ವಾಹನ, ಗೃಹ, ಚಿನ್ನ, ವೈಯಕ್ತಿಕ ಸಾಲದ ಮೇಲೆ ಎಸ್ ಬಿಐ ಆಕರ್ಷಕ ಆಫರ್ ಘೋಷಣೆ

ಭಾರತದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ ತನ್ನ ರಿಟೇಲ್ ಗ್ರಾಹಕರಿಗೆ ವಿವಿಧ ಸಾಲಗಳ ಮೇಲೆ ಆಕರ್ಷಕ ಆಫರ್ ಗಳನ್ನು ಘೋಷಿಸಿದೆ. 

Published: 29th September 2020 07:30 PM  |   Last Updated: 29th September 2020 08:23 PM   |  A+A-


SBI1

ಎಸ್ ಬಿಐ

Posted By : Srinivas Rao BV
Source : Online Desk

ಭಾರತದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ ತನ್ನ ರಿಟೇಲ್ ಗ್ರಾಹಕರಿಗೆ ವಿವಿಧ ಸಾಲಗಳ ಮೇಲೆ ಆಕರ್ಷಕ ಆಫರ್ ಗಳನ್ನು ಘೋಷಿಸಿದೆ. 

ವಾಹನ, ಚಿನ್ನ, ವೈಯಕ್ತಿಕ ಸಾಲಗಳಿಗೆ ಯೋನೋ (YOU ONLY NEED ONE APP) ಮೂಲಕ ಅರ್ಜಿ ಸಲ್ಲಿಸುವವರಿಗೆ ಶೇ.100 ರಷ್ಟು ಪ್ರೊಸೆಸಿಂಗ್ ಶುಲ್ಕ ವಿನಾಯಿತಿ ದೊರೆಯಲಿದೆ. 

ವಾಹನ(ಕಾರು) ಸಾಲ ತೆಗೆದುಕೊಳ್ಳುವವರಿಗೆ ಎಸ್ ಬಿ ಐ ನಿಂದ ಅತ್ಯಂತ ಕಡಿಮೆ ಬಡ್ಡಿ ದರ ಅಂದರೆ ಶೇ.7.5 ರಷ್ಟು ಬಡ್ಡಿ ದರದಲ್ಲಿ ಸಾಲ ದೊರೆಯಲಿದೆ. ಆಯ್ಕೆ ಮಾಡಲಾದ ಮಾಡಲ್ ನಲ್ಲಿ ಶೇ.100 ರಷ್ಟು ಆನ್ ರೋಡ್ ಫೈನಾನ್ಸ್ ದೊರೆಯಲಿದೆ. 

ಇದೇ ವೇಳೆ ಗೃಹ ಖರೀದಿಗಾಗಿ ಸಾಲ ಪಡೆಯುವವರಿಗೆ ಎಸ್ ಬಿಐ ಹಬ್ಬದ ಆಫರ್ (ಫೆಸ್ಟೀವ್ ಆಫರ್) ನ್ನು ಘೋಷಿಸಿದೆ. ಅನುಮೋದಿತ ಯೋಜನೆಗಳಲ್ಲಿ ಗೃಹ ಖರೀದಿ ಮಾಡಬಯಸುವವರಿಗೆ ಪ್ರೊಸೆಸಿಂಗ್ ಶುಲ್ಕ ವಿನಾಯಿತಿ ಸಿಗಲಿದೆ. 

30 ಲಕ್ಷದಿಂದ-1 ಕೋಟಿ ರೂಪಾಯಿವರೆಗಿನ ಗೃಹ ಖರೀದಿ ಮಾಡಬಯಸುವ ಗ್ರಾಹಕರಿಗೆ ಕ್ರೆಡಿಟ್ ಸ್ಕೋರ್ ಹಾಗೂ ಸಾಲದ ಹಣದ ಆಧಾರದಲ್ಲಿ ಗ್ರಾಹಕರಿಗೆ ಬಡ್ಡಿ ದರದ ಮೇಲೆ 10 ಬಿಪಿಎಸ್ ನಷ್ಟು ವಿಶೇಷ ವಿನಾಯಿತಿ ನೀಡಲಾಗುತ್ತದೆ. ಯೋನೋ ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವವರು ಹೆಚ್ಚುವರಿಯಾಗಿ 5ಬಿಪಿಎಸ್ ಬಡ್ಡಿ ವಿನಾಯಿತಿ ಪಡೆಯಬಹುದಾಗಿದೆ. 

ಇನ್ನು ಚಿನ್ನದ ಗೋಲ್ಡ್ ಕೋನ್ ಗ್ರಾಹಕರಿಗೂ ಆಕರ್ಷಕ ಕೊಡುಗೆಗಳನ್ನು ಘೋಷಿಸಿರುವ ಎಸ್ ಬಿಐ  ಶೇ.7.5 ರಷ್ಟು ಬಡ್ಡಿ ದರದಲ್ಲಿ 36 ತಿಂಗಳ ಕಂತುಗಳ ಮೂಲಕ ಆರಾಮದಾಯಕ ಮರುಪಾವತಿ ಆಯ್ಕೆಯನ್ನೂ ನೀಡಲಾಗಿದೆ.  ವೈಯಕ್ತಿಕ ಸಾಲವನ್ನು ಶೇ.9.6ರಷ್ಟು ಬಡ್ಡಿ ದರದಲ್ಲಿ ನೀಡುತ್ತಿದೆ. 

Stay up to date on all the latest ವಾಣಿಜ್ಯ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp