ರಿಲಯನ್ಸ್ ರಿಟೇಲ್ ನಲ್ಲಿ ಮತ್ತೆ ಹೂಡಿಕೆ ಮಾಡಲಿರುವ ಸಿಲ್ವರ್ ಲೇಕ್ ಕಂಪೆನಿ:7,500 ಕೋಟಿ ರೂ ಬಂಡವಾಳ

ಅಮೆರಿಕಾ ಮೂಲದ ಷೇರು ಸಂಸ್ಥೆ ಸಿಲ್ವರ್ ಲೇಕ್ ಪಾರ್ಟ್ನರ್ಸ್ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಶೇಕಡಾ 1.75ರಷ್ಟು ಷೇರನ್ನು ಖರೀದಿಸಿದೆ.
ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ

ನವದೆಹಲಿ: ಅಮೆರಿಕಾ ಮೂಲದ ಷೇರು ಸಂಸ್ಥೆ ಸಿಲ್ವರ್ ಲೇಕ್ ಪಾರ್ಟ್ನರ್ಸ್ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಶೇಕಡಾ 1.75ರಷ್ಟು ಷೇರನ್ನು ಖರೀದಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ರಿಲಯನ್ಸ್ ರಿಟೇಲ್ ವೆಂಚುರ್ಸ್ ಲಿಮಿಟೆಡ್(ಆರ್ ಆರ್ ವಿಎಲ್) ಈ ಬಗ್ಗೆ ಇಂದು ಅಧಿಕೃತವಾಗಿ ಘೋಷಿಸಿದ್ದು ಸಿಲ್ವರ್ ಲೇಕ್ ಕಂಪೆನಿ ಆರ್ ಆರ್ ವಿಎಲ್ ನಲ್ಲಿ 7,500 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಎಂದು ತಿಳಿಸಿದೆ.

ಸಿಲ್ವರ್ ಲೇಕ್ ನ ಹೂಡಿಕೆಯನ್ನು ಶೇಕಡಾ 1.75ಕ್ಕೆ ಪರಿವರ್ತಿಸಿ ಆರ್ ಆರ್ ವಿಎಲ್ ನಲ್ಲಿ ಸಂಪೂರ್ಣವಾಗಿ ಹೂಡಿಕೆ ಮಾಡಲಾಗುತ್ತದೆ. ಸಿಲ್ವರ್ ಲೇಕ್ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಹೂಡಿಕೆ ಮಾಡುತ್ತಿರುವುದು ಇದು ಎರಡನೇ ಬಾರಿ. ಮೂರು ತಿಂಗಳ ಹಿಂದೆ ಇದೇ ಕಂಪೆನಿ ರಿಲಯನ್ಸ್ ನ ಜಿಯೊ ಪ್ಲಾಟ್ ಫಾರ್ಮ್ ನಡಿ 1.35 ಶತಕೋಟಿ ಡಾಲರ್ ಹಣವನ್ನು ಹೂಡಿಕೆ ಮಾಡಿತ್ತು.

ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗಸಂಸ್ಥೆ ರಿಲಯನ್ಸ್ ರಿಟೇಲ್ ಲಿಮಿಟೆಡ್, ಭಾರತದ ಅತಿದೊಡ್ಡ, ಅತಿ ವೇಗವಾಗಿ ಸಾಗುತ್ತಿರುವ ಮತ್ತು ಅತಿ ಹೆಚ್ಚು ಲಾಭ ಗಳಿಸುತ್ತಿರುವ ರಿಟೈಲ್ ಉದ್ಯಮವಾಗಿದ್ದು ದೇಶಾದ್ಯಂತ ಸುಮಾರು 12 ಸಾವಿರ ಮಳಿಗೆಗಳನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com