ಭಾರತದ 1,600 ಕ್ಕೂ ಹೆಚ್ಚು ಕಂಪನಿಗಳಿಗೆ ಚೀನಾದಿಂದ 1 ಬಿಲಿಯನ್ ಡಾಲರ್ ಹಣ!

ಭಾರತದ 1,600 ಕ್ಕೂ ಹೆಚ್ಚು ಕಂಪನಿಗಳಿಗೆ ಚೀನಾದಿಂದ 1 ಬಿಲಿಯನ್ ಡಾಲರ್ ಹಣ ಬಂದಿದೆ ಎಂದು ಸರ್ಕಾರದ ಅಧಿಕೃತ ಅಂಕಿ-ಅಂಶಗಳಿಂದ ತಿಳಿದುಬಂದಿದೆ. 
ಚೀನಾ
ಚೀನಾ

ನವದೆಹಲಿ: ಭಾರತದ 1,600 ಕ್ಕೂ ಹೆಚ್ಚು ಕಂಪನಿಗಳಿಗೆ ಚೀನಾದಿಂದ 1 ಬಿಲಿಯನ್ ಡಾಲರ್ ಹಣ ಬಂದಿದೆ ಎಂದು ಸರ್ಕಾರದ ಅಧಿಕೃತ ಅಂಕಿ-ಅಂಶಗಳಿಂದ ತಿಳಿದುಬಂದಿದೆ. 

2016 ರ ಏಪ್ರಿಲ್ ನಿಂದ ಮಾರ್ಚ್ 2020 ರ ಅವಧಿಯಲ್ಲಿ 46 ಕ್ಷೇತ್ರಗಳಲ್ಲಿನ ವಿವಿಧ ಕಂಪನಿಗಳಿಗೆ, ಪ್ರಮುಖವಾಗಿ ಸ್ಟಾರ್ಟ್ ಅಪ್ ಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟು ಮೊತ್ತ ಚೀನಾದ ವಿದೇಶಿ ನೇರ ಬಂಡವಾಳ ಹೂಡಿಕೆಯ ರೂಪದಲ್ಲಿ ಬಂದಿದೆ ಎಂದು ರಾಜ್ಯಸಭೆಯಲ್ಲಿ ಸರ್ಕಾರ ಲಿಖಿತ ಉತ್ತರ ನೀಡಿದೆ. 

ಆಟೋಮೊಬೈಲ್ ಕ್ಷೇತ್ರ, ಪುಸ್ತಕ ಮುದ್ರಣ, ಎಲೆಕ್ಟ್ರಾನಿಕ್ಸ್, ಸೇವೆಗಳು ಹಾಗೂ ಎಲೆಕ್ಟ್ರಿಕಲ್   ಉಪಕರಣ ಕ್ಷೇತ್ರಗಳಲ್ಲಿ 100 ಮಿಲಿಯನ್ ಡಾಲರ್ ಗೂ ಅಧಿಕ ಎಫ್ ಡಿಐ ಹರಿದುಬಂದಿದೆ. 

ಈ ಪೈಕಿ ಅತಿ ಹೆಚ್ಚು ಅಂದರೆ 172 ಮಿಲಿಯನ್ ಡಾಲರ್ ಆಟೋಮೊಬೈಲ್ ಕ್ಷೇತ್ರಕ್ಕೆ ಬಂದಿದೆ ಎನ್ನುತ್ತಿದೆ ಸರ್ಕಾರಿ ಅಂಕಿ-ಅಂಶ. ಕಾರ್ಪೊರೇಟ್ ವ್ಯವಹಾರಗಳ ಸಚಿವ ಅನುರಾಗ್ ಸಿಂಗ್ ಠಾಕೂರ್ ರಾಜ್ಯಸಭೆಗೆ ಈ ಬಗ್ಗೆ ಲಿಖಿತ ಉತ್ತರ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com