
ಸಂಗ್ರಹ ಚಿತ್ರ
ನವದೆಹಲಿ: ಭಾರೀ ನಷ್ಟದಿಂದಾಗಿ ಸ್ಮಾರ್ಟ್ ಫೋನ್ ಉತ್ಪಾದನೆಯನ್ನು ನಿಲ್ಲಿಸುವುದಾಗಿ ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್ ದೈತ್ಯ ಎಲ್ ಜಿ ಕಂಪನಿ ನಿರ್ಧರಿಸಿದೆ.
ಪ್ರಬಲ ಪ್ರತಿಸ್ಪರ್ಧಿಗಳ ಮುಂದೆ ಎಲ್ ಜಿ ಸ್ಮಾರ್ಟ್ ಫೋನ್ ಪೈಪೋಟಿ ನೀಡುವಲ್ಲಿ ವಿಫಲವಾಗಿದ್ದು ಈ ಹಿನ್ನೆಲೆಯಲ್ಲಿ ಸಂಸ್ಧೆಗೆ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿತ್ತು. ಹೀಗಾಗಿ ಸ್ಮಾರ್ಟ್ ಫೋನ್ ಉತ್ಪಾದನೆಯನ್ನೇ ಎಲ್ ಜಿ ನಿಲ್ಲಿಸಿದೆ.
ಎಲೆಕ್ಟ್ರಿಕ್ ವಾಹನಗಳ ಬಿಡಿಭಾಗ, ಗೃಹಪಯೋಗಿ ವಸ್ತುಗಳು ಹಾಗೂ ರೊಬೋಟಿಕ್ಸ್ ವಲಯ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಾವು ಗಣನೀಯ ಸಾಧನೆ ಮಾಡಿದ್ದು ಇನ್ನು ಮುಂದೆ ನಮ್ಮ ನೂತನ ಪ್ರಯೋಗಗಳು ಅಲ್ಲಿಯೇ ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ ಜಿ ಸ್ಮಾರ್ಟ್ ಫೋನ್ ಕಳೆದ ಆರು ವರ್ಷಗಳಿಂದಲೂ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ ಸಂಸ್ಧೆ ತನ್ನ ನಿರ್ಣಯ ಘೋಷಿಸಿದ್ದು ಎಲ್ ಜಿ ಸ್ಮಾರ್ಟ್ ಫೋನ್ ಖಾಯಂ ಆಗಿ ಸ್ವಿಚ್ ಆಫ್ ಆಗಲಿದೆ.