ಕೇಂದ್ರ ಬಜೆಟ್ 2021 ಎಫೆಕ್ಟ್: ದಿನದ ಆರಂಭದಲ್ಲೇ 50 ಸಾವಿರ ಗಡಿ ದಾಟಿದ ಸೆನ್ಸೆಕ್ಸ್
ಕೇಂದ್ರ ಬಜೆಟ್ 2021ರ ಬಳಿಕದ ಮಾರನೆಯ ದಿನವೂ ಭಾರತೀಯ ಷೇರುಮಾರುಕಟ್ಟೆಯ ನಾಗಾಲೋಟ ಮುಂದುವರೆದಿದ್ದು, ಇಂದಿನ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 50 ಸಾವಿರ ಗಡಿ ಗಾಟಿದೆ.
Published: 02nd February 2021 11:30 AM | Last Updated: 02nd February 2021 11:30 AM | A+A A-

ಸಂಗ್ರಹ ಚಿತ್ರ
ಮುಂಬೈ: ಕೇಂದ್ರ ಬಜೆಟ್ 2021ರ ಬಳಿಕದ ಮಾರನೆಯ ದಿನವೂ ಭಾರತೀಯ ಷೇರುಮಾರುಕಟ್ಟೆಯ ನಾಗಾಲೋಟ ಮುಂದುವರೆದಿದ್ದು, ಇಂದಿನ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 50 ಸಾವಿರ ಗಡಿ ಗಾಟಿದೆ.
ಹೌದು ಇಂದು ದಿನದ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಬರೊಬ್ಬರಿ 1400ಕ್ಕೂ ಹೆಚ್ಚು ಅಂಕಗಳ ಗಳಿಕೆಯೊಂದಿಗೆ 50 ಸಾವಿರ ಗಡಿ ದಾಟಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1459 ಅಂಕಗಳ ಏರಿಕೆಯೊಂದಿಗೆ 50,000 ಗಡಿದಾಟಿತು. ಇನ್ನು ನಿಫ್ಟಿ ಕೂಡ 750 ಅಂಕಗಳ ಏರಿಕೆಯೊಂದಿಗೆ 14, 500 ಅಂಕಗಳಿಗೆ ಏರಿಕೆಯಾಗಿದೆ. ಇದು ಕಳೆದ 52 ವಾರಗಳಲ್ಲಿ ನಿಫ್ಟಿ ಗಳಿಸಿದ ಗರಿಷ್ಠ ಮಾರುಕಟ್ಟೆ ಗಳಿಕೆಯಾಗಿದೆ.
ಇಂದಿನ ವಹಿವಾಟಿನ ಪರಿಣಾಮ ಸೆನ್ಸೆಕ್ಸ್ನ ಬಹುತೇಕ ಎಲ್ಲ ಕಂಪನಿಗಳ ಷೇರುಗಳಲ್ಲಿ ಏರಿಕೆ ಕಂಡು ಬಂದಿದ್ದು, ಪ್ರಮುಖವಾಗಿ ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಲಾರ್ಸೆನ್ ಮತ್ತು ಟೂಬ್ರೊ (ಎಲ್ ಅಂಡ್ ಟಿ), ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸಂಸ್ಥೆಗಳ ಷೇರುಗಳು ಲಾಭಾಂಶ ಕಂಡಿವೆ.