ಭಾರತದ ಜಿಡಿಪಿಯಲ್ಲಿನ ಕುಸಿತ ಎಚ್ಚರಿಕೆಯ ಕರೆಗಂಟೆ: ರಘುರಾಮ್ ರಾಜನ್

ಜೂನ್ ಗೆ ಅಂತ್ಯವಾದ  ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯಲ್ಲಿ ಶೇ 23.9 ರಷ್ಟು ಕುಸಿತ ಕಂಡಿರುವುದು ಎಚ್ಚರಿಕೆಯ ಕರೆಗಂಟೆ ಎಂದು ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ, ಅಧಿಕಾರದಲ್ಲಿದ್ದವರು ನಿದ್ರೆಯಿಂಡ ಹೊರಬಂದು ಅರ್ಥಪೂರ್ಣ ಕ್ರಮ ತೆಗೆದುಕೊಳ್ಳಬೇಕು. ಪ್ರಸ್ತುತ ಬಿಕ್ಕಟ್ಟಿಗೆ ಹೆಚ್ಚು ಚಿಂತನಶೀಲ ಮತ್ತು ಕ್ರಿಯಾಶೀಲ ಸರ್ಕಾರಿ ನೀತಿ  ಅ

Published: 07th September 2020 03:18 PM  |   Last Updated: 07th September 2020 03:18 PM   |  A+A-


ರಘುರಾಮ್ ರಾಜನ್

Posted By : Raghavendra Adiga
Source : PTI

ನವದೆಹಲಿ: ಜೂನ್ ಗೆ ಅಂತ್ಯವಾದ  ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯಲ್ಲಿ ಶೇ 23.9 ರಷ್ಟು ಕುಸಿತ ಕಂಡಿರುವುದು ಎಚ್ಚರಿಕೆಯ ಕರೆಗಂಟೆ ಎಂದು ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ, ಅಧಿಕಾರದಲ್ಲಿದ್ದವರು ನಿದ್ರೆಯಿಂಡ ಹೊರಬಂದು ಅರ್ಥಪೂರ್ಣ ಕ್ರಮ ತೆಗೆದುಕೊಳ್ಳಬೇಕು. ಪ್ರಸ್ತುತ ಬಿಕ್ಕಟ್ಟಿಗೆ ಹೆಚ್ಚು ಚಿಂತನಶೀಲ ಮತ್ತು ಕ್ರಿಯಾಶೀಲ ಸರ್ಕಾರಿ ನೀತಿ  ಅಗತ್ಯವಿದೆ, ದುರದೃಷ್ಟವಶಾತ್, ಆರಂಭಿಕ ಚಟುವಟಿಕೆಯ ಅತಿರೇಕದ ನಂತರ ಅದು ಚಿಪ್ಪಿನೊಳಗೆ ಅಡಗಿರುವಂತೆ ಕಾಣುತ್ತಿದೆ. "ಆರ್ಥಿಕ ಬೆಳವಣಿಗೆಯ ತೀವ್ರ ಕುಸಿತವು ನಮ್ಮೆಲ್ಲರಿಗೆ ಎಚ್ಚರಿಕೆ. ಭಾರತದಲ್ಲಿ ಶೇಕಡಾ 23.9 ರಷ್ಟು ಸಂಕೋಚನ (ಮತ್ತು ಅನೌಪಚಾರಿಕ ವಲಯದಲ್ಲಿನ ಹಾನಿಯ ಅಂದಾಜುಗಳನ್ನು ನಾವು ಪಡೆದಾಗ ಸಂಖ್ಯೆಗಳುಇನ್ನಷ್ಟು ಕೆಟ್ಟದಾಗಿರಲಿದೆ. ) ಇಟಲಿಯಲ್ಲಿ ಶೇಕಡಾ 12.4 ರಷ್ಟು ಕುಸಿತದೊಂದಿಗೆ ಹೋಲಿಸುತ್ತೇನೆ.  ಯುನೈಟೆಡ್ ಸ್ಟೇಟ್ಸ್ ನಲ್ಲಿ ಶೇಕಡಾ 9.5 ರಷ್ಟು ಕುಸಿತ ದಾಖಲಾಗಿದೆ. ಆ ಎರಡೂ ಕೋವಿಡ್ -19 ಪೀಡಿತ ಮುಂದುವರಿದ ರಾಷ್ಟ್ರಗಳು." ರಾಜನ್ ತಮ್ಮ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

"ಭೀಕರವಾದ ಜಿಡಿಪಿ ಕುಸಿತದಲ್ಲಿ ಚಿಕ್ಕ ಬೆಳ್ಳಿ ಗೆರೆ ಮೂಡಿದ್ದರೆ ಅದು ಆಶಾದಾಯಕವಾಗಿದೆ"ಪ್ರಸ್ತುತ ಚಿಕಾಗೊ ವಿಶ್ವವಿದ್ಯಾಲಯದ ಪ್ರಾದ್ಯಾಪಕರಾಗಿರುವ ರಾಜನ್ ಹೇಳಿದ್ದಾರೆ. ಕೋವಿಡ್ -19 ಸಾಂಕ್ರಾಮಿಕವು ಭಾರತದಲ್ಲಿ ಇನ್ನೂ ಉಲ್ಬಣಗೊಳ್ಳುತ್ತಿದೆ, ಆದ್ದರಿಂದ ವಿವೇಚನೆಯ ಖರ್ಚು, ವಿಶೇಷವಾಗಿ ಹೆಚ್ಚಿನ ವೈರಸ್  ಇರುವವರೆಗೂ ರೆಸ್ಟೋರೆಂಟ್‌ಗಳಂತಹ ಸಂಪರ್ಕ ಸೇವೆಗಳು ಮತ್ತು ಅದಕ್ಕೆ ಸಂಬಂಧಿಸಿದ ಉದ್ಯೋಗಗಳು ಕಡಿಮೆ ಇರಲಿದೆ. ಸರ್ಕಾರ ಹೆಚ್ಚಿನ ನೆರವನ್ನು ನೀಡಲು ಹಿಂಜರಿಯುತ್ತಿದೆ. ಏಕೆಂದರೆ ಅದು ಭವಿಷ್ಯದ ಖರ್ಚಿಗಾಗಿ ಸಂಪನ್ಮೂಲಗಳನ್ನು ಸಂರಕ್ಷಿಸಲು ಬಯಸಿದೆ. "ಈ ತಂತ್ರ ಸ್ವಯಂ ಸೋಲಿಗೆ ಕಾರಣವಾಗುತ್ತದೆ" ಅವರು ವಿಶ್ಲೇಷಿಸಿದ್ದಾರೆ. 

ಆರ್ಥಿಕತೆಯನ್ನು ಒಬ್ಬ ರೋಗಿ ಎಂದು ಪರಿಗಣಿಸಿದ್ದರೆ ರೋಗಿಯು ಹಾಸಿಗೆಯ ಮೇಲೆ ಇರುವಾಗ ಮತ್ತು ರೋಗದ ವಿರುದ್ಧ ಹೋರಾಡುವಾಗ ರೋಗಿಗೆ ಅಗತ್ಯವಿರುವ ಆಹಾರ ಒದಗಿಸಲೇಬೇಕು. "ಪರಿಹಾರವಿಲ್ಲದೆ, ಮನೆಯವರು ಊಟವನ್ನು ತಪ್ಪಿಸಿದರೆ ಮಕ್ಕಳನ್ನು ಶಾಲೆಯಿಂದ ಬಿಡಿಸಿ  ಕೆಲಸಕ್ಕೆ ಅಥವಾ ಭಿಕ್ಷೆ ಬೇಡಲು ಕಳುಹಿದರೆ ತಮ್ಮ ಚಿನ್ನವನ್ನು ಎರವಲು ಇಡಲು ಬಯಸಿದರೆ ಇಎಂಐಗಳು ಮತ್ತು ಬಾಡಿಗೆ ಬಾಕಿಗಳನ್ನು ಸಂಗ್ರಹಿಸಿದ್ದಾರೆಇದು ಮೂಲಭೂತವಾಗಿ, ರೋಗಿಯ ಕ್ಷೀಣತೆಗೆ ಕಾರಣವಾಗಲಿದೆ. " 

"ರೋಗವು ನಾಶವಾದಾಗ, ರೋಗಿಯು ತನ್ನ ಕಾಯಿಲೆಯಿಂದ ವೇಗವಾಗಿ ಹೊರಬರಲು ಸಹಾಯ ಮಾಡುತ್ತದೆ. ಆದರೆ ರೋಗಿಯು ಕ್ಷೀಣಿಸುತ್ತಾ ಸಾಗಿದರೆ  ಆಗ ಹೊರಗಿನ ಪ್ರಚೋದನೆಯು ಕಡಿಮೆ ಪರಿಣಾಮ ಬೀರುತ್ತದೆ" ಆಟೋಮೊಬೈಲ್ ನಂತಹಾ  ಕ್ಷೇತ್ರಗಳಲ್ಲಿ ಇತ್ತೀಚಿನ ಪಿಕ್ ಅಪ್ ಬಹುನಿರೀಕ್ಷಿತ ಚೇತರಿಕೆಗೆ ಸಾಕ್ಷಿಯಲ್ಲ ಎಂದು ರಾಜನ್ ಒತ್ತಿ ಹೇಳಿದರು

"ಸಾಂಕ್ರಾಮಿಕ ಪೂರ್ವ ಬೆಳವಣಿಗೆಯ ಮಂದಗತಿ ಮತ್ತು ಸರ್ಕಾರದ ಹಣಕಾಸಿನ ಸ್ಥಿತಿಯ ಕಾರಣದಿಂದಾಗಿ, ಪರಿಹಾರ ಮತ್ತು ಉತ್ತೇಜನ ಎರಡಕ್ಕೂ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ನಂಬಿದ್ದಾರೆ. ಈ ಮನಸ್ಥಿತಿ ತುಂಬಾ ನಿರಾಶಾವಾದಿಯಾಗಿದೆ, ಆದರೆ ಸರ್ಕಾರವು ಸಂಪನ್ಮೂಲ ಹೊದಿಕೆಯನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ವಿಸ್ತರಿಸಬೇಕಾಗುತ್ತದೆ, ಮತ್ತು ಸಾಧ್ಯವಾದಷ್ಟು ಜಾಣತನದಿಂದ ಖರ್ಚು ಮಾಡಬೇಕಾಗುತ್ತದೆ" ಎಂದು ಅವರು ಹೇಳಿದರು  ಹೆಚ್ಚುವರಿ ಖರ್ಚಿಲ್ಲದೆ ಆರ್ಥಿಕತೆಯನ್ನು ಮುಂದೆ ಸಾಗಿಸುವ ಎಲ್ಲ ಕ್ರಮಗಳನ್ನು ಸಹ ಇಂದು ನಿರ್ಧರಿಸಬೇಕಿದೆ.  "ಇವೆಲ್ಲಕ್ಕೂ ಹೆಚ್ಚು ಚಿಂತನಶೀಲ ಮತ್ತು ಸಕ್ರಿಯ ಸರ್ಕಾರದ ಅಗತ್ಯವಿದೆ. ದುರದೃಷ್ಟವಶಾತ್, ಚಟುವಟಿಕೆಯ ಆರಂಭಿಕ ವೇಗದ ನಂತರ ಸರ್ಕಾರವೀಗ ಚಿಪ್ಪಿನೊಳಗೆ ಅಡಗಿರುವಂತಿದೆ. 

ದೇಶದ ಯುವಕರ ಆಕಾಂಕ್ಷೆಗಳನ್ನು ಪೂರೈಸಲು ಮಾತ್ರವಲ್ಲದೆ ತನ್ನ ಸ್ನೇಹಪರ ನೆರೆಹೊರೆಯವರನ್ನು ಉಳಿಸಿಕೊಳ್ಳಲು ಭಾರತಕ್ಕೆ ಬಲವಾದ ಬೆಳವಣಿಗೆಯ ಅಗತ್ಯವಿದೆ ಎಂದ ರಾಜನ್ ತಾತ್ಕಾಲಿಕ ಅರ್ಧಂಬರ್ಧ ಸುಧಾರಣೆಗಳು  ಒಂದು ರೀತಿಯ ಪ್ರಚೋದನೆಯಾಗಿರಬಹುದು ಮತ್ತು ತಕ್ಷಣ ಅದನ್ನು ಕೈಗೊಳ್ಳದಿದ್ದರೂ ಸಹ, ಅವುಗಳನ್ನು ಕೈಗೊಳ್ಳುವ ಸಮಯವು ಪ್ರಸ್ತುತ ಹೂಡಿಕೆದಾರರ ಮನೋಭಾವವನ್ನು ಹೆಚ್ಚಿಸುತ್ತದೆ ಎಂದು ಅವರು ಸಲಹೆ ನೀಡಿದರು.

"ವಿಶ್ವವು  ಭಾರತಕ್ಕಿಂತ ಮುಂಚೆಯೇ ಚೇತರಿಸಿಕೊಳ್ಳುತ್ತದೆ, ಆದ್ದರಿಂದ ರಫ್ತು ಹೆಚ್ಚಿಸಲು ಒಂದು ಮಾರ್ಗವಾಗಿದೆ" ಎಂದು ಅವರು ಹೇಳಿದರು ಕೊರೋನಾವೈರಸ್ ಮತ್ತು ನಂತರದ ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ರಾಷ್ಟ್ರದ  ಆರ್ಥಿಕ ಏರಿಳಿತಕ್ಕೆ ಸಹಾಯ ಮಾಡಲು  ಸರ್ಕಾರವು ಮೇ 21ರಂದು ಸುಮಾರು  21 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ. 

Stay up to date on all the latest ವಾಣಿಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp