2050ರ ವೇಳೆಗೆ ಭಾರತ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಗೌತಮ್ ಅದಾನಿ

ಜಿಡಿಪಿ ಕುಸಿತವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಬಿಲಿಯನೇರ್ ಗೌತಮ್ ಅದಾನಿ ಅವರು, 2050ರ ವೇಳೆಗೆ ಭಾರತ 2ನೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಸೋಮವಾರ ಹೇಳಿದ್ದಾರೆ.
ಗೌತಮ್ ಅದಾನಿ
ಗೌತಮ್ ಅದಾನಿ

ನವದೆಹಲಿ: ಜಿಡಿಪಿ ಕುಸಿತವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಬಿಲಿಯನೇರ್ ಗೌತಮ್ ಅದಾನಿ ಅವರು, 2050ರ ವೇಳೆಗೆ ಭಾರತ 2ನೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಸೋಮವಾರ ಹೇಳಿದ್ದಾರೆ.

ಪ್ರಸ್ತುತ ಜಿಡಿಪಿ ಸ್ವಲ್ಪ ಸ್ಥಿರವಾಗಿದೆ. ಆದರೆ ಮೂಲಭೂತ ಅಂಶಗಳು ಅಖಂಡವಾಗಿವೆ ಮತ್ತು 2050ರ ವೇಳೆಗೆ ಭಾರತವು ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ವ್ಯಾಪಾರ ಅವಕಾಶಗಳ ವಿಷಯದಲ್ಲಿ ಜಾಗತಿಕವಾಗಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.

ಜೆಪಿ ಮೋರ್ಗಾನ್ ಇಂಡಿಯಾ ಶೃಂಗಸಭೆ - ಫ್ಯೂಚರ್ ಇನ್ ಫೋಕಸ್ ನಲ್ಲಿ ಮಾತನಾಡಿದ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು, ಆತ್ಮಾ ನಿರ್ಭರ್ ಭಾರತ್ ಕಾರ್ಯಕ್ರಮವು ಗೇಮ್ ಚೇಂಜರ್ ಆಗಲಿದೆ. "ನಾನು ಯಾವುದೇ ಹಿಂಜರಿಕೆಯಿಲ್ಲದೆ ಈ ಮಾತನ್ನು ಹೇಳುತ್ತೇನೆ - ಅದು - ನನ್ನ ದೃಷ್ಟಿಯಲ್ಲಿ - ಮುಂದಿನ ಮೂರು ದಶಕಗಳಲ್ಲಿ, ಭಾರತವು ವಿಶ್ವದ ಶ್ರೇಷ್ಠ ವ್ಯಾಪಾರ ಅವಕಾಶವಾಗಳನ್ನು ಸೃಷ್ಟಿಸಲಿದೆ" ಎಂದಿದ್ದಾರೆ.

ಜಿಡಿಪಿಯ ಅಭಿಮಾನಿಗಳಿಗಾಗಿ ಕೆಲವು ಅಂಕಿ ಅಂಶಗಳನ್ನು ನೋಡುವುದಾದರೆ, 1990 ರಲ್ಲಿ ಜಾಗತಿಕ ಜಿಡಿಪಿ 38 ಟ್ರಿಲಿಯನ್ ಯುಎಸ್ ಡಿ ಇತ್ತು. ಇಂದು ಅಂದರೆ 30 ವರ್ಷಗಳ ನಂತರ, ಈ ಸಂಖ್ಯೆ 90 ಟ್ರಿಲಿಯನ್ ಯುಎಸ್ ಡಿ ಆಗಿದೆ. ಇನ್ನೂ 30 ವರ್ಷಗಳಲ್ಲಿ ಅಂದರೆ 2050 ರಲ್ಲಿ ಜಾಗತಿಕ ಜಿಡಿಪಿ ಸುಮಾರು 170 ಟ್ರಿಲಿಯನ್ ಯುಎಸ್ ಡಾಲರ್ ಆಗುವ ನಿರೀಕ್ಷೆಯಿದೆ. ಆ ವೇಳೆಗೆ ಭಾರತವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅದಾನಿ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com