200 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿದ ದೇಶದ ಮೊದಲ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್!
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ. 7ಕ್ಕೆ ಏರಿಕೆ ಕಂಡು, 200 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿದ ದೇಶದ ಮೊದಲ ಮೊದಲ ಕಂಪನಿಯಾಗಿ ಹೊಸ ಮೈಲುಗಲ್ಲು ಸಾಧಿಸಿದೆ.
Published: 10th September 2020 11:05 PM | Last Updated: 10th September 2020 11:07 PM | A+A A-

ಮುಕೇಶ್ ಅಂಬಾನಿ
ಮುಂಬೈ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ. 7ಕ್ಕೆ ಏರಿಕೆ ಕಂಡು, 200 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿದ ದೇಶದ ಮೊದಲ ಮೊದಲ ಕಂಪನಿಯಾಗಿ ಹೊಸ ಮೈಲುಗಲ್ಲು ಸಾಧಿಸಿದೆ.
ದೇಶಿಯ ಮಾರುಕಟ್ಟೆಯಲ್ಲಿ ದಿನದ ಅಂತ್ಯಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ 15, 84,908 ಕೋಟಿ ಗೆ ( 215.75 ಬಿಲಿಯನ್ ) ಏರಿಕೆ ಕಂಡಿದೆ. ದೇಶದ ಪ್ರಮುಖ ಸಂಸ್ಥೆಯಾಗಿರುವ ರಿಲಯನ್ಸ್ ಷೇರುಗಳು ಶೇ. 7. 10 ರಷ್ಟು ಏರಿಕೆಯೊಂದಿಗೆ 2,314.65ಕ್ಕೆ ವಹಿವಾಟು ಮುಗಿಸಿದವು.
ಇನ್ನೂ ನಿಫ್ಟಿ ಕೂಡಾ ಅತಿ ಹೆಚ್ಚು ಎನ್ನಬಹುದಾದ 2,344.95ಕ್ಕೆ ಏರಿಕೆಯೊಂದಿಗೆ ಶೇ.8.49ಕ್ಕೆ ಮುಟ್ಟಿದ ನಂತರ ಶೇ. 7.29 ರೊಂದಿಗೆ 2.319ರ ಸನ್ನಿಹದಲ್ಲಿ ವಹಿವಾಟು ಅಂತ್ಯಗೊಂಡಿತು.
ಇಂದು 15 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ದಾಟುವುದರೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಸೂಚ್ಯಂಕದಲ್ಲಿ ಪ್ರಾಬಲ್ಯ ಮೆರೆದಿದೆ ಎಂದು ಎಲ್ ಕೆಪಿ ಸೆಕ್ಯುರಿಟಿಸ್ ಸಂಶೋಧನಾ ವಿಭಾಗದ ಮುಖ್ಯಸ್ಥ ಎಸ್ . ರಘುನಾಥನ್ ಹೇಳಿದ್ದಾರೆ.