5 ವರ್ಷಗಳಲ್ಲಿ ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯಡಿ 25,586 ಕೋಟಿ ರೂ. ಗೂ ಹೆಚ್ಚು ಸಾಲ ಮಂಜೂರು
ಆರ್ಥಿಕ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಿ, ತಳಮಟ್ಟದಲ್ಲಿ ಉದ್ಯಮಶೀಲತೆ ಉತ್ತೇಜಿಸಲು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯನ್ನು 2025ರವರೆಗೆ ವಿಸ್ತರಿಸಲಾಗಿದೆ.
Published: 04th April 2021 03:14 PM | Last Updated: 05th April 2021 12:53 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಆರ್ಥಿಕ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಿ, ತಳಮಟ್ಟದಲ್ಲಿ ಉದ್ಯಮಶೀಲತೆ ಉತ್ತೇಜಿಸಲು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯನ್ನು 2025ರವರೆಗೆ ವಿಸ್ತರಿಸಲಾಗಿದೆ.
ಕಳೆದ ಐದು ವರ್ಷಗಳಲ್ಲಿ ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯಡಿ 5 ವರ್ಷಗಳಲ್ಲಿ 1,14,322 ಕ್ಕೂ ಹೆಚ್ಚು ಖಾತೆಗಳಿಗೆ 25,586 ಕೋಟಿ ರೂ.ಗೂ ಹೆಚ್ಚು ಸಾಲ ಮಂಜೂರು ಮಾಡಲಾಗಿದೆ.
ಮಹಿಳೆಯರು, ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ) ಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಸಿದ್ಧಗೊಂಡ ಮತ್ತು ತರಬೇತಿ ಪಡೆಯುತ್ತಿರುವ ಸಾಲಗಾರರು ವ್ಯಾಪಾರ, ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ಗ್ರೀನ್ಫೀಲ್ಡ್ ಉದ್ಯಮವನ್ನು ಪ್ರಾರಂಭಿಸಲು ಸಹಾಯ ಮಾಡುವುದು ಸ್ಟ್ಯಾಂಡ್-ಅಪ್ ಇಂಡಿಯಾದ ಉದ್ದೇಶವಾಗಿದೆ.
ಸ್ಟ್ಯಾಂಡ್-ಅಪ್ ಇಂಡಿಯಾದ ಉದ್ದೇಶ:
ಮಹಿಳೆಯರು, ಎಸ್ಸಿ ಮತ್ತು ಎಸ್ಟಿ ವರ್ಗಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಅವರಲ್ಲಿ ಆರ್ಥಿಕ ಸ್ಥಿರತೆ ತರುವುದು ಎಂದು ಹೇಳಿದ್ದಾರೆ.