ಮಾರ್ಚ್‌ನಲ್ಲಿ ದಾಖಲೆಯ 1.23 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ

ದೇಶದಲ್ಲಿ ಲಾಕ್‌ಡೌನ್ ಅನ್ನು ಹಿಂಪಡೆದ ನಂತರ, ಆರ್ಥಿಕ ಚಟುವಟಿಕೆಯು ಹೆಚ್ಚಾಗಿದ್ದು, 2021ರ ಮಾರ್ಚ್ ತಿಂಗಳಲ್ಲಿ ದಾಖಲೆಯ 1,23,902 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿದೆ.

Published: 01st April 2021 05:59 PM  |   Last Updated: 01st April 2021 07:31 PM   |  A+A-


Karnataka gets Rs 1,400 crore in IGST dues

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ನವದೆಹಲಿ: ದೇಶದಲ್ಲಿ ಲಾಕ್‌ಡೌನ್ ಅನ್ನು ಹಿಂಪಡೆದ ನಂತರ, ಆರ್ಥಿಕ ಚಟುವಟಿಕೆಯು ಹೆಚ್ಚಾಗಿದ್ದು, 2021ರ ಮಾರ್ಚ್ ತಿಂಗಳಲ್ಲಿ ದಾಖಲೆಯ 1,23,902 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿದೆ.

ಸತತ ಆರನೇ ತಿಂಗಳಲ್ಲಿ ಜಿಎಸ್‌ಟಿ ಆದಾಯ ಸಂಗ್ರಹ ಒಂದು ಲಕ್ಷ ಕೋಟಿಗೂ ಅಧಿಕವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಎಸ್‌ಟಿ ಆದಾಯವು ಕಳೆದ ಆರು ತಿಂಗಳಿನಿಂದ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ. 2020ರ ಅಕ್ಟೋಬರ್‌ನಿಂದ ಜಿಎಸ್‌ಟಿ ಆದಾಯ ಒಂದು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿದೆ.

2020ರ ಅಕ್ಟೋಬರ್‌ನಲ್ಲಿ 105,155 ಕೋಟಿ ರೂ., 2020 ರ ನವೆಂಬರ್‌ನಲ್ಲಿ 104,963 ಕೋಟಿ ರೂ., 2020 ಡಿಸೆಂಬರ್‌ನಲ್ಲಿ 115,174 ಕೋಟಿ ರೂ., 2021ರ ಜನವರಿಯಲ್ಲಿ 119,875 ಕೋಟಿ ರೂ. ಮತ್ತು ಫೆಬ್ರವರಿಯಲ್ಲಿ 113143 ಲಕ್ಷ ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಮಾರ್ಚ್ 2021 ರಲ್ಲಿ ಜಿಎಸ್ ಟಿ ಆದಾಯವು ಕಳೆದ ವರ್ಷ ಇದೇ ತಿಂಗಳಲ್ಲಿ ಸಂಗ್ರಹಿಸಿದ ಆದಾಯಕ್ಕಿಂತ ಶೇಕಡಾ 27ರಷ್ಟು ಹೆಚ್ಚಾಗಿದೆ.

ಮಾರ್ಚ್ 2021 ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯವು 1,23,902 ಕೋಟಿ ರೂ.ಗಳಾಗಿದ್ದು, ಅದರಲ್ಲಿ ಸಿಜಿಎಸ್‌ಟಿ 22,973 ಕೋಟಿ ರೂ., ಎಸ್‌ಜಿಎಸ್‌ಟಿ 29,329 ಕೋಟಿ ರೂ., ಐಜಿಎಸ್‌ಟಿ 62,842 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 31,097 ಕೋಟಿ ರೂ. ) ಮತ್ತು ಸೆಸ್ 8,757 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 935 ಕೋಟಿ ರೂ. ಸೇರಿದಂತೆ). ನಿಯಮಿತ ಇತ್ಯರ್ಥವಾಗಿ ಸರ್ಕಾರ 21,879 ಕೋಟಿ ರೂ.ಗಳನ್ನು ಸಿಜಿಎಸ್‌ಟಿಗೆ ಮತ್ತು ಎಸ್‌ಜಿಎಸ್‌ಟಿಗೆ 17,230 ಕೋಟಿ ರೂ. ಸಂಗ್ರಹವಾಗಿದೆ.

Stay up to date on all the latest ವಾಣಿಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp