ಮಾರ್ಚ್ ನಲ್ಲಿ ಸಗಟು ಮಾರಾಟ ಹಣದುಬ್ಬರ ಶೇ. 7.39ಕ್ಕೆ ಏರಿಕೆ, ಇದು 8 ವರ್ಷಗಳಲ್ಲೇ ಅಧಿಕ

ಕಳೆದ ಮಾರ್ಚ್ ನಲ್ಲಿ ಸಗಟು ಮಾರಾಟ ದರ ಹಣದುಬ್ಬರ ಶೇ. 7.39ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ತಿಳಿಸಿದೆ.

Published: 15th April 2021 04:40 PM  |   Last Updated: 15th April 2021 04:40 PM   |  A+A-


Retail inflation rises marginally to 3.18 per cent in June

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ನವದೆಹಲಿ: ಕಳೆದ ಮಾರ್ಚ್ ನಲ್ಲಿ ಸಗಟು ಮಾರಾಟ ದರ ಹಣದುಬ್ಬರ ಶೇ. 7.39ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ತಿಳಿಸಿದೆ.

ವರದಿಗಳ ಪ್ರಕಾರ, ಮಾರ್ಚ್ ನಲ್ಲಿ ಸಗಟು ಮಾರಾಟ ದರ ಹಣದುಬ್ಬರ 8 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಕೊನೆಯ ಬಾರಿ 2012ರ ಅಕ್ಟೋಬರ್‌ನಲ್ಲಿ ಈ ರೀತಿ ಹೆಚ್ಚಿನ ಹಣದುಬ್ಬರ ದಾಖಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಹಣದುಬ್ಬರ ಶೇ 4.17 ರಷ್ಟಿತ್ತು.

ಕಳೆದ ವರ್ಷದ ಮಾರ್ಚ್ ಗೆ ಹೋಲಿಸಿದರೆ ಈ ವರ್ಷದ ಮಾರ್ಚ್ ನಲ್ಲಿ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಮೂಲ ಲೋಹದ ಬೆಲೆಗಳು ಗಣನೀಯವಾಗಿ ಹೆಚ್ಚಾಗಿವೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಅಧಿಕೃತ ಅಂಕಿ-ಅಂಶಗಳಂತೆ, ಕಳೆದ ಮಾರ್ಚ್ ತಿಂಗಳಲ್ಲಿ, ಸಗಟು ದರ ಹಣದುಬ್ಬರ, ಪ್ರಾಥಮಿಕ ವಸ್ತುಗಳಲ್ಲಿ ಶೇ 6.40, ಇಂಧನ ಮತ್ತು ವಿದ್ಯುತ್ ನಲ್ಲಿ ಶೇ 10.25 , ತಯಾರಿಸಿದ ಉತ್ಪನ್ನಗಳಲ್ಲಿ ಶೇ 7.34 ಮತ್ತು ಆಹಾರ ಸೂಚ್ಯಂಕದಲ್ಲಿ ಶೇ 5.28 ರಷ್ಟಿತ್ತು.

ಕಳೆದ ಫೆಬ್ರವರಿಗೆ ಹೋಲಿಸಿದರೆ, ಇಂಧನ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅತಿ ಹೆಚ್ಚು ಏರಿಕೆ ಕಂಡುಬಂದಿದ್ದು, ಇದು ಶೇ 9..75 ಕ್ಕಿಂತ ಅಧಿಕವಾಗಿದೆ.

Stay up to date on all the latest ವಾಣಿಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp