ಸತತ ಮೂರನೇ ದಿನವು ಏರುಗತಿ: ಸೆನ್ಸೆಕ್ಸ್ 790 ಅಂಕ ಏರಿಕೆ, 50,000 ಮಟ್ಟದ ಸನಿಹದಲ್ಲಿ

ಬ್ಯಾಂಕಿಂಗ್, ಹಣಕಾಸು, ದೂರಸಂಪರ್ಕ, ಆಟೋ ಮತ್ತು ಗ್ರಾಹಕ ವಸ್ತು ಷೇರುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಬುಧವಾರ ಸತತ ಮೂರನೇ ದಿನವೂ ಏರುಗತಿ ದಾಖಲಿಸಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ 789.70 ಏರಿಕೆ ಕಂಡು 49,733.84 ಕ್ಕೆ ತಲುಪಿದೆ.
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ

ಮುಂಬೈ: ಬ್ಯಾಂಕಿಂಗ್, ಹಣಕಾಸು, ದೂರಸಂಪರ್ಕ, ಆಟೋ ಮತ್ತು ಗ್ರಾಹಕ ವಸ್ತು ಷೇರುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಬುಧವಾರ ಸತತ ಮೂರನೇ ದಿನವೂ ಏರುಗತಿ ದಾಖಲಿಸಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ 789.70 ಏರಿಕೆ ಕಂಡು 49,733.84 ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್ಎಸ್ಇ)ದ ಸಂವೇದಿ ಸೂಚ್ಯಂಕ ನಿಫ್ಟಿ ಸಹ 211.50 ಅಂಕ ಏರಿಕೆ ಕಂಡು 14,864.55 ಕ್ಕೆ ತಲುಪಿದೆ. ಸೆನ್ಸೆಕ್ಸ್, 72 ಅಂಕ ಏರಿಕೆ ಕಂಡು 49,066.64ರಲ್ಲಿ ದಿನದ ವಹಿವಾಟು ಆರಂಭಿಸಿತು. 

ಆ ನಂತರ ದಿನದ ವಹಿವಾಟಿನಲ್ಲಿ  ಇದು 857 ಅಂಕ ಏರಿಕೆಯೊಂದಿಗೆ 49,801.48 ಕ್ಕೆ ತಲುಪಿತ್ತು. ಕೊನೆಗೆ 789.70 ಅಂಕ ಏರಿಕೆಯೊಂದಿಗೆ 49,733.84 ರಲ್ಲಿ ದಿನದ ವಹಿವಾಟು ಮುಗಿಸಿತು. 

ಸೆನ್ಸೆಕ್ಸ್ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 49,801.48 ಮತ್ತು 49,066.64ರಲ್ಲಿತ್ತು. ನಿಫ್ಟಿ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 14,890.25 ಮತ್ತು 14,694.95 ರಲ್ಲಿತ್ತು. 

ವಲಯ ಸೂಚ್ಯಂಕಗಳಾದ, ಬ್ಯಾಂಕಿಂಗ್, ಹಣಕಾಸು, ಆಟೋ, ಗ್ರಾಹಕ ಬಳಕೆ ವಸ್ತು ಷೇರುಗಳು  ಮಾರುಕಟ್ಟೆಯನ್ನು ಎತ್ತರಕ್ಕೇರಿಸಿವೆ. ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 26 ಏರಿಕೆ ಕಂಡರೆ 4 ಕಂಪೆನಿಗಳ ಷೇರುಗಳು ಕುಸಿದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com