ರಿಲಯನ್ಸ್ ಇಂಡಸ್ಟ್ರೀಸ್- ಫ್ಯೂಚರ್ ರಿಟೇಲ್ ಒಪ್ಪಂದಕ್ಕೆ ಹೈಕೋರ್ಟ್ ಬ್ರೇಕ್; ಅಮೆಜಾನ್ ಗೆ ರಿಲೀಫ್

ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ರೀಟೇಲ್‌ ವೆಂಚರ್‌ ಲಿಮಿಟೆಡ್‌ (ಆರ್‌ಆರ್‌ವಿಎಲ್‌) ಹಾಗೂ ಫ್ಯೂಚರ್ ಗ್ರೂಪ್ ನಡುವಿನ ಸಾವಿರಾರು ಕೋಟಿ ರೂಪಾಯಿ ಡೀಲ್‌ಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

Published: 03rd February 2021 01:21 PM  |   Last Updated: 03rd February 2021 01:24 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ನವದೆಹಲಿ: ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ರೀಟೇಲ್‌ ವೆಂಚರ್‌ ಲಿಮಿಟೆಡ್‌ (ಆರ್‌ಆರ್‌ವಿಎಲ್‌) ಹಾಗೂ ಫ್ಯೂಚರ್ ಗ್ರೂಪ್ ನಡುವಿನ ಸಾವಿರಾರು ಕೋಟಿ ರೂಪಾಯಿ ಡೀಲ್‌ಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ,

ಫ್ಯೂಚರ್ ಸಮೂಹದ ಚಿಲ್ಲರೆ ಹಾಗೂ ಸಗಟು ವ್ಯವಹಾರ, ಲಾಜಿಸ್ಟಿಕ್ಸ್ ಹಾಗೂ ವೇರ್ ಹೌಸಿಂಗ್ ವ್ಯವಹಾರವನ್ನು ಸರಾಸರಿ ಮೊತ್ತ ರೂ. 24,713 ಕೋಟಿಗೆ ಖರೀದಿ ವ್ಯವಹಾರ ನಡೆದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಂಗ ಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಈ ಹಿಂದೆ ಬಿಎಸ್‌ಇಗೆ ತಿಳಿಸಿತ್ತು. ಆದರೆ ಈ ಡೀಲ್ ಕುರಿತಾಗಿ ಅಮೆಜಾನ್ ಆಕ್ಷೇಪ ಎತ್ತಿತ್ತು.

ಅದಾಗಲೇ ಫ್ಯೂಚರ್‌ ಗ್ರೂಪ್‌ನಲ್ಲಿ ಸಣ್ಣ ಪ್ರಮಾಣದ ಹಣ ಹೂಡಿಕೆ ಮಾಡಿದ್ದ ಅಮೆಜಾನ್‌ ಈ ಡೀಲ್‌ನ ವಿರುದ್ಧ ಸಿಂಗಾಪುರ ನ್ಯಾಯಾಲಯ ಹಾಗೂ ದಿಲ್ಲಿಯ ಹೈಕೋರ್ಟ್‌ ಮೊರೆ ಹೋಗಿತ್ತು.

ಇದೀಗ ರಿಲಯನ್ಸ್ ಇಂಡಸ್ಟ್ರೀಸ್-ಫ್ಯೂಚರ್ ರಿಟೇಲ್ ಒಪ್ಪಂದಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿದ್ದು, ಅಮೆಜಾನ್‌ ಡಾಟ್‌ ಕಾಮ್‌ ನ ಹಕ್ಕುಗಳನ್ನು ರಕ್ಷಿಸಲು ತಡೆಯಾಜ್ಞೆ ಹೊರಡಿಸಿರುವುದಾಗಿ ತಿಳಿಸಿದೆ. ಅಲ್ಲದೆ, ಒಪ್ಪಂದವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಿಶೋರ್‌ ಬಿಯಾನಿಯ ಫ್ಯೂಚರ್‌ ಗ್ರೂಪ್‌ಗೆ ಸೂಚಿಸಿದೆ.

ದೆಹಲಿ ನ್ಯಾಯಾಲಯದ ಆದೇಶವನ್ನು ಅಮೆಜಾನ್ ಸ್ವಾಗತಿಸಿದ್ದು, ಉದ್ಯಮಿ ಮುಕೇಶ್ ಅಂಬಿಗೆ ಹಿನ್ನಡೆಯುಂಟಾದಂತಾಗಿದೆ.


Stay up to date on all the latest ವಾಣಿಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp