ಬಜೆಟ್ ಎಫೆಕ್ಟ್: ಸೆನ್ಸೆಕ್ಸ್ 2314.84 ಅಂಕ ಏರಿಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸಂಸತ್ ನಲ್ಲಿ ಮಂಡಿಸಿದ ಬಜೆಟ್ ಗೆ ಹೂಡಿಕೆದಾರರು ಸ್ವಾಗತಿಸಿರುವ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2314.84 ಅಂಕ ಏರಿಕೆ ಕಂಡು 48,600.61ಕ್ಕೆ ತಲುಪಿದೆ.

Published: 01st February 2021 11:41 PM  |   Last Updated: 01st February 2021 11:41 PM   |  A+A-


Sensex crashes 552 points, Nifty settles at 9,814 on weak global cues

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಮುಂಬೈ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸಂಸತ್ ನಲ್ಲಿ ಮಂಡಿಸಿದ ಬಜೆಟ್ ಗೆ ಹೂಡಿಕೆದಾರರು ಸ್ವಾಗತಿಸಿರುವ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2314.84 ಅಂಕ ಏರಿಕೆ ಕಂಡು 48,600.61ಕ್ಕೆ ತಲುಪಿದೆ.

ನಿಫ್ಟಿ ಸಹ 646.60 ಅಂಕ ಏರಿಕೆ ಕಂಡು 14,281.20 ಕ್ಕೆ ಮುಟ್ಟಿದೆ. ಸೆನ್ಸೆಕ್ಸ್ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 48,764.40 ಮತ್ತು 46,433.65ರಲ್ಲಿತ್ತು.

ನಿಫ್ಟಿ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 14,336.35 ಮತ್ತು 13,661.75ರಲ್ಲಿತ್ತು. ವಲಯ ಸೂಚ್ಯಂಕಗಳಾದ ಬ್ಯಾಂಕ್ಸ್ ಷೇರುಗಳು ಶೇ 8, ಹಣಕಾಸು ಷೇರುಗಳು ಶೇ 7, ರಿಯಾಲ್ಟಿ ಶೇ 6, ಬಂಡವಾಳ ಸರಕು ಷೇರುಗಳು ಶೇ 5 ಹಾಗೂ ಲೋಹ ಷೇರುಗಳು ಶೇ 4ರಷ್ಟು ಏರಿಕೆಯಾಗಿವೆ.

ಷೇರುಗಳ ಪೈಕಿ ಇಂಡಸ್ ಇಂಡ್ ಬ್ಯಾಂಕ್, ಪಿಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಎಸ್‌ಬಿಐ ಮತ್ತು ಎಲ್ ಅಂಡ್ ಟಿ ಷೇರುಗಳು ಹೆಚ್ಚು ಲಾಭ ಗಳಿಸಿವೆ. ಪ್ರಮುಖ 30 ಷೇರುಗಳ ಪೈಕಿ 28 ಏರಿಕೆ ಕಂಡರೆ 2 ಕಂಪೆನಿಗಳ ಷೇರುಗಳು ಕುಸಿದಿವೆ.


Stay up to date on all the latest ವಾಣಿಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp