ಸಾಲದ ಹೊಡೆತಕ್ಕೆ ಷೇರು ಮಾರಾಟಕ್ಕೆ ಮುಂದಾದ ಟಾಟಾ ಮೋಟಾರ್ಸ್!

ಸಾಲದ ಹೊಡೆತಕ್ಕೆ ಸಿಲುಕಿರುವ ಟಾಟಾ ಮೋಟಾರ್ಸ್ 68 ಸಾವಿರ ಕೋಟಿ ರುಪಾಯಿ ಸಾಲ ತೀರಿಸಲು ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. 
ರತನ್ ಟಾಟಾ
ರತನ್ ಟಾಟಾ

ಮುಂಬೈ: ಸಾಲದ ಹೊಡೆತಕ್ಕೆ ಸಿಲುಕಿರುವ ಟಾಟಾ ಮೋಟಾರ್ಸ್ 68 ಸಾವಿರ ಕೋಟಿ ರುಪಾಯಿ ಸಾಲ ತೀರಿಸಲು ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. 

ಟಾಟಾ ಟೆಕ್ನಾಲಜೀಸ್ ಲಿ. ಮತ್ತು ಟಾಟಾ ಹಿಟಾಚಿ ಕನ್ಸ್ ಟ್ರಕ್ಷನ್ ಮೆಷನರಿ ಕೊ. ಪ್ರೈ. ಲಿ.ನ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಮಾರ್ಚ್ ನಲ್ಲಿ ಟಾಟಾ ಮೋಟಾರ್ಸ್ ಸಾಲ 48 ಸಾವಿರ ಕೋಟಿ ಇತ್ತು.

ಆದರೆ ಕೊರೋನಾ ವೈರಸ್ ಬಿಕ್ಕಟ್ಟಿನ ಅವಧಿಯಲ್ಲಿ ದೊಡ್ಡ ಪ್ರಮಾಣದ ಹಣ ಖರ್ಚಾಗಿದ್ದು ಜುಲೈ ವೇಳೆಗೆ ಅದು 68 ಸಾವಿರ ಕೋಟಿ ರುಪಾಯಿಗೆ ತಲುಪಿತ್ತು. ಹೀಗಾಗಿ ಷೇರು ಮಾರಾಟಕ್ಕೆ ಮುಂದಾಗಿದೆ. 

ಈ ಷೇರು ಮಾರಾಟದ ಮೂಲಕ ಸಂಗ್ರಹವಾಗುವ ಹಣದಿಂದ ಸಾಲ ತೀರಿಸುವುದು ಕಂಪನಿಯ ಯೋಜನೆಯಾಗಿದೆ. ಬ್ರಿಟನ್ ನಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್ ಘಟಕವೂ ಸೇರಿ ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಜಾಗತಿಕ ವಾಹನ ಮಾರಾಟ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 64ರಷ್ಟು ಕುಸಿತವಾಗಿದ್ದು 91,594 ವಾಹನಗಳಿಗೆ ಇಳಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com