ಹಣಕಾಸು ವರ್ಷ 2020-21ರ ನಾಲ್ಕನೇ ತ್ರೈಮಾಸಿಕ ವಿತ್ತೀಯ ನೀತಿ: ಚಿಲ್ಲರೆ ಹಣದುಬ್ಬರ ಶೇ.5.20; ಆರ್ಬಿಐ ಅಂದಾಜು

ಪ್ರಸಕ್ತ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರದ ಶೇಕಡಾ 5.2ರಷ್ಟು ಇರಬಹುದೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂದಾಜು ಮಾಡಿದೆ.

Published: 05th February 2021 12:54 PM  |   Last Updated: 05th February 2021 01:14 PM   |  A+A-


RBI

ಆರ್ ಬಿಐ

Posted By : Sumana Upadhyaya
Source : PTI

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರದ ಶೇಕಡಾ 5.2ರಷ್ಟು ಇರಬಹುದೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂದಾಜು ಮಾಡಿದೆ.

ಇನ್ನು ಮುಂದೆ ದೇಶದ ಆರ್ಥಿಕತೆ ಸೂಚ್ಯಂಕ ಏರುಗತಿಯಲ್ಲಿ ಸಾಗುತ್ತದೆ ಎಂದು ನಂಬುತ್ತೇವೆ. ಚಿಲ್ಲರೆ ಹಣದುಬ್ಬರ ಶೇಕಡಾ 4ರೊಳಗೆ ತಾಳಿಕೆಯ ಮಟ್ಟದಲ್ಲಿದೆ. ಪ್ರಸಕ್ತ ಹಣಕಾಸು ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 5.2ಕ್ಕೆ ಪರಿಷ್ಕ್ರತಗೊಳಿಸಲಾಗಿದೆ. ಸದ್ಯದಲ್ಲಿ ತರಕಾರಿ ಬೆಲೆಗಳು ದುಬಾರಿಯಾಗುವ ಸಾಧ್ಯತೆ ಕಡಿಮೆಯಿದೆ ಎಂದು ನಾಲ್ಕನೇ ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟಿಸಿ ಶಕ್ತಿಕಾಂತ್ ದಾಸ್ ಹೇಳಿದರು.

ಕಳೆದ ಡಿಸೆಂಬರ್ ನಲ್ಲಿ ಮೂರನೇ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 5.8ರ ಸೂಚ್ಯಂಕವನ್ನು ಆರ್ ಬಿಐ ತೋರಿಸಿತ್ತು. ಮುಂದಿನ ಹಣಕಾಸು ವರ್ಷದ ಮೊದಲ ಅರ್ಧ ವರ್ಷದಲ್ಲಿ ಹಣದುಬ್ಬರ ಶೇಕಡಾ 5.2ರಿಂಂದ ಶೇಕಡಾ 5ರಷ್ಟಿರಬಹುದು ಎಂದು ಮತ್ತು ಮುಂದಿನ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಹಣದುಬ್ಬರ ಶೇಕಡಾ 4.3ರಷ್ಟಿರಬಹುದು ಎಂದು ತೋರಿಸಿದೆ. 

Stay up to date on all the latest ವಾಣಿಜ್ಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp