ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ದಿನದಂದು ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಫ್ ಸೀರೀಸ್ ಲಭ್ಯ

ಆನ್ ಲೈನ್ ಶಾಪಿಂಗ್ ನಲ್ಲಿ ಏರಿಳಿತದ ಹೊರತಾಗಿಯೂ ಸ್ಯಾಮ್ ಸಂಗ್ ಮೊಬೈಲ್ ಸಂಸ್ಥೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಗೆ ತನ್ನ ಹೊಸ ಗ್ಯಾಲೆಕ್ಸಿ ಸೀರೀಸ್ ಬಿಡುಗಡೆಗೆ ಒಪ್ಪಂದ ಮಾಡಿಕೊಂಡಿದೆ. 
ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ದಿನದಂದು ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಫ್ ಸೀರೀಸ್ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯ
ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ದಿನದಂದು ಸ್ಯಾಮ್ ಸಂಗ್ ಗ್ಯಾಲೆಕ್ಸಿ ಎಫ್ ಸೀರೀಸ್ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯ

ಗುರುಗ್ರಾಮ: ಆನ್ ಲೈನ್ ಶಾಪಿಂಗ್ ನಲ್ಲಿ ಏರಿಳಿತದ ಹೊರತಾಗಿಯೂ ಸ್ಯಾಮ್ ಸಂಗ್ ಮೊಬೈಲ್ ಸಂಸ್ಥೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಗೆ ತನ್ನ ಹೊಸ ಗ್ಯಾಲೆಕ್ಸಿ ಸೀರೀಸ್ ಬಿಡುಗಡೆಗೆ ಒಪ್ಪಂದ ಮಾಡಿಕೊಂಡಿದೆ. 

ಜಾಗತಿಕವಾಗಿ ಗ್ಯಾಲೆಕ್ಸಿ ಎಫ್ ಸರಣಿಯನ್ನು ಫ್ಲಿಪ್ ಕಾರ್ಟ್ ನಲ್ಲಿ ಬಿಡುಗಡೆಯಾಗಲಿದ್ದು, ಭಾರತದಲ್ಲಿ ಮುಂದಿನ ತಿಂಗಳು ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಸೇಲ್ ದಿನದಿಂದ ಮಾರಾಟಕ್ಕೆ ಲಭ್ಯವಿರಲಿದೆ. 15,000-18,000 ರೂಪಾಯಿಗಳವರೆಗೆ ಬೆಲೆ ನಿಗದಿಯಾಗುವ ಸಾಧ್ಯತೆ ಇದೆ. 

ಫ್ಲಿಪ್ ಕಾರ್ಟ್ ಮೂಲಕ ಸ್ಯಾಮ್ ಸಂಗ್ ಹೊಸ ಮೊಬೈಲ್ ಖರೀದಿಸುವವರಿಗೆ ಶೇ.30 ರಷ್ಟು ರಿಯಾಯಿತಿ ದೊರೆಯಲಿದೆ, ಉಳಿದ ಶೇ.70 ರಷ್ಟು ಹಣವನ್ನು 12 ಕಂತುಗಳಲ್ಲಿ ಪಾವತಿ ಮಾಡಬಹುದಾಗಿದೆ. 

12 ತಿಂಗಳ ಬಳಿಕ ಗ್ರಾಹಕರು ಹಳೆಯ ಡಿವೈಸ್ ನ್ನು ನೀಡಿದರೆ ಅವರು ಹೊಸ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಸ್ಮಾರ್ಟ್ ಫೋನ್ ಗೆ ಅಪ್ ಗ್ರೇಡ್ ಮಾಡಿಕೊಳ್ಳಬಹುದಾಗಿದೆ, ಜಾಗತಿಕ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಆಕರ್ಷಕ ಯೋಜನೆಯೊಂದನ್ನು ಸ್ಮಾರ್ಟ್ ಫೋನ್ ಸಂಸ್ಥೆ ಒದಗಿಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ಫೆಸ್ಟೀವ್ ದಿನಾಂಕವನ್ನು ಫ್ಲಿಪ್ ಕಾರ್ಟ್ ಇನ್ನಷ್ಟೇ ಘೋಷಣೆ ಮಾಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com