
ಬ್ರಿಜ್ ಮೋಹನ್ ಲಾಲ್ ಮುಂಜಾಲ್
ಮುಂಬೈ: ಪ್ರಮುಖ ಬೈಕ್ ತಯಾರಕ ಸಂಸ್ಥೆ ಹೀರೋ ಗ್ರೂಪ್ ನ ಸಂಸ್ಥಾಪಕ ದಿ. ಬ್ರಿಜ್ ಮೋಹನ್ ಲಾಲ್ ಮುಂಜಾಲ್ ಅವರ ಪತ್ನಿ ಸಂತೋಷ್ ಮುಂಜಾಲ್ (92) ನಿಧನ ಹೊಂದಿದ್ದಾರೆ. ಅವರು ಶುಕ್ರವಾರ ಕೊನೆಯುಸಿರೆಳೆದರು ಎಂದು ಮುಂಜಾಲ್ ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಸಂತೋಷ್ ಮುಂಜಾಲ್ 1947ರಲ್ಲಿ ಬ್ರಿಜ್ಮೋಹನ್ ಲಾಲ್ ಅವರನ್ನು ವಿವಾಹವಾಗಿದ್ದರು. 1953 ರಲ್ಲಿ ಹೀರೋ ಕಂಪನಿ ಸ್ಥಾಪಿಸಿದಂದಿನಿಂದ ಬ್ರಿಜ್ ಮೋಹನ್ ಅವರ ಬೆಂಬಲಕ್ಕೆ ನಿಂತಿದ್ದರು.
ಪ್ರಸ್ತುತ ಅವರ ಪುತ್ರ ಸುಮನ್ ಮುಂಜಾಲ್ ರಾಕ್ ಮ್ಯಾನ್ ಇಂಡಸ್ಟ್ರೀಸ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ, ಪವನ್ ಮುಂಜಾಲ್ ಹೀರೋ ಮೋಟೋಕಾರ್ಪ್ ಎಂಡಿ, ಸಿಇಒ ಹಾಗೂ ಸುನಿಲ್ ಮುಂಜಾಲ್ ಹೀರೋ ಎಂಟರ್ಪ್ರೈಸಸ್ ನ ಅಧ್ಯಕ್ಷರಾಗಿದ್ದಾರೆ. ಅವರಿಗೆ ಗೀತಾ ಆನಂದ್ ಎಂಬ ಪುತ್ರಿಯೂ ಇದ್ದಾರೆ.