2021-22ನೇ ಸಾಲಿನ ಮೊದಲ ವಿತ್ತೀಯ ನೀತಿ ಪ್ರಕಟ: ರೆಪೊ, ರಿವರ್ಸ್ ರೆಪೊ ದರ ಯಥಾಸ್ಥಿತಿ, ಆರ್ಥಿಕ ಬೆಳವಣಿಗೆ ಅಂದಾಜು ಶೇ.10.5
ದೇಶದಲ್ಲಿ ಕೋವಿಡ್ ಎರಡನೇ ಅಲೆ ಸೃಷ್ಟಿಯಾಗಿದ್ದು, ಈ ಹೊತ್ತಿನಲ್ಲಿ ಆರ್ಥಿಕ ಅನಿಶ್ಚಿತತೆ ಇರುವಂತಹ ಸಂದರ್ಭದಲ್ಲಿ ಪ್ರಸಕ್ತ ಹಣಕಾಸು ವರ್ಷ ಬಡ್ಡಿದರ ಬದಲಾಯಿಸದೆ ಆರ್ ಬಿಐ ಯಥಾಸ್ಥಿತಿ ಕಾಯ್ದುಕೊಂಡಿದೆ.
Published: 07th April 2021 11:40 AM | Last Updated: 07th April 2021 02:29 PM | A+A A-

ಶಕ್ತಿಕಾಂತ್ ದಾಸ್
ಮುಂಬೈ: ದೇಶದಲ್ಲಿ ಕೋವಿಡ್ ಎರಡನೇ ಅಲೆ ಸೃಷ್ಟಿಯಾಗಿದ್ದು, ಈ ಹೊತ್ತಿನಲ್ಲಿ ಆರ್ಥಿಕ ಅನಿಶ್ಚಿತತೆ ಇರುವಂತಹ ಸಂದರ್ಭದಲ್ಲಿ ಪ್ರಸಕ್ತ ಹಣಕಾಸು ವರ್ಷ ಬಡ್ಡಿದರ ಬದಲಾಯಿಸದೆ ಆರ್ ಬಿಐ ಯಥಾಸ್ಥಿತಿ ಕಾಯ್ದುಕೊಂಡಿದೆ.
ಇಂದು ಮುಂಬೈಯಲ್ಲಿ 2021-22ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕದ ವಿತ್ತೀಯ ನೀತಿ ಪ್ರಕಟಿಸಿದ್ದು ರೆಪೊ ದರವನ್ನು ಶೇಕಡಾ 4ರಷ್ಟು ಹಾಗೂ ರಿವರ್ಸ್ ರೆಪೊ ದರವನ್ನು ಶೇಕಡಾ 3.35ರಷ್ಟು ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್ಥಿಕ ಬೆಳವಣಿಗೆಯ ದರವನ್ನು ಕೂಡ ಬದಲಾಯಿಸದೆ ಶೇಕಡಾ 10.5ರಷ್ಟು ಹಣಕಾಸು ವರ್ಷ 2021-22ರಲ್ಲಿ ಇರಬಹುದು ಎಂದು ಕೂಡ ಅಂದಾಜಿಸಿದೆ.
ಹಣಕಾಸು ವಿತ್ತೀಯ ನೀತಿ(ಎಂಪಿಸಿ) ಹಣದುಬ್ಬರ ಹೊಸ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕಳೆದ ಜನವರಿಯಿಂದ ಮಾರ್ಚ್ ವರೆಗೆ ಇದ್ದ ಶೇಕಡಾ 5ಕ್ಕಿಂತ ಈಗಿನ ಆರ್ಥಿಕ ಸಾಲಿನ ತ್ರೈಮಾಸಿಕದಲ್ಲಿ ಶೇಕಡಾ 4.4ರಷ್ಟು ಅಂದಾಜಿಸಿದೆ.
ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆರ್ಬಿಐ ಬಡ್ಡಿದರಗಳನ್ನು ಸಹಜ ಸ್ಥಿತಿಗೆ ಬರುವವರೆಗೆ ತಡೆಹಿಡಿಯುತ್ತದೆ ಎಂದು ಇಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆರು ಸದಸ್ಯರ ಹಣಕಾಸು ವಿತ್ತೀಯ ನೀತಿಯ ಮೂರು ದಿನಗಳ ಸಭೆ ಮುಗಿದ ಬಳಿಕ ಇಂದು ಬೆಳಗ್ಗೆ ಹೇಳಿದರು.
ಕೋವಿಡ್-19 ಬಂದ ನಂತರ ಇದು ಸತತ ಐದನೇ ಬಾರಿ ಆರ್ ಬಿಐ ವಿತ್ತೀಯ ದರವನ್ನು ಬದಲಾಯಿಸದೆ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುತ್ತಿದೆ. ಕಳೆದ ಬಾರಿ ಕೊನೆಗೆ ಬದಲಾಯಿಸಿತ್ತು ಕಳೆದ ವರ್ಷ ಮೇ 22ರಂದು.
ಕೋವಿಡ್-19ನ ಎರಡನೇ ಅಲೆ ದೇಶದಲ್ಲಿ ಎದ್ದು ದಿನಕ್ಕೆ 90,000 ಕ್ಕೂ ಹೆಚ್ಚು ಪ್ರಕರಣಗಳು ಕಂಡುಬರುತ್ತಿರುವುದರಿಂದ, ಆಯಾ ರಾಜ್ಯಗಳು ಪರಿಸ್ಥಿತಿಗೆ ತಕ್ಕಂತೆ ಲೋಕಲ್ ಲಾಕ್ ಡೌನ್, ನೈಟ್ ಕರ್ಫ್ಯೂ, ನಿಷೇಧಾಜ್ಞೆ ಮಾಡುತ್ತಿರುವುದರಿಂದ ಆರ್ಥಿಕ ಚಟುವಟಿಕೆಗಳು ಎಲ್ಲಾ ಕಡೆ ಕುಂಠಿತವಾಗಿವೆ.
ರೆಪೊ ದರ: ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.
ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್ ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.
ರಿವರ್ಸ್ ರೆಪೊ ದರ: ಇದಕ್ಕೆ ಪ್ರತಿಯಾಗಿ ಆರ್ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.