ಉಚಿತವಾಗಿ ಐಪಿಎಲ್‌ ನೋಡಲು ಜಿಯೋ ಧನ್ ಧನಾ ಧನ್ ಕೊಡುಗೆ!

ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯನ್ನು ಜಿಯೋ ನೀಡಿದೆ. ಜಿಯೋ ಈ ಬಾರಿಯ ಐಪಿಎಲ್ ಅನ್ನು ಹೆಚ್ಚು ಆನಂದದಾಯಕವಾಗಿಸಲು ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. 

Published: 16th September 2020 04:01 PM  |   Last Updated: 16th September 2020 04:01 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : UNI

ಮುಂಬೈ: ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿಯನ್ನು ಜಿಯೋ ನೀಡಿದೆ. ಜಿಯೋ ಈ ಬಾರಿಯ ಐಪಿಎಲ್ ಅನ್ನು ಹೆಚ್ಚು ಆನಂದದಾಯಕವಾಗಿಸಲು ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. 

ಜಿಯೋ ಕ್ರಿಕೆಟ್ ಯೋಜನೆಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ವಿಐಪಿ ಒಂದು ವರ್ಷದ ಚಂದಾದಾರಿಕೆಯೊಂದಿಗೆ ಡೇಟಾ, ವಾಯ್ಸ್ ಮತ್ತು ಎಸ್‌ಎಂಎಸ್‌ ಲಾಭಗಳನ್ನು ಪಡೆಯಬಹುದಾಗಿದೆ.

ಲೈವ್ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಸಬ್‌ಸ್ಕ್ರಿಪ್ಷನ್‌ನೊಂದಿಗೆ ಲೈವ್ ಐಪಿಎಲ್ ಮ್ಯಾಚ್‌ಗಳನ್ನು ವೀಕ್ಷಿಸಲು ಹೊಸ ಹೊಸ ಟ್ಯಾರಿಫ್ ಯೋಜನೆಗಳನ್ನು ಪ್ರಾರಂಭಿಸುತ್ತಿದೆ. ಇದರಲ್ಲಿ 1 ತಿಂಗಳು, 2 ತಿಂಗಳುಗಳು, 3 ತಿಂಗಳುಗಳು ಮತ್ತು 1 ವರ್ಷದ ಮಾನ್ಯತೆಯನ್ನು ಒಳಗೊಂಡಿರುವ ಪ್ರಿಪೇಯ್ಡ್ ಯೋಜನೆಗಳು ಲಭ್ಯವಿದ್ದು, ಇದರೊಂದಿಗೆ ವಿಶೇಷ ಡೇಟಾ ಲಾಭಗಳು ದೊರೆಯಲಿದೆ.

ಕ್ರಿಕೆಟ್ ಸೀಸನ್‌ಗಾಗಿ ಜಿಯೋ ಅನೇಕ ಯೋಜನೆಗಳನ್ನು ಪ್ರಕಟಿಸಿದೆ. JIO CRICKET PLAN ಡೇಟಾ, ವಾಯ್ಸ್ ಮತ್ತು ಎಸ್‌ಎಂಎಸ್‌ ಲಾಭಗಳೊಂದಿಗೆ ತಿಂಗಳಿಗೆ 401 ರೂಪಾಯಿ ರಿಚಾರ್ಜ್ ಮಾಡಿದರೆ 3 ಜಿಬಿ ಡೇಟಾ ಮೌಲ್ಯದ  1 ವರ್ಷದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯನ್ನು ನೀಡಲಿದೆ. 

2 ತಿಂಗಳಿಗೆ 598 ರೂಪಾಯಿ ರಿಚಾರ್ಜ್ ಮಾಡಿದರೆ 2 ಜಿಬಿ ಡೇಟಾ ವಾಯ್ಸ್ ಮತ್ತು ಎಸ್‌ಎಂಎಸ್‌ ಲಾಭಗಳೊಂದಿಗೆ 1 ವರ್ಷದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯನ್ನು ನೀಡಲಿದೆ. 

ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಐಪಿಎಲ್ ಟೂರ್ನಿ ಆರಂಭವಾಗಲಿದೆ. 54 ದಿನಗಳ ಕಾಲ ಟೂರ್ನಿ ನಡೆಯಲಿದೆ. 

Stay up to date on all the latest ವಾಣಿಜ್ಯ news
Poll
Parliament_House1

ಕೋವಿಡ್-19 ಹರಡುವಿಕೆ ಕಾರಣ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp