2.85 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಯೂನಿಕಾರ್ನ್ ಕ್ಲಬ್ ಸೇರಿದ ಭಾರತ್ ಪೇ

2.85 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಫಿನ್ ಟೆಕ್ ಸಂಸ್ಥೆ ಭಾರತ್ ಪೇ ಯೂನಿಕಾರ್ನ್ ಕ್ಲಬ್ ಸೇರಿದ 19 ನೇ ಸ್ಟಾರ್ಟ್ ಅಪ್ ಆಗಿದೆ. 
ಭಾರತ್ ಪೇ
ಭಾರತ್ ಪೇ

ಬೆಂಗಳೂರು: 2.85 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಫಿನ್ ಟೆಕ್ ಸಂಸ್ಥೆ ಭಾರತ್ ಪೇ ಯೂನಿಕಾರ್ನ್ ಕ್ಲಬ್ ಸೇರಿದ 19 ನೇ ಸ್ಟಾರ್ಟ್ ಅಪ್ ಆಗಿದೆ. 

ಇತ್ತೀಚೆಗೆ 350 ಮಿಲಿಯನ್ ಡಾಲರ್ ನಿಧಿ ಸಂಗ್ರಹದ ಮೂಲಕ ಭಾರತ್ ಪೇ ಯೂನಿಕಾರ್ನ್ ಕ್ಲಬ್ ಸೇರಿದೆ. ಇ-ಫಂಡಿಂಗ್ ಗೆ ಅಮೆರಿಕದ ಹೂಡಿಕೆ ದೈತ್ಯ ಟೈಗರ್ ಗ್ಲೋಬಲ್ ನೇತೃತ್ವ ವಹಿಸಿತ್ತು. ಇದರ ಜೊತೆಗೆ ಹೊಸ ಹೂಡಿಕೆದಾರರಾದ ಡ್ರ್ಯಾಗೊನೀರ್ ಹೂಡಿಕೆ ಗ್ರೂಪ್ ಹಾಗೂ ಸ್ಟೆಡ್ಫಾಸ್ಟ್ ಕ್ಯಾಪಿಟಲ್ ಕೂಡ ಇದ್ದವು.

ಭಾರತ್ ಪೇ ಮೌಲ್ಯ ಈ ವರ್ಷದ ಪ್ರಾರಂಭದಲ್ಲಿ 900 ಮಿಲಿಯನ್ ಡಾಲರ್ ನಿಂದ 2.8 ಬಿಲಿಯನ್ ಡಾಲರ್ ಗೆ ಏರಿಕೆ ಕಂಡಿದೆ. ಉದ್ಯೋಗಿಗಳ ಷೇರುಗಳ ಬೈ-ಬ್ಯಾಕ್ ಯೋಜನೆಯ ಮೂಲಕ ಸೆಕೆಂಡರಿ ಷೇರು ಮಾರಾಟದಿಂದ 20 ಮಿಲಿಯನ್ ಡಾಲರ್ ಹಣ ಸಂಗ್ರಹಿಸಿರುವುದೂ ಮೌಲ್ಯದ ಏರಿಕೆಗೆ ಸೇರ್ಪಡೆಗೊಂಡಿದೆ.

ಸುಹೈಲ್ ಸಮೀರ್ ಅವರಿಗೆ ಭಾರತ್ ಪೇ ಸಂಸ್ಥೆ ತನ್ನ ಸಿಇಒ ಆಗಿ ಬಡ್ತಿ ನೀಡಿದ್ದು, ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು ಸಂಸ್ಥೆಯ ಎಂಡಿ ಆಗಿ ಕಾರ್ಯನಿರ್ವಹಿಸಲಿದ್ದಾರೆ.

"ಈಗ ನಮ್ಮ ಬಳಿ 500 ಮಿಲಿಯನ್ ನಗದು ಇದ್ದು, ಭಾರತದ ಮೊದಲ ನೈಜ ಡಿಜಿಟಲ್ ಬ್ಯಾಂಕ್ ನ್ನು ನಿರ್ಮಿಸುವುದಕ್ಕೆ ಅಗತ್ಯವಿರುವ ಸೌಲಭ್ಯಗಳಿವೆ. ಸಣ್ಣ ಉದ್ಯಮಿಗಳಿಗೆ ನೆರವು ನೀಡುವುದರತ್ತ ಭಾರತ್ ಪೇ ಗಮನ ಹರಿಸಲಿದೆ" ಎಂದು ಗ್ರೋವರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com