9 ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಹೊಂದಿದ್ದರೆ ಹೆಚ್ಚುವರಿ ಸಿಮ್ ಕಾರ್ಡ್ ಸಂಪರ್ಕ ರದ್ದು: ದೂರಸಂಪರ್ಕ ಇಲಾಖೆ ಆದೇಶ

ಈ ಬಗ್ಗೆ ದೂರಸಂಪರ್ಕ ಇಲಾಖೆ ಸ್ಥೂಲ ಪರಿಶೀಲನೆ ನಡೆಸಲಿದ್ದು, ಯಾರೇ ಒಬ್ಬ ವ್ಯಕ್ತಿ ವಿವಿಧ ಟೆಲಿಕಾಂ ಸಂಸ್ಥೆಗಳಿಗೆ ಸೇರಿದ ಒಟ್ಟು 9ಕ್ಕೂ ಹೆಚ್ಚು ಸಿಮ್ ಕಾರ್ಡ್ ಹೊಂದಿರುವುದು ಪತ್ತೆಯಾದರೆ ಈ ಕ್ರಮ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೂರಸಂಪರ್ಕ ಇಲಾಖೆ (Department of Telecommunications- DoT) ನೂತನ ಆದೇಶ ಹೊರಡಿಸಿದ್ದು, ಅದರನ್ವಯ 9ಕ್ಕಿಂತ ಹೆಚ್ಚು ಸಿಮ್ ಕಾರ್ಡುಗಳನ್ನು ಹೊಂದಿದ್ದರೆ ಹೆಚ್ಚುವರಿ ಸಿಮ್ ಗಳನ್ನು ಡೀಆಕ್ಟಿವೇಟ್ ಮಾಡಲಾಗುವುದು. 

ಜಮ್ಮು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ 6ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಇದ್ದರೆ ರದ್ದಾಗುವುದು. 

ಈ ಬಗ್ಗೆ ದೂರಸಂಪರ್ಕ ಇಲಾಖೆ ಸ್ಥೂಲ ಪರಿಶೀಲನೆ ನಡೆಸಲಿದ್ದು, ಯಾರೇ ಒಬ್ಬ ವ್ಯಕ್ತಿ ವಿವಿಧ ಟೆಲಿಕಾಂ ಸಂಸ್ಥೆಗಳಿಗೆ ಸೇರಿದ ಒಟ್ಟು 9ಕ್ಕೂ ಹೆಚ್ಚು ಸಿಮ್ ಕಾರ್ಡ್ ಹೊಂದಿರುವುದು ಪತ್ತೆಯಾದರೆ ಎಲ್ಲಾ ಸಿಮ್ ಕಾರ್ಡ್ ಸಂಪರ್ಕವನ್ನು ರೀವೆರಿಫಿಕೇಶನ್ ಮಾಡಬೇಕಾಗಿ ಬರಲಿದೆ. 

ರೀವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ಚಂದಾದಾರರು ತಮಗೆ ಅಗತ್ಯವಿರುವ ಸಿಮ್ ಕಾರ್ಡ್ ಉಳಿಸಿಕೊಂಡು ಅಗತ್ಯ ಇಲ್ಲದೇ ಇರುವ ಸಿಮ್ ಕಾರ್ಡನ್ನು ಡೀಆಕ್ಟಿವೇಟ್ ಮಾಡುವ ಆಯ್ಕೆ ಲಭ್ಯವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com