ಭಾರತ ಸರ್ಕಾರದ ವಿರುದ್ಧ 20,000 ಕೋಟಿ ರೂ. ತೆರಿಗೆ ದಾವೆ ಗೆದ್ದ ವೊಡಾಫೋನ್

ನ್ಯಾಯಯುತ ಮತ್ತು ನ್ಯಾಯಸಮ್ಮತವಾದ ಸೇವೆಯ ಖಾತರಿಯ ಉಲ್ಲಂಘನೆಯಾಗಿದೆ ಎಂದು ಹಿಂದಿನ ಸರ್ಕಾರಗಳು ವೊಡಾಫೋನ್ ಗ್ರೂಪ್ ಪಿಎಲ್‌ಸಿ ವಿರುದ್ಧ  ಹೂಡಿದ್ದ 22,100 ಕೋಟಿ ರೂ ಮಧ್ಯಸ್ಥಿಕೆ ತೆರಿಗೆ ಪ್ರಕರಣವನ್ನು ಹೇಗ್ ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಶಾಶ್ವತ ಪೀಠ ತಿರಸ್ಕರಿಸಿದೆ. 
ಭಾರತ ಸರ್ಕಾರದ ವಿರುದ್ಧ 20,000 ಕೋಟಿ ರೂ. ತೆರಿಗೆ ದಾವೆ ಗೆದ್ದ ವೊಡಾಫೋನ್

ನವದೆಹಲಿ: ನ್ಯಾಯಯುತ ಮತ್ತು ನ್ಯಾಯಸಮ್ಮತವಾದ ಸೇವೆಯ ಖಾತರಿಯ ಉಲ್ಲಂಘನೆಯಾಗಿದೆ ಎಂದು ಹಿಂದಿನ ಸರ್ಕಾರಗಳು ವೊಡಾಫೋನ್ ಗ್ರೂಪ್ ಪಿಎಲ್‌ಸಿ ವಿರುದ್ಧ  ಹೂಡಿದ್ದ 22,100 ಕೋಟಿ ರೂ ಮಧ್ಯಸ್ಥಿಕೆ ತೆರಿಗೆ ಪ್ರಕರಣವನ್ನು ಹೇಗ್ ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಶಾಶ್ವತ ಪೀಠ ತಿರಸ್ಕರಿಸಿದೆ. 

ಇದಲ್ಲದೆ ಕಾನೂನು ಪ್ರಾತಿನಿಧ್ಯ, ನೆರವು ಮತ್ತು ಕಂಪನಿಯು ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕಕ್ಕಾಗಿ ವೊಡಾಫೋನ್ ಗ್ರೂಪ್‌ಗೆ 4.3 ಮಿಲಿಯನ್ ಪೌಂಡ್‌ಗಳನ್ನು ಮರುಪಾವತಿ ಮಾಡುವಂತೆ ನ್ಯಾಯಾಲಯ ಭಾರತ ಸರ್ಕಾರವನ್ನು ಕೋರಿದೆ.

ಈ ಪ್ರಕ್ರಿಯೆಗೆ ಮಧ್ಯಸ್ಥಿಕೆದಾರರನ್ನು ಒಪ್ಪಿಕೊಳ್ಳಲು ಎರಡೂ ಪಕ್ಷಗಳು ವಿಫಲವಾದ ಕಾರಣ ಕಂಪನಿಯು 2016 ರಲ್ಲಿ ಮಧ್ಯಸ್ಥಿಕೆಗಾಗಿ ಅಂತರಾಷ್ಟ್ರೀಯ ನ್ಯಾಯಾಲಯವನ್ನು ಸಂಪರ್ಕಿಸಿತ್ತು. ಭಾರತವು 2009 ರಲ್ಲಿ ವೊಡಾಫೋನ್ ಗ್ರೂಪ್ ನಲ್ಲಿ  11 ಬಿಲಿಯನ್ ಡಾಲರ್ ಒಪ್ಪಂದದಲ್ಲಿ 7,990 ಕೋಟಿ ರೂ.ಗಳ  ಕ್ಯಾಪಿಟಲ್ ಗೈನ್ ತೆರಿಗೆಗಾಗಿ ಬೇಡಿಕೆ ಇಟ್ಟಿತ್ತು. ಕಂಪನಿಗೆ ವಿಧಿಸಲಾದ ಬಡ್ಡಿ ಮತ್ತು ದಂಡವನ್ನು ಸೇರಿಸಿದ ನಂತರ ವೊಡಾಫೋನ್ ಗ್ರೂಪ್ ವಿರುದ್ಧದ ಒಟ್ಟು ಬೇಡಿಕೆ 22,100 ಕೋಟಿ ರೂ. ಗಾಗಿ ದಾವೆ ಹೂಡಲಾಗುತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com