ಆಧಾರ್-ಪಿಎಎನ್ ಜೋಡಣೆಗೆ ಇದ್ದ ಗಡುವು ಜೂ.30 ಕ್ಕೆ ವಿಸ್ತರಣೆ 

ಆಧಾರ್ ಕಾರ್ಡ್ ಜೊತೆಗೆ ಪಿಎಎನ್ ಕಾರ್ಡ್ ಜೋಡಣೆಗೆ ನೀಡಲಾಗಿದ್ದ ಗಡುವನ್ನು ಕೇಂದ್ರ ಸರ್ಕಾರ ಜೂ.30 ವರೆಗೆ ವಿಸ್ತರಣೆ ಮಾಡಿದೆ. 

Published: 01st April 2021 12:57 AM  |   Last Updated: 01st April 2021 12:29 PM   |  A+A-


AadharPancard1

ಆಧಾರ್- ಪ್ಯಾನ್ ಕಾರ್ಡ್ ಚಿತ್ರ

Posted By : Srinivas Rao BV
Source : The New Indian Express

ನವದೆಹಲಿ: ಆಧಾರ್ ಕಾರ್ಡ್ ಜೊತೆಗೆ ಪಿಎಎನ್ ಕಾರ್ಡ್ ಜೋಡಣೆಗೆ ನೀಡಲಾಗಿದ್ದ ಗಡುವನ್ನು ಕೇಂದ್ರ ಸರ್ಕಾರ ಜೂ.30 ವರೆಗೆ ವಿಸ್ತರಣೆ ಮಾಡಿದೆ. 

ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ಆಧಾರ್ ಕಾರ್ಡ್-ಪಿಎಎನ್ ಜೋಡಣೆಗೆ ನೀಡಲಾಗಿದ್ದ ಗಡುವು ವಿಸ್ತರಣೆಗೆ ತೆರಿಗೆದಾರರಿಂದ ಮನವಿ ಬಂದಿದ್ದರಿಂದ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ. 

ತೆರಿಗೆದಾರರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದೆ ಮಾ.31 ನ್ನು ಗಡುವನ್ನಾಗಿ ಘೋಷಿಸಲಾಗಿತ್ತು. ಕಳೆದ ವರ್ಷ ಆಗಸ್ಟ್ ನ ವರೆಗೂ 32.71 ಕೋಟಿ ಪಿಎಎನ್ ಗಳು ಆಧಾರ್ ಗೆ ಜೋಡಣೆಯಾಗಿದೆ. 

Stay up to date on all the latest ವಾಣಿಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp