ಹಾಂಕ್ ಕಾಂಗ್ ಅಗ್ನಿ ಅವಘಡದ ಬಳಿಕ ವಿವೋ ಸರಕುಗಳ ಸಾಗಣೆಗೆ ಸ್ಪೈಸ್ ಜೆಟ್, ಗೋಏರ್ ನಿರ್ಧಾರ

ವಿವೋ ಸಂಸ್ಥೆಯ ಸ್ಮಾರ್ಟ್ ಫೋನ್ ಗಳಿದ್ದ ಸರಕು ಹಾಂಕ್ ಕಾಂಗ್ ನ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ವಿವೋ ಸರಕುಗಳನ್ನು ಇನ್ನು ಮುಂದೆ ಕೊಂಡೊಯ್ಯದಿರಲು ಸ್ಪೈಸ್ ಜೆಟ್, ಗೋಏರ್ ನಿರ್ಧರಿಸಿದೆ. 

Published: 14th April 2021 06:57 PM  |   Last Updated: 14th April 2021 07:11 PM   |  A+A-


SpiceJet, GoAir decide not to carry Vivo's shipments after Hong Kong fire incident

ಹಾಂಕ್ ಕಾಂಗ್ ಅಗ್ನಿ ಅವಘಡದ ಬಳಿಕ ವಿವೋ ಸರಕುಗಳನ್ನು ಕೊಂಡೊಯ್ಯದಿರಲು ಸ್ಪೈಸ್ ಜೆಟ್, ಗೋಏರ್ ನಿರ್ಧಾರ

Posted By : Srinivas Rao BV
Source : The New Indian Express

ನವದೆಹಲಿ: ವಿವೋ ಸಂಸ್ಥೆಯ ಸ್ಮಾರ್ಟ್ ಫೋನ್ ಗಳಿದ್ದ ಸರಕು ಹಾಂಕ್ ಕಾಂಗ್ ನ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ವಿವೋ ಸರಕುಗಳನ್ನು ಇನ್ನು ಮುಂದೆ ಕೊಂಡೊಯ್ಯದಿರಲು ಸ್ಪೈಸ್ ಜೆಟ್, ಗೋಏರ್ ನಿರ್ಧರಿಸಿದೆ. 

ಇದೇ ವೇಳೆ ವಿವೋ ಕಾರ್ಗೋ ಗಳನ್ನು ಪ್ರಯಾಣಿಕ ವಿಮಾನದಲ್ಲಿ ಸಾಗಣೆ ಮಾಡುವುದರ ವಿಷಯವಾಗಿ ಸಲಹೆ- ಸೂಚನೆಗಳನ್ನು ನೀಡಬೇಕೆ ಬೇಡವೇ ಎಂಬ ಬಗ್ಗೆ ಶೀಘ್ರವೇ ನಾಗರಿಕ ವಿಮಾನಯಾನದ ನಿರ್ದೇಶನಾಲಯ ನಿರ್ಧಾರ ಪ್ರಕಟಿಸಲಿದೆ ಎಂದು ಡಿಜಿಸಿಎಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಇದೇ ವೇಳೆ ವಿವೋ ವಕ್ತಾರರು ಬೆಂಕಿ ಹೊತ್ತಿಕೊಂಡ ಘಟನೆ ಸಂಸ್ಥೆಯ ಗಮನಕ್ಕೆ ಬಂದಿದ್ದು, ಹಾಂಕ್ ಕಾಂಗ್ ನ ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಘಟನೆಗೆ ಕಾರಣ ಏನೆಂಬುದನ್ನು ತಿಳಿಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಹಾಂಗ್ ಕಾಂಗ್ ಏರ್ಲೈನ್ಸ್ ನ ಸರಕು ಸಾಗಣೆ ವಿಭಾಗವೂ ವಿವೋ ಸರಕುಗಳನ್ನು ಹೊತ್ತೊಯ್ಯುವುದಿಲ್ಲ ಎಂದು ಹೇಳಿದೆ.

Stay up to date on all the latest ವಾಣಿಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp