ಪಿಎಂಜಿಕೆಪಿ ಅಡಿಯಲ್ಲಿ 42 ಕೋಟಿ ಬಡವರಿಗೆ 68,820 ಕೋಟಿ ರೂ ವಿತರಣೆ

1.70 ಲಕ್ಷ ಕೋಟಿ ರೂ.ಗಳ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆಪಿ) ಯ ಅಡಿಯಲ್ಲಿ , ಮಹಿಳೆಯರು ಮತ್ತು ಬಡ ಹಿರಿಯ ನಾಗರಿಕರು ಮತ್ತು ರೈತರಿಗೆ ಉಚಿತ ಆಹಾರ ಧಾನ್ಯಗಳು ಮತ್ತು ನಗದು ಪಾವತಿಯನ್ನು ಸರ್ಕಾರ  ಘೋಷಿಸಿದೆ. ಯೋಜನೆಯ ತ್ವರಿತ ಅನುಷ್ಠಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿದ್ದು  ಈ ಸಂಬಂಧ ಗಮನ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯದ
ಪಿಎಂಜಿಕೆಪಿ ಅಡಿಯಲ್ಲಿ 42 ಕೋಟಿ ಬಡವರಿಗೆ 68,820 ಕೋಟಿ ರೂ ವಿತರಣೆ

ನವದೆಹಲಿ: 1.70 ಲಕ್ಷ ಕೋಟಿ ರೂ.ಗಳ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆಪಿ) ಯ ಅಡಿಯಲ್ಲಿ , ಮಹಿಳೆಯರು ಮತ್ತು ಬಡ ಹಿರಿಯ ನಾಗರಿಕರು ಮತ್ತು ರೈತರಿಗೆ ಉಚಿತ ಆಹಾರ ಧಾನ್ಯಗಳು ಮತ್ತು ನಗದು ಪಾವತಿಯನ್ನು ಸರ್ಕಾರ  ಘೋಷಿಸಿದೆ. ಯೋಜನೆಯ ತ್ವರಿತ ಅನುಷ್ಠಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿದ್ದು  ಈ ಸಂಬಂಧ ಗಮನ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಸುಮಾರು 42 ಕೋಟಿ ಬಡವರಿಗೆ 68,820 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಮೊದಲ ಕಂತಿನ ಪಿಎಂ-ಕಿಸಾನ್ ಅನ್ನು 8.94 ಕೋಟಿ ಫಲಾನುಭವಿಗಳಿಗೆ   ಒಟ್ಟು 17,891 ಕೋಟಿ ರೂ. ಮೊತ್ತವನ್ನು ನೀಡುವ ಮೂಲಕ ಜಾರಿ ಮಾಡಲಾಗಿದೆ. 

10,325 ಕೋಟಿ ರೂ.ಗಳನ್ನು 20.65 ಕೋಟಿ (100 ಪ್ರತಿಶತ) ಮಹಿಳಾ ಜನ ಧನ್ ಖಾತೆದಾರರಿಗೆ ಮೊದಲ ಕಂತಿನಂತೆ ಜಮೆಯಾಗಿದೆ. ಇನ್ನು ಎರಡನೇ ಕಂತಿನೊಂದಿಗೆ 20.63 ಕೋಟಿ (ಶೇಕಡಾ 100) ಮಹಿಳಾ ಜನ ಧನ್ ಖಾತೆದಾರರಿಗೆ 10,315 ಕೋಟಿ ರೂ. ಮೂರನೇ ಕಂತಿನೊಂದಿಗೆ 20.62 ಕೋಟಿ (ಶೇಕಡಾ 100) ಮಹಿಳಾ ಜನ ಧನ್ ಖಾತೆದಾರರಿಗೆ 10,312 ಕೋಟಿ ರೂ. ಜಮೆ ಆಗಿದೆ

ವೃದ್ದರು, ವಿಧವೆಯರು ಮತ್ತು ಅಂಗವಿಕಲರಿಗೆ ಎರಡು ಕಂತುಗಳಲ್ಲಿ ಒಟ್ಟು 2,814.5 ಕೋಟಿ ರೂ. ಗಳನ್ನು 2.81 ಕೋಟಿ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ. ಅಲ್ಲದೆ 1.82 ಕೋಟಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ 4,987.18 ಕೋಟಿ ರೂ.ವಿತರಿಸಲಾಗಿದೆ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ, 37.52 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಆಹಾರ ಧಾನ್ಯಗಳನ್ನು ಏಪ್ರಿಲ್ ತಿಂಗಳಲ್ಲಿ 75.04 ಕೋಟಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಮೇನಲ್ಲಿ  74.92 ಕೋಟಿ ಫಲಾನುಭವಿಗಳಿಗೆ 37.46 ಎಲ್ಎಂಟಿ ಮತ್ತು ಜೂನ್ ನಲ್ಲಿ 73.24 ಕೋಟಿ ಫಲಾನುಭವಿಗಳಿಗೆ 36.62 ಎಲ್ಎಂಟಿ ವಿತರಣೆ ಆಗಿದೆ. ಈ ಯೋಜನೆಯನ್ನು ನವೆಂಬರ್ ವರೆಗೆ ವಿಸ್ತರಿಸಲಾಗಿದೆ. ಅಂದಿನಿಂದ, ಇದುವರೆಗೆ 98.31 ಎಲ್ಎಂಟಿ ಆಹಾರ ಧಾನ್ಯಗಳನ್ನುರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ವಿತರಿಸಿದೆ.  ಜುಲೈನಲ್ಲಿ, 36.09 ಎಲ್ಎಂಟಿ ಆಹಾರ ಧಾನ್ಯಗಳನ್ನು 72.18 ಕೋಟಿ ಫಲಾನುಭವಿಗಳಿಗೆ ವಿತರಿಸಲಾಗಿದ್ದು, ಆಗಸ್ಟ್ ನಲ್ಲಿ  60.44 ಕೋಟಿ ಫಲಾನುಭವಿಗಳಿಗೆ 30.22 ಎಲ್ಎಂಟಿ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. ಸೆಪ್ಟೆಂಬರ್ 7 ರವರೆಗೆ  3.84 ಕೋಟಿ ಫಲಾನುಭವಿಗಳಿಗೆ  1.92 ಎಲ್ಎಂಟಿ ಧಾನ್ಯ ವಿತರಣೆ ಆಗಿದೆ.

ಪ್ರಧಾನ್ ಮಂತ್ರಿ  ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ, ಏಪ್ರಿಲ್ ನಿಂದ ಜೂನ್ 2020 ರವರೆಗೆ ಒಟ್ಟು 5.43 ಎಲ್ಎಂಟಿ ದ್ವಿದಳ ಧಾನ್ಯಗಳನ್ನು 18.8 ಕೋಟಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಈ ಯೋಜನೆಯನ್ನು ಕಾಳುಗಳ ವಿತರಣೆಗಾಗಿ ನವೆಂಬರ್ ವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯಡಿ ಒಟ್ಟು 4.6 ಎಲ್‌ಎಂಟಿ ಕಾಳುಗಳನ್ನು ಇದುವರೆಗೆ ವಿತರಿಸಲಾಗಿದ್ದು ಜುಲೈನಲ್ಲಿ 1.03 ಎಲ್ಎಂಟಿ ಕಾಳನ್ನು  10.3 ಕೋಟಿ ಫಲಾನುಭವಿ ಕುಟುಂಬಗಳಿಗೆ ವಿತರಿಸಲಾಗಿದೆ, ಆಗಸ್ಟ್ ನಲ್ಲಿ  2.3 ಕೋಟಿ ಫಲಾನುಭವಿ ಕುಟುಂಬಗಳಿಗೆ 23,258 ಮೆ.ಟನ್ ಕಾಳು ವಿತರಣೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com