಳನ್ನು ನೆನಪಿನಲ್ಲಿಡಿ!

ಹಬ್ಬದ ಸಂದರ್ಭದಲ್ಲಿ ನೀವು ಚಿನ್ನ ಖರೀದಿಸಲು ಯೋಚಿಸಿದ್ದರೆ ಕೆಲವೊಂದು ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ತಜ್ಞರು ಹೇಳುತ್ತಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಹಬ್ಬದ ಸಂದರ್ಭದಲ್ಲಿ ಚಿನ್ನದ ಕಡೆಗೆ ಭಾರತೀಯರು ಆಕರ್ಷಿತರಾಗುವುದು ಸಾಮಾನ್ಯ. ಅನೇಕ ಜನರು ಹಳದಿ ಲೋಹವನ್ನು ಕೊಳ್ಳಲು ಬಯಸುತ್ತಾರೆ.  

ಕೋವಿಡ್-19 ಸಾಂಕ್ರಾಮಿಕ ರೋಗವು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವವರಿಗೆ ಅಷ್ಟಾಗಿ ಅಡ್ಡಿಪಡಿಸಿಲ್ಲ. ಅನೇಕ ಅಭರಣ ಮಾರಾಟಗಾರರು ಕೋವಿಡ್- ಪೂರ್ವ ಮಾರಾಟದ ಅಂಕಿಅಂಶಗಳನ್ನು ಉಲ್ಲಂಘಿಸಲು ಪ್ರಾರಂಭಿಸಿದ್ದಾರೆ ಎಂದು ಉದ್ಯಮದ ತಜ್ಞರು ಹೇಳುತ್ತಾರೆ.

ಹಬ್ಬದ ಸಂದರ್ಭದಲ್ಲಿ ನೀವು ಚಿನ್ನ ಖರೀದಿಸಲು ಯೋಚಿಸಿದ್ದರೆ ಕೆಲವೊಂದು ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ತಜ್ಞರು ಹೇಳುತ್ತಾರೆ.

* ಶುದ್ಧತೆ: ಹಾಲ್ ಮಾರ್ಕ್  ಮತ್ತು ಬಿಐಎಸ್ ಪ್ರಮಾಣೀಕೃತ ಆಭರಣಗಳನ್ನು ಖರೀದಿಸುವುದು ಯಾವಾಗಲೂ ಉತ್ತಮ. ಪ್ರಮಾಣೀಕರಣ ಹೊಂದಿರದ ಚಿನ್ನವು ಉತ್ತಮ ವ್ಯವಹಾರವಲ್ಲ.

* ಮೇಕಿಂಗ್ ಚಾರ್ಚ್ ಮತ್ತಿತರ ಶುಲ್ಕಗಳು:  ನೀವು ಅಭರಣಗಳನ್ನು ಕೊಂಡಾಗ ಮೇಕಿಂಗ್ ಚಾರ್ಜ್ ಅಥವಾ ಚಿನ್ನದ ಜೊತೆಗಿನ ವೆಸ್ಟೆಜ್ ಶುಲ್ಕ ಪಾವತಿಸಬೇಕಾಗುತ್ತದೆ. ಪ್ರಸ್ತುತ ಚಿನ್ನದ ಶೇಕಡಾವಾರು ಬೆಲೆಯ ಮೇಲೆ ಸಾಮಾನ್ಯವಾಗಿ ಮೇಕಿಂಗ್ ಚಾರ್ಜ್ ವಿಧಿಸಲಾಗುತ್ತದೆ. ಆದಾಗ್ಯೂ,  ಕ್ಲಾಸಿಕ್ ಮತ್ತು ಸರಳವಾದ ತುಣುಕುಗಳನ್ನು ಆಯ್ಕೆ ಮಾಡಲು ತಜ್ಞರು ನಿಮಗೆ ಸಲಹೆ ನೀಡುತ್ತಾರೆ.

* ಪಾರದರ್ಶಕತೆ: ಚಿನ್ನವನ್ನು ಖರೀದಿಸುವಾಗ ಯಾವಾಗಲು ಪಾರದರ್ಶಕತೆಯನ್ನು  ಕಾಯ್ದುಕೊಳ್ಳಲು ಬಿಲ್ ನೊಂದಿಗೆ ವ್ಯವಹಾರದ ಬಗ್ಗೆಗಿನ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಒಂದು ವೇಳೆ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದರೆ ಸಂಬಂಧಿತ ಸಂಸ್ಥೆಯನ್ನು ಪ್ರಶ್ನಿಸಲು ಇದರಿಂದ ನೆರವಾಗಲಿದೆ.

* ಮರುಖರೀದಿ ನಿಯಮಗಳನ್ನು ಪರಿಶೀಲಿಸಿ: ಹೆಚ್ಚಿನ ಆಭರಣಕಾರರು ಮರುಖರೀದಿಯ ಆಯ್ಕೆಯನ್ನು ನೀಡುತ್ತಾರೆ. ಇದರಲ್ಲಿ ಹಳೆಯ ಅಭರಣಗಳಿಂದ ಹೊಸದೊಂದು ವಿನಿಮಯ ಮಾಡಿಕೊಳ್ಳಬಹುದು. ಮರು ಖರೀದಿ ನಿಯಮಗಳನ್ನು ಯಾವಾಗಲು ಪರಿಶೀಲಿಸುವುದರಿಂದ ಕೆಲ ವರ್ಷಗಳು ಆಗಿರುವ ಅಭರಣಗಳನ್ನು ಬದಲಾಯಿಸುವ ಅವಕಾಶ ಸಿಗಲಿದೆ. 

* ಮತ್ತೊಂದು ಪ್ರಮುಖವಾದ ಸಂಗತಿ ಎಂದರೆ ಒಂದು ವೇಳೆ ಹೂಡಿಕೆಗಾಗಿಯೇ ಚಿನ್ನ ಖರೀದಿಸಿದರೆ, ಗೋಲ್ಡ್ ಮ್ಯೂಚಲ್ ಫಂಡ್ಸ್, ಚಿನ್ನದ ವಿನಿಮಯ ವಹಿವಾಟು ನಿಧಿಗಳು ಅಥವಾ ಸವರಿನ್ ಗೋಲ್ಡ್ ಬಾಂಡ್ ಗಳ ಕಡೆಗೆ ಗಮನಹರಿಸಬೇಕಾಗುತ್ತದೆ. ಏಕೆಂದರೆ ಒಟ್ಟು ಹೂಡಿಕೆ ಮಾಡಿದ ಬಂಡವಾಳದ ಮೇಲೆ ನೀವು ಶೇಕಡಾ 2.5 ರಷ್ಟು ವಾರ್ಷಿಕ ಬಡ್ಡಿಯನ್ನು ಪಡೆಯಬಹುದು.
ಬಂಡವಾಳ ಲಾಭಗಳು ಎಂಟು ವರ್ಷಗಳ ಕಾಲ ನಡೆದರೆ ತೆರಿಗೆ ವಿನಾಯಿತಿ ಇರುವುದರಿಂದ ಅವು ಹೆಚ್ಚು ತೆರಿಗೆ ದಕ್ಷತೆಯನ್ನು ಹೊಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com