ಹರಿಯಾಣದ ಅಧಿಕಾರಿಗೆ ಒಲಿದ ವಿಶ್ವ ಬ್ಯಾಂಕ್ ಉನ್ನತ ಹುದ್ದೆ..!

ಹರಿಯಾಣದ ಮುಖ್ಯ ಕಾರ್ಯದರ್ಶಿಯಾಗಿರುವ ಹಿರಿಯ ಅಧಿಕಾರಿ ರಾಜೇಶ್ ಖುಲ್ಲರ್ ಅವರನ್ನು, ವಾಷಿಂಗ್ಟನ್ ನಲ್ಲಿರುವ ವಿಶ್ವ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ.
ರಾಜೇಶ್ ಖುಲ್ಲರ್
ರಾಜೇಶ್ ಖುಲ್ಲರ್

ನವದೆಹಲಿ: ಹರಿಯಾಣದ ಮುಖ್ಯ ಕಾರ್ಯದರ್ಶಿಯಾಗಿರುವ ಹಿರಿಯ ಅಧಿಕಾರಿ ರಾಜೇಶ್ ಖುಲ್ಲರ್ ಅವರನ್ನು , ವಾಷಿಂಗ್ಟನ್ ನಲ್ಲಿರುವ ವಿಶ್ವ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ.

ಕೇಂದ್ರ ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ಈ ಮಾಹಿತಿ ತಿಳಿಸಲಾಗಿದೆ. 1984 ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಖುಲ್ಲರ್ 1988ರ ತಂಡದ ಐಎಎಸ್ ಅಧಿಕಾರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಜಪಾನ್‌ನ ಟೋಕಿಯೊದ ನ್ಯಾಷನಲ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಫಾರ್ ಪಾಲಿಸಿ ಸ್ಟಡೀಸ್ (ಜಿಆರ್‍ಪಿಎಸ್) ನಿಂದ ಮಾಸ್ಟರ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಪದವಿ ಗಳಿಸಿದ್ದಾರೆ. ವಿಶ್ವಬ್ಯಾಂಕಿನಲ್ಲಿ 2023, ಆ.31ರ ವರೆಗೆ ಅವರ ಅಧಿಕಾರಾವಧಿಯಿರಲಿದೆ.

ಖುಲ್ಲರ್ ಅವರನ್ನು ಫೆಬ್ರವರಿ 2011 ರಲ್ಲಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಯಿತು ಖುಲ್ಲರ್ ಅವರು ವೈರಲ್ ಮ್ಯಾಚ್‌ನ ಲೇಖಕರಾಗಿದ್ದಾರೆ, ‘ಭಾರತದ ಮೊದಲ ವೈದ್ಯಕೀಯ ಥ್ರಿಲ್ಲರ್ ಎಚ್‌ಐವಿ’. 2007 ರಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಬೆಂಗಳೂರು ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಈ ಪುಸ್ತಕವನ್ನು ಭಾರತೀಯ ಕ್ರಿಕೆಟ್ ತಂಡ ಬಿಡುಗಡೆ ಮಾಡಿತು.

ಸಿಬ್ಬಂದಿ ಸಚಿವಾಲಯದ ಇನ್ನೊಂದು ಆದೇಶದಲ್ಲಿ, ಮನಿಲಾದಲ್ಲಿರುವ ಏಷ್ಯಾ ಅಭಿವೃದ್ಧಿ ಬ್ಯಾಂಕ್ ನ (ಎಡಿಬಿ) ಕಾರ್ಯ ನಿರ್ವಾಹಕ ನಿರ್ದೇಶಕರನ್ನಾಗಿ ಸಮೀರ್ ಕುಮಾರ್ ಖರೆಯನ್ನು ನೇಮಿಸಲಾಗಿದೆ ಎಂದು ತಿಳಿಸಲಾಗಿದೆ. ಇವರ ಅಧಿಕಾರಾವಧಿಯೂ ಮೂರು ವರ್ಷವಾಗಿರುತ್ತದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com