
ಮಾರ್ಚ್ ತಿಂಗಳಲ್ಲಿ ದುಪ್ಪಟ್ಟಾದ ಭೀಮ್ ಯುಪಿಐ ವಹಿವಾಟು: 273 ಕೋಟಿಗೆ ಏರಿಕೆ!
ನವದೆಹಲಿ: ಭೀಮ್ ಯುಪಿಐ ನಿಂದ ನಡೆದಿರುವ ವಹಿವಾಟು ಮಾರ್ಚ್ ತಿಂಗಳಲ್ಲಿ ದುಪ್ಪಟ್ಟಾಗಿದ್ದು, 273 ಕೋಟಿಗೆ ಏರಿಕೆಯಾಗಿದೆ.
ರಾಷ್ಟ್ರೀಯ ಪಾವತಿ ನಿಗಮ ( ಎನ್ ಪಿಸಿಐ) ನೀಡಿರುವ ಅಂಕಿ-ಅಂಶಗಳ ಪ್ರಕಾರ ಮಾರ್ಚ್ 2020 ರಲ್ಲಿ ಭೀಮ್ ಯುಪಿಐ ಆಪ್ ಬಳಸಿ 125 ಕೋಟಿ ರೂಪಾಯಿಗಳ ವಹಿವಾಟು ನಡೆದಿತ್ತು.
ತಿಂಗಳ ಯುಪಿಐ ವಹಿವಾಟುಗಳ ಒಟ್ಟಾರೆ ಮೌಲ್ಯ 5,04,886 ಕೋಟಿಯಷ್ಟಿದ್ದರೆ, ವರ್ಷದ ಹಿಂದಿನ ಇದೇ ತಿಂಗಳಲ್ಲಿ ಅದರ ಮೌಲ್ಯ 2,06,462 ಕೋಟಿಯಷ್ಟಿತ್ತು. 2021 ರ ಫೆಬ್ರವರಿ ತಿಂಗಳಲ್ಲಿ ಭೀಮ್ ಯುಪಿಐ 229 ಕೋಟಿ ರೂಪಾಯಿ ವಹಿವಾಟುಗಳು ನಡೆದಿದ್ದು, 4,25,062 ಕೋಟಿ ಮೌಲ್ಯದ್ದಾಗಿದೆ.
ಮಾರ್ಚ್ 2021 ರಲ್ಲಿ 36.31 ಕೋಟಿ ರೂಪಾಯಿಗಳಷ್ಟು ವಹಿವಾಟು ಐಎಂಪಿಎಸ್ ನೊಂದಿಗೆ ರಿಯಲ್ ಟೈಮ್ ಸೆಟಲ್ಮೆಂಟ್ ಮೂಲಕ ನಡೆದಿದ್ದು, 3,27,234.43 ಮೌಲ್ಯದ್ದಾಗಿದೆ. ಭಾರತ್ ಬಿಲ್ ಪೇ ಮೂಲಕ 5,195.76 ಕೋಟಿ ರೂಪಾಯಿಗಳ ಮೌಲ್ಯದ 3.52 ಕೋಟಿ ವಹಿವಾಟು ನಡೆದಿದ್ದು, ಟೋಲ್ ಪ್ಲಾಜಾಗಳಲ್ಲಿ ಸ್ವಯಂ ಚಾಲಿತ ಟೋಲ್ ಸಂಗ್ರಹ 19.32 ಕೋಟಿ ರೂಪಾಯಿಗಳಷ್ಟು ನಡೆದಿದೆ.