ಸಗಟು ಹಣದುಬ್ಬರ ಸತತ ಎರಡನೇ ತಿಂಗಳು ಇಳಿಕೆ!

ಉತ್ಪಾದಿತ ಸರಕುಗಳು, ಕಚ್ಚಾ ತೈಲ ಬೆಲೆ ಏರಿಕೆಯ ನಡುವೆಯೂ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿರುವುದರ ಪರಿಣಾಮ ಸಗಟು ಹಣದುಬ್ಬರ ಸತತ 2 ನೇ ತಿಂಗಳು ಕುಸಿತ ಕಂಡಿದೆ. 
ಸಗಟು ಹಣದುಬ್ಬರ (ಸಾಂಕೇತಿಕ ಚಿತ್ರ)
ಸಗಟು ಹಣದುಬ್ಬರ (ಸಾಂಕೇತಿಕ ಚಿತ್ರ)

ನವದೆಹಲಿ: ಉತ್ಪಾದಿತ ಸರಕುಗಳು, ಕಚ್ಚಾ ತೈಲ ಬೆಲೆ ಏರಿಕೆಯ ನಡುವೆಯೂ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿರುವುದರ ಪರಿಣಾಮ ಸಗಟು ಹಣದುಬ್ಬರ ಸತತ 2 ನೇ ತಿಂಗಳು ಕುಸಿತ ಕಂಡಿದೆ. 

ಜುಲೈ ತಿಂಗಳಲ್ಲಿ ಹಣದುಬ್ಬರ ಶೇ.11.16 ಕ್ಕೆ ಕುಸಿದಿದ್ದರೂ ಸತತ ಮೂರನೇ ತಿಂಗಳೂ ಹಣದುಬ್ಬರ, ಕಳೆದ ವರ್ಷದ ಕಡಿಮೆ ಬೇಸ್ ನ ಪರಿಣಾಮವಾಗಿ ಎರಡು ಅಂಕಿಗಳಷ್ಟಿದೆ.  2020 ರ ಜುಲೈ ನಲ್ಲಿ ಡಬ್ಲ್ಯುಪಿಐ ಹಣದುಬ್ಬರ (-)0.25 ರಷ್ಟಿತ್ತು. 

"ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ, 2021 ರ ಜುಲೈ ನಲ್ಲಿ ಹಣದುಬ್ಬರ ದರ ಏರಿಕೆಯಾಗಿರುವುದಕ್ಕೆ ಕಡಿಮೆ ಬೇಸ್ ಪರಿಣಾಮ ಹಾಗೂ ಕಚ್ಚಾ ತೈಲ, ಪೆಟ್ರೋಲಿಯಮ್ ಹಾಗೂ ನೈಸರ್ಗಿಕ ಅನಿಲ,  ಖನಿಜ ತೈಲ, ಆಹಾರ ಉತ್ಪನ್ನಗಳು, ಜವಳಿ; ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳ ಬೆಲೆ ಏರಿಕೆ ಕಾರಣವಾಗಿದೆ" ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ. ಈರುಳ್ಳಿ ಬೆಲೆ ಏರಿಕೆಯ ನಡುವೆಯೂ ಆಹಾರ ಪದಾರ್ಥಗಳ ಹಣದುಬ್ಬರ ಮೂರನೇ ತಿಂಗಳೂ ಇಳಿಕೆಯಾಗಿದ್ದು, ಜೂನ್ ನಲ್ಲಿದ್ದ 3.09 ರಿಂಡ ಜುಲೈ ನಲ್ಲಿ ಶೂನ್ಯಕ್ಕೆ ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com