ಪುಟಿದೆದ್ದ ಸೆನ್ಸೆಕ್ಸ್: ಆರಂಭಿಕ ವಹಿವಾಟಿನಲ್ಲಿ 300 ಅಂಕ ಏರಿಕೆ

ಜಾಗತಿಕ ಮಾರುಕಟ್ಟೆಗಳ ಸದೃಢ ವಹಿವಾಟಿನ ನಡುವೆ ಎಲ್ಲ ವಲಯಗಳ ಸೂಚ್ಯಂಕಗಳ ಏರಿಕೆ ಕಾಣುವುದರೊಂದಿಗೆ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 323 ಅಂಕ ಏರಿಕೆ ಕಂಡು 38,516.88ರಲ್ಲಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಜಾಗತಿಕ ಮಾರುಕಟ್ಟೆಗಳ ಸದೃಢ ವಹಿವಾಟಿನ ನಡುವೆ ಎಲ್ಲ ವಲಯಗಳ ಸೂಚ್ಯಂಕಗಳ ಏರಿಕೆ ಕಾಣುವುದರೊಂದಿಗೆ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 323 ಅಂಕ ಏರಿಕೆ ಕಂಡು 38,516.88ರಲ್ಲಿತ್ತು.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 77 ಅಂಕ ಏರಿಕೆ ಕಂಡು 11,355.65ರಲ್ಲಿತ್ತು ವಲಯ ಸೂಚ್ಯಂಕಗಳಾದ, ಇಂಧನ, ಕೈಗಾರಿಕೆಗಳು, ಬಂಡವಾಳ ಸರಕು ಮತ್ತು ವಿದ್ಯುತ್‍ ಷೇರುಗಳು ಮಾರುಕಟ್ಟೆಯನ್ನು ಮೇಲಕ್ಕೆತ್ತಿವೆ.

ರಿಲಾಯನ್ಸ್ ಇಂಡಸ್ಟ್ರೀಸ್ ಷೇರುಗಳ ದಾಖಲೆಯ ಏರಿಕೆ: 

ರಿಲಾಯನ್ಸ್ ಇಂಡಸ್ಟ್ರೀಸ್ ನ ಷೇರುಗಳು 15 ಟ್ರಿಲಿಯನ್ ನ್ನು ದಾಟಿದೆ. 

ಬಿಎಸ್ಇ ನಲ್ಲಿ ಗುರುವಾರ ರಿಲಾಯನ್ಸ್ ನ ಷೇರುಗಳು ಶೇ.3 ರಷ್ಟು ಏರಿಕೆಯಾಗಿದ್ದು 2,218 ರೂಪಾಯಿಯಾಗಿದೆ. ಈ ಮೂಲಕ ರಿಲಾಯನ್ಸ್ ನ ಒಟ್ಟಾರೆ ಮಾರುಕಟ್ಟೆ ಬಂಡವಾಳ 15 ಟ್ರಿಲಿಯನ್ ನಷ್ಟಾಗಿದೆ. 2020 ಜುಲೈ 27 ರ ಇಂಟ್ರಾ ಡೇ ಟ್ರೇಡ್ ದಿನದಂದು ದಾಖಲಾಗಿದ್ದ 2,198 ರೂಪಾಯಿಗಳ ಷೇರು ಮೌಲ್ಯದ ದಾಖಲೆಯನ್ನು ರಿಲಾಯನ್ಸ್ ಈ ತಿಂಗಳಲ್ಲಿ ಮೀರಿದೆ. 

ಸಿಲ್ವರ್ ಲೇಕ್ ರಿಲಾಯನ್ಸ್ ನಲ್ಲಿ 7,500 ಕೋಟಿ ರೂಪಾಯಿ ಹೂಡಿಕೆ ಮಾಡುವುದಕ್ಕೆ ಒಪ್ಪಿದ ನಂತರ ಎರಡು ಟ್ರೇಡಿಂಗ್ ದಿನಗಳಲ್ಲಿ  ಸ್ಟಾಕ್ ಶೇ.5 ರಷ್ಟು ಏರಿಕೆ ಕಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com