ಕಳೆದ ಆರ್ಥಿಕ ವರ್ಷದಲ್ಲಿ ಶೇ.43ಕ್ಕೂ ಅಧಿಕ ಐಟಿ ಮರುಪಾವತಿ: ಸಿಬಿಡಿಟಿ

2020 ರ ಏಪ್ರಿಲ್ 1 ರಿಂದ 2021 ರ ಮಾರ್ಚ್ 31 ರವರೆಗೆ 2.38 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 2.62 ಲಕ್ಷ ಕೋಟಿ ರೂ. ಮರುಪಾವತಿ ಮಾಡಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಗುರುವಾರ ತಿಳಿಸಿದೆ.

Published: 01st April 2021 10:56 PM  |   Last Updated: 02nd April 2021 12:55 PM   |  A+A-


I-T department

ಐಟಿ ಇಲಾಖೆ

Posted By : Srinivas Rao BV
Source : UNI

ನವದೆಹಲಿ: 2020 ರ ಏಪ್ರಿಲ್ 1 ರಿಂದ 2021 ರ ಮಾರ್ಚ್ 31 ರವರೆಗೆ 2.38 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 2.62 ಲಕ್ಷ ಕೋಟಿ ರೂ. ಮರುಪಾವತಿ ಮಾಡಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಗುರುವಾರ ತಿಳಿಸಿದೆ.

ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಒಟ್ಟು ಮರುಪಾವತಿಯ ಮೊತ್ತದಲ್ಲಿ ಸುಮಾರು 43.2 ರಷ್ಟು ಹೆಚ್ಚಳವಾಗಿದೆ. 2019-20ರಲ್ಲಿ 1.83 ಕೋಟಿ ರೂ ಗೂ ಅಧಿಕ ಹಣವನ್ನು ಮರುಪಾವತಿಸಲಾಗಿದೆ. 2,34,27,418 ಪ್ರಕರಣಗಳಲ್ಲಿ ತೆರಿಗೆದಾರರಿಗೆ ಅಂದಾಜು 87,749 ಕೋಟಿ ರೂ.ಆದಾಯ ತೆರಿಗೆ ಮರುಪಾವತಿ ಮಾಡಲಾಗಿದೆ. ಕಳೆದ ಹಣಕಾಸು ವರ್ಷ ಸುಮಾರು 3,46,164 ಪ್ರಕರಣಗಳಲ್ಲಿ ಸುಮಾರು 1,74,576 ಕೋಟಿ ರೂ. ಕಾರ್ಪೊರೇಟ್ ತೆರಿಗೆ ಮರುಪಾವತಿ ಮಾಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರ್ಥಿಕ ಕುಸಿತವನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಸಿಬಿಡಿಟಿ ಬಾಕಿ ಇರುವ ಮರುಪಾವತಿಯನ್ನು ತ್ವರಿತವಾಗಿ ನೀಡಿದೆ ಎಂದು ಮಂಡಳಿ ಹೇಳಿದೆ.

Stay up to date on all the latest ವಾಣಿಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp