ಭಾರತದಲ್ಲಿ ವಿಶ್ವದ ಅತಿ ದೊಡ್ಡ ಪರಮಾಣು ಘಟಕ ನಿರ್ಮಾಣ: ಫ್ರಾನ್ಸ್ ನ ಇಡಿಎಫ್ ಸಂಸ್ಥೆ

ಭಾರತದ ವಿಶ್ವದ ಅತಿ ದೊಡ್ಡ ಪರಮಾಣು ಘಟಕ ಶೀಘ್ರವೇ ನಿರ್ಮಿಸುವ ಸನಿಹದಲ್ಲಿದೆ ಎಂದು ಪ್ರೆಂಚ್ ನ ವಿದ್ಯುತ್ ಸಮೂಹ ಸಂಸ್ಥೆ ಇಡಿಎಫ್ ಹೇಳಿದೆ
ಭಾರತ ವಿಶ್ವದ ಅತಿ ದೊಡ್ಡ ಪರಮಾಣು ಘಟಕ ನಿರ್ಮಾಣದ ಸನಿಹದಲ್ಲಿದೆ: ಫ್ರಾನ್ಸ್ ನ ಇಡಿಎಫ್ ಸಂಸ್ಥೆ
ಭಾರತ ವಿಶ್ವದ ಅತಿ ದೊಡ್ಡ ಪರಮಾಣು ಘಟಕ ನಿರ್ಮಾಣದ ಸನಿಹದಲ್ಲಿದೆ: ಫ್ರಾನ್ಸ್ ನ ಇಡಿಎಫ್ ಸಂಸ್ಥೆ

ಪ್ಯಾರಿಸ್: ಭಾರತ ವಿಶ್ವದ ಅತಿ ದೊಡ್ಡ ಪರಮಾಣು ಘಟಕ ನಿರ್ಮಿಸುವ ಸನಿಹದಲ್ಲಿದೆ ಎಂದು ಪ್ರೆಂಚ್ ನ ವಿದ್ಯುತ್ ಸಮೂಹ ಸಂಸ್ಥೆ ಇಡಿಎಫ್ ಹೇಳಿದೆ

ಸುಮಾರು 10 ಗಿಗಾ ವ್ಯಾಟ್ಸ್ (ಜಿಡಬ್ಲ್ಯು) ನಷ್ಟು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿರುವ ವಿಶ್ವದ ಅತಿ ದೊಡ್ಡ ಪರಮಾಣು ಘಟಕ ಶೀಘ್ರವೇ ಭಾರತದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಪ್ರಾನ್ಸ್ ನ ವಿದ್ಯುತ್ ಸಮೂಹ ಸಂಸ್ಥೆ ಇಡಿಎಫ್ ಮಾಹಿತಿ ನೀಡಿದೆ. ಈ ಯೋಜನೆ ಮಹಾರಾಷ್ಟ್ರದ ಜೈತಾಪುರದಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಹಲವು ವರ್ಷಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿದ್ದು ಹಾಗೂ ಪರಮಾಣು ಘಟನೆಗಳಿಂದಾಗಿ ಯೋಜನೆ ಜಾರಿ ವಿಳಂಬವಾಗಿತ್ತು. 

ಘಟಕದ ಜೊತೆಗೆ ಇಂಜಿನಿಯರಿಂಗ್ ಅಧ್ಯಯನ ಹಾಗೂ ಉಪಕರಣಗಳನ್ನು ಪೂರೈಸುವುದು, ಮೂರನೇ ಪೀಳಿಗೆ (3rd ಜನರೇಷನ್)ಯ 6 ಇಪಿಆರ್ ರಿಯಾಕ್ಟರ್ ಗಳ ನಿರ್ಮಾಣಕ್ಕೆ ಉಪಕರಣಗಳನ್ನು ಪೂರೈಕೆ ಮಾಡುವುದಾಗಿ ಸಂಸ್ಥೆ ತಿಳಿಸಿದೆ. 

ನಿರ್ಮಾಣ ಪೂರ್ಣಗೊಳ್ಳುವುದಕ್ಕೆ 15 ವರ್ಷ ಬೇಕಾಗುತ್ತದೆ. ಆದರೆ ಯೋಜನೆ ಪೂರ್ಣಗೊಳ್ಳುವುದಕ್ಕೂ ಮುನ್ನವೇ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಲಿದೆ, 10 ಗಿಗಾ ವ್ಯಾಟ್ (ಜಿಡಬ್ಲ್ಯು)ನಷ್ಟು ವಿದ್ಯುತ್ ಉತ್ಪಾದನೆಯಾಗಲಿದ್ದು 70 ಮಿಲಿಯನ್ ಮನೆಗಳಿಗೆ ವಿದ್ಯುತ್ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಭಾರತದ ಅಧಿಕಾರಿಗಳೊಂದಿಗೆ ಇಡಿಎಫ್ ಮಾತುಕತೆ ನಡೆಸುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಕಾಂಟ್ರಾಕ್ಟ್ ಇತ್ಯರ್ಥವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com