ಒಡಿಶಾದಲ್ಲಿ ಹೆದ್ದಾರಿ ನಿರ್ಮಾಣ ಯೋಜನೆಗೆ 1,169 ಕೋಟಿ ರೂ.ಗಳ ಬಿಡ್ಡಿಂಗ್ ಅದಾನಿ ಗ್ರೂಪ್ ಪಾಲು 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಒಡಿಶಾದಲ್ಲಿ 1,169.10 ಕೋಟಿ ರೂಪಾಯಿಗಳ ಹೆದ್ದಾರಿ ನಿರ್ಮಾಣ ಯೋಜನೆಗೆ ಅದಾನಿ ಎಂಟರ್ ಪ್ರೈಸಸ್ ಗುತ್ತಿಗೆ ಪಡೆದುಕೊಂಡಿದೆ.

Published: 03rd April 2021 01:28 PM  |   Last Updated: 03rd April 2021 02:31 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : PTI

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಒಡಿಶಾದಲ್ಲಿ 1,169.10 ಕೋಟಿ ರೂಪಾಯಿಗಳ ಹೆದ್ದಾರಿ ನಿರ್ಮಾಣ ಯೋಜನೆಗೆ ಅದಾನಿ ಎಂಟರ್ ಪ್ರೈಸಸ್ ಗುತ್ತಿಗೆ ಪಡೆದುಕೊಂಡಿದೆ.

ಅದಾನಿ ರಸ್ತೆ ಸಾರಿಗೆ ಲಿಮಿಟೆಡ್(ಎಆರ್ ಟಿಎಲ್ ), ಅದಾನಿ ಎಂಟರ್ ಪ್ರೈಸಸ್  ಸಂಪೂರ್ಣವಾಗಿ ಈ ಬಿಡ್ಡಿಂಗ್ ಕ್ರಿಯೆಯಲ್ಲಿ ಗುತ್ತಿಗೆ ಪಡೆದುಕೊಂಡಿದ್ದು, ಎಆರ್ ಟಿಎಲ್ ಷಟ್ಪಥ ಬಡಕುಮಾರಿ-ಕರ್ಕಿ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ-130 ಸಿಡಿ ರಸ್ತೆಯನ್ನು ರಾಯ್ಪುರ-ವಿಶಾಖಪಟ್ಣಂ ಆರ್ಥಿಕ ಕಾರಿಡಾರ್ ನ್ನು ನಿರ್ಮಿಸಲು ಅನುಮೋದನೆ ಪಡೆದಿದೆ ಎಂದು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಗೆ ಬರೆದ ಪ್ರಾಧಿಕಾರದ ಪತ್ರದಲ್ಲಿ ತಿಳಿಸಿದೆ.

ಬಿಡ್ಡಿಂಗ್ ವೆಚ್ಚ 1,169.10 ಕೋಟಿ ರೂಪಾಯಿಯಾಗಿದ್ದು, ನಿರ್ಮಾಣ ಕಾರ್ಯ ಸಮಯ 2 ವರ್ಷ. ಅದಾನಿ ಗ್ರೂಪ್ ಛತ್ತೀಸ್ ಗಢ, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ಕೇರಳ, ಗುಜರಾತ್, ಪಶ್ಚಿಮ ಬಂಗಾಳದಲ್ಲಿ ಎಚ್‌ಎಎಂ, ಟೋಲ್-ಆಪರೇಟ್-ಟ್ರಾನ್ಸ್‌ಫರ್ (ಟಿಒಟಿ) ಮತ್ತು ಬಿಲ್ಡ್-ಆಪರೇಟ್-ಟ್ರಾನ್ಸ್‌ಫರ್ (ಬಿಒಟಿ) ಟೋಲ್ ಆಧಾರದ ಮೇಲೆ ಒಟ್ಟು 10 ರಾಷ್ಟ್ರೀಯ ಹೆದ್ದಾರಿ ರಸ್ತೆ ಯೋಜನೆಗಳನ್ನು ನಿರ್ಮಿಸುತ್ತಿದೆ. 

Stay up to date on all the latest ವಾಣಿಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp