ಜನರ ಜೀವನ, ಜೀವ ಉಳಿಸುವುದಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ: ಕೋವಿಡ್-19 ಪರಿಸ್ಥಿತಿ ಕುರಿತು ನಿರ್ಮಲಾ ಸೀತಾರಾಮನ್

ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂಡಿಯಾ ಐಎನ್ ಸಿಯ ಆತಂಕಗಳ ಬಗ್ಗೆ ವಿವಿಧ ಇಂಡಸ್ಟ್ರಿ ಚೇಂಬರ್ ಗಳೊಂದಿಗೆ ಮಾತನಾಡುತ್ತಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ: ಕೋವಿಡ್-19 ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂಡಿಯಾ ಐಎನ್ ಸಿಯ ಆತಂಕಗಳ ಬಗ್ಗೆ ವಿವಿಧ ಇಂಡಸ್ಟ್ರಿ ಚೇಂಬರ್ ಗಳೊಂದಿಗೆ ಮಾತನಾಡುತ್ತಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು, ಸರ್ಕಾರ ಜೀವ ಮತ್ತು ಜೀವನ ಎರಡನ್ನೂ ಉಳಿಸುವುದಕ್ಕೆ ಕೆಲಸ ಮಾಡುತ್ತದೆ ಎಂಬ ಭರವಸೆ ನೀಡಿದ್ದಾರೆ.
 
ಕೋವಿಡ್-19 ಎರಡನೇ ಅಲೆಯಿಂದ ದೇಶದ ಆರ್ಥಿಕತೆ ಮೇಲೆ ಉಂಟಾಗಲಿರುವ ಪರಿಣಾಮವನ್ನು ಎದುರಿಸುವ   ಬಗ್ಗೆ ವ್ಯವಹಾರ, ಉದ್ಯಮಗಳಿಂದ ಪ್ರತಿಕ್ರಿಯೆ ಪಡೆಯುತ್ತಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಕಳೆದ ಆರ್ಥಿಕ ವರ್ಷದ (ಏಪ್ರಿಲ್-ಜೂನ್) ತ್ರೈಮಾಸಿಕದಲ್ಲಿ ಕೋವಿಡ್-19 ಕಾರಣದಿಂದ ಆರ್ಥಿಕತೆ ಶೇ.23.9 ರಷ್ಟು ಕುಸಿತ ಕಂಡಿತ್ತು. 

"ವಿವಿಧ ಉದ್ಯಮಗಳು/ ಚೇಂಬರ್ ನಾಯಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದೆ. ಕೈಗಾರಿಕೆ/ ಸಂಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಪ್ರಧಾನಿ ಕಾರ್ಯಾಲಯವೂ ಸೇರಿದಂತೆ ಭಾರತ ಸರ್ಕಾರ ವಿವಿಧ ಹಂತಗಳಲ್ಲಿ ಕೊರೊನಾ ನಿರ್ವಹಣೆಗೆ ಸ್ಪಂದಿಸುತ್ತಿದೆ. ಜೀವ, ಜೀವನಗಳನ್ನು ಉಳಿಸುವುದಕ್ಕಾಗಿ ರಾಜ್ಯಗಳೊಂದಿಗೆ ಕೆಲಸ ಮಾಡುತ್ತಿದ್ದೆವೆ ಎಂದು ನಿರ್ಮಲಾ ಸೀತಾರಾಮನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಸಿಐಐ ಅಧ್ಯಕ್ಷ ಉದಯ್ ಕೋಟಕ್, ಎಫ್ಐಸಿಸಿಐ ಅಧ್ಯಕ್ಷ ಉದಯ್ ಶಂಕರ್, ಅಸೋಚಾಮ್ ನ ವಿನೀತ್ ಅಗರ್ವಾಲ್ ಸೇರಿದಂತೆ ಅನೇಕ ಉದ್ಯಮಿಗಳು, ಉದ್ಯಮಗಳ ನಾಯಕರೊಂದಿಗೆ ನಿರ್ಮಲಾ ಸೀತಾರಾಮನ್ ಚರ್ಚೆ ನಡೆಸಿದ್ದಾರೆ. ಲಾಕ್ ಡೌನ್ ಮಾಡುವುದಿಲ್ಲವೆಂದು ನಿರ್ಮಲಾ ಸೀತಾರಾಮನ್ ಕಳೆದ ವಾರ ಸ್ಪಷ್ಟಪಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com