ಎಸ್ ಬಿಐ ಗ್ರಾಹಕರೆ ಗಮನಿಸಿ 18 ರಿಂದ ವಿತ್ ಡ್ರಾಗೆ ಹೊಸ ನಿಯಮ

ದೇಶದ  ಅತಿದೊಡ್ಡ ಬ್ಯಾಂಕ್ ಜಾಲ ಹೊಂದಿರುವ ಎಸ್ ಬಿಐ ದೇಶದ ಎಲ್ಲಾ  ಎಟಿಎಂಗಳಲ್ಲಿ ಒಟಿಪಿ ಆಧಾರಿತ ನಗದು ಹಿಂಪಡೆಯುವಿಕೆ ಹೊಸ ಪದ್ದತಿ, ನಿಯಮ ಇದೇ  18 ರಿಂದ ಜಾರಿಗೆ ಬರಲಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಜಾಲ ಹೊಂದಿರುವ ಎಸ್ ಬಿಐ ದೇಶದ ಎಲ್ಲಾ ಎಟಿಎಂಗಳಲ್ಲಿ ಒಟಿಪಿ ಆಧಾರಿತ ನಗದು ಹಿಂಪಡೆಯುವಿಕೆ ಹೊಸ ಪದ್ದತಿ, ನಿಯಮ ಇದೇ 18 ರಿಂದ ಜಾರಿಗೆ ಬರಲಿದೆ. 

10 ಸಾವಿರ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಇದನ್ನು ವಿಸ್ತರಿಸಲಾಗುತ್ತಿದೆ ಎಸ್ಬಿಐ ಡೆಬಿಟ್ ಕಾರ್ಡ್ ಹೊಂದಿರುವವರು 10,000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಹಣ ಹಿಂಪಡೆಯಲು ಡೆಬಿಟ್ ಕಾರ್ಡ್ ಪಿನ್ನೊಂದಿಗೆ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಒಟಿಪಿಯನ್ನ ಇನ್ನು ಮುಂದೆ  ಪ್ರತಿ ಬಾರಿ ನಮೂದಿಸಬೇಕಾಗುತ್ತದೆ. 

ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಪರಿಚಯಿಸುವುದರೊಂದಿಗೆ, ಎಸ್ಬಿಐ ಎಟಿಎಂ ನಗದು ಹಿಂಪಡೆಯುವಿಕೆಯಲ್ಲಿ ಭದ್ರತಾ, ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಿದೆ. ದಿನವಿಡೀ ಈ ಸೌಲಭ್ಯವನ್ನು ಜಾರಿಗೊಳಿಸುವುದರಿಂದ ಎಸ್ ಬಿಐ  ಡೆಬಿಟ್ ಕಾರ್ಡ್ದಾರರು ವಂಚಕರಿಗೆ ಬಲಿಯಾಗುವ ಅಪಾಯ  ತಪ್ಪಿಸಬಹುದಾಗಿದೆ ಎಂದು  ಬ್ಯಾಂಕ್  ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರೀಯ ಹಣಕಾಸು ಸ್ವಿಚ್ (ಎನ್ಎಫ್ಎಸ್) ಎಸ್ಬಿಐ ಅಲ್ಲದ ಎಟಿಎಂಗಳಲ್ಲಿ ಈ ಕಾರ್ಯವನ್ನು ಅಭಿವೃದ್ಧಿಪಡಿಸಿಲ್ಲ. ಹಾಗಾಗಿ ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ಸೌಲಭ್ಯವು ಎಸ್ಬಿಐ ಎಟಿಎಂಗಳಲ್ಲಿ ಮಾತ್ರ ಲಭ್ಯವಿರಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com