ರಿಲಯನ್ಸ್ ರಿಟೇಲ್ ನಲ್ಲಿ ಕೆಕೆಆರ್ 5,500 ಕೋಟಿ ರೂ. ಬಂಡವಾಳ ಹೂಡಿಕೆ
ಜಾಗತಿಕ ಹೂಡಿಕೆ ಕಂಪೆನಿ ಕೆಕೆಆರ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ ಶೇಕಡಾ 1.28ರಷ್ಟು ಹೂಡಿಕೆ ಮಾಡುತ್ತಿದೆ, ಅಂದರೆ ಹೂಡಿಕೆ ಬಂಡವಾಳದ ಷೇರು ಮೊತ್ತ 4.21 ಲಕ್ಷ ಕೋಟಿ ರೂಪಾಯಿ ಆಗಲಿದೆ.
Published: 23rd September 2020 12:04 PM | Last Updated: 23rd September 2020 12:17 PM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ಜಾಗತಿಕ ಹೂಡಿಕೆ ಕಂಪೆನಿ ಕೆಕೆಆರ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ ಶೇಕಡಾ 1.28ರಷ್ಟು ಹೂಡಿಕೆ ಮಾಡುತ್ತಿದೆ, ಅಂದರೆ ಹೂಡಿಕೆ ಬಂಡವಾಳದ ಷೇರು ಮೊತ್ತ 4.21 ಲಕ್ಷ ಕೋಟಿ ರೂಪಾಯಿ ಆಗಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಲ್ಲಿ ಕೆಕೆಆರ್ ಎರಡನೇ ಬಾರಿ ಹೂಡಿಕೆ ಮಾಡುತ್ತಿದ್ದು ಕಳೆದ ಬಾರಿ ಜಿಯೊ ಪ್ಲಾಟ್ ಫಾರ್ಮ್ ನಲ್ಲಿ 11 ಸಾವಿರದ 367 ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಿತ್ತು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹೇಳಿಕೆಯಲ್ಲಿ ತಿಳಿಸಿದೆ.
ಈ ಬಾರಿ ಕೆಕೆಆರ್ ರಿಲಯನ್ಸ್ ರಿಟೇಲ್ ವೆಂಚುರ್ಸ್ ನಲ್ಲಿ 5 ಸಾವಿರದ 550 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ.
ದೇಶದ ರಿಟೇಲ್ ಉದ್ಯಮ ವಲಯದಲ್ಲಿ ಅತಿ ದೊಡ್ಡ, ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ, ಅತಿ ಹೆಚ್ಚು ಲಾಭ ಮಾಡುತ್ತಿರುವ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗಸಂಸ್ಥೆ ರಿಲಯನ್ಸ್ ರಿಟೇಲ್ ದೇಶಾದ್ಯಂತ 12 ಸಾವಿರ ಸ್ಟೋರ್ ಗಳನ್ನು ಹೊಂದಿದೆ.