ಐಟಿಯಿಂದ 2020 ರ ಐಆರ್ ಟಿಎಸ್ ದೃಢೀಕರಣಕ್ಕೆ ಗಡುವು ವಿಸ್ತರಣೆ

2019-20 ನೇ ಆರ್ಥಿಕ ವರ್ಷದಲ್ಲಿ ಐಟಿಆರ್ ಎಸ್ ದೃಢೀಕರಣ ಮಾಡದೇ ಇರುವ ತೆರಿಗೆ ಪಾವತಿದಾರರಿಗೆ ನೀಡಲಾಗಿದ್ದ ಗಡುವನ್ನು 2022 ರ ಫೆ.28 ವರೆಗೆ ವಿಸ್ತರಿಸಲಾಗಿದೆ. 
ಐಟಿ ಇಲಾಖೆ
ಐಟಿ ಇಲಾಖೆ

ನವದೆಹಲಿ: 2019-20 ನೇ ಆರ್ಥಿಕ ವರ್ಷದಲ್ಲಿ ಐಟಿಆರ್ ಎಸ್ ದೃಢೀಕರಣ ಮಾಡದೇ ಇರುವ ತೆರಿಗೆ ಪಾವತಿದಾರರಿಗೆ ನೀಡಲಾಗಿದ್ದ ಗಡುವನ್ನು 2022 ರ ಫೆ.28 ವರೆಗೆ ವಿಸ್ತರಿಸಲಾಗಿದೆ. 

ಡಿಜಿಟಲ್ ಸಹಿ ಇಲ್ಲದೇ ಆದಾಯ ತೆರಿಗೆ ರಿಟರ್ನ್ ನ್ನು ಸಲ್ಲಿಕೆ ಮಾಡುವವರು ಆಧಾರ್ ಒಟಿಪಿ, ನೆಟ್ ಬ್ಯಾಂಕಿಂಗ್ ಅಥವಾ ಡಿಮ್ಯಾಟ್ ಖಾತೆಗೆ ಕಳಿಸಲಾಗುವ ಕೋಡ್ ನೊಂದಿಗೆ ರಿಟರ್ನ್ಸ್ ನ್ನು ದೃಢೀಕರಿಸಬೇಕಾಗುತ್ತದೆ. 

ಇದಕ್ಕೆ ಪರ್ಯಾಯವಾಗಿ ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಕೆ ಮಾಡಿರುವುದರ ಭೌತಿಕ ಪ್ರತಿಯನ್ನೂ ಕೇಂದ್ರೀಕೃತ ಸಂಸ್ಕರಣಾ ಕೇಂದ್ರ (CPC)ಕ್ಕೆ ಕಳಿಸಬೇಕಾಗುತ್ತದೆ. ಐಟಿಆರ್-ವಿ ಫಾರ್ಮ್ ಮೂಲಕ ದೃಢೀಕರಣ ಮಾಡಿದಲ್ಲಿ ರಿಟರ್ನ್ ಸಲ್ಲಿಕೆ ಮಾಡಲಾಗಿಲ್ಲ ಎಂದು ಪರಿಗಣಿಸಲಾಗುತ್ತದೆ. 

ಡಿ.28 ರಂದು ಸಿಬಿಡಿಟಿ ಪ್ರಕಟ ಮಾಡಿದ್ದ ಮಾಹಿತಿಯ ಪ್ರಕಾರ 2020-21 ನೇ ಸಾಲಿನಲ್ಲಿ ವಿದ್ಯುನ್ಮಾನವಾಗಿ ಸಲ್ಲಿಕೆ ಮಾಡಲಾಗಿದ್ದ ಬೃಹತ್ ಪ್ರಮಾಣದ ಐಆರ್ ಟಿಎಸ್ ಗಳು ಇನ್ನೂ ಬಾಕಿ ಉಳಿದಿದ್ದು, ಐಟಿಆರ್-ವಿ ಫಾರ್ಮ್ ನ ರಶೀದಿಯ ಕಾರಣ ಅಥವಾ ಇ-ದೃಢೀಕರಣ ಇನ್ನೂ ಆಗದೇ ಇರುವುದು ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com