'ಹಣದುಬ್ಬರ ನಿಯಂತ್ರಣಕ್ಕೆ ಇಂಧನ ತೆರಿಗೆ ಕಡಿತ ಮಾಡಿ': ಗ್ರಾಹಕರ ಬೆನ್ನಿಗೆ ನಿಂತ ಆರ್ ಬಿಐ

ಹಣದುಬ್ಬರ ನಿಯಂತ್ರಣಕ್ಕೆ ಇಂಧನಗಳ ಮೇಲಿನ ತೆರಿಗೆಯನ್ನು ಕಡಿತ ಮಾಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

Published: 06th February 2021 02:08 PM  |   Last Updated: 06th February 2021 02:16 PM   |  A+A-


Petrol Pumps

ಪೆಟ್ರೋಲ್ ಬಂಕ್

Posted By : Srinivasamurthy VN
Source : PTI

ನವದೆಹಲಿ: ಹಣದುಬ್ಬರ ನಿಯಂತ್ರಣಕ್ಕೆ ಇಂಧನಗಳ ಮೇಲಿನ ತೆರಿಗೆಯನ್ನು ಕಡಿತ ಮಾಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಹೌದು.. ಭಾರತೀಯ ರಿಸರ್ವ್ ಬ್ಯಾಂಕ್ ದುಬಾರಿ ಇಂಧನ ದರಗಳಿಂದಾಗಿ ಕೆಂಗಿಟ್ಟಿದ್ದ ಸಾಮಾನ್ಯಗ್ರಾಹಕರ ಬೆನ್ನಿಗೆ ನಿಂತಿದ್ದು, ಕೂಡಲೇ ದುಬಾರಿ ಇಂಧನ ತೆರಿಗೆಗಳನ್ನು ಕಡಿತ ಮಾಡಿ.. ಇದರಿಂದ ಹಣದುಬ್ಬರ ನಿಯಂತ್ರಣವಾಗುತ್ತದೆ ಮತ್ತು ಆ ಮೂಲಕ ಪೆಟ್ರೋಲ್ ಮತ್ತು ಡೀಸೆಲ್‌ಗೆ ಹೆಚ್ಚಿನ ಬೆಲೆ ನೀಡುತ್ತಿರುವ ಗ್ರಾಹಕರಿಗೆ ಸ್ವಲ್ಪ ಪರಿಹಾರ ನೀಡಿದಂತಾಗುತ್ತದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ. ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ 2.5 ರೂ ಮತ್ತು 4 ರೂ. ಗಳಂತೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಅನ್ನು ವಿಧಿಸಿದೆ. ಇದರ ಬೆನ್ನಲ್ಲೇ ಆರ್ ಬಿಐ ಕೇಂದ್ರ ಸರ್ಕಾರಕ್ಕೆ ಈ ಸಲಹೆ ನೀಡಿದೆ.  

ಅಂತೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ದೀರ್ಘಾವಧಿಯ ಹಣದುಬ್ಬರವಿಳಿತಕ್ಕೆ ಕಾರಣವಾಗುವ ಪರಿಸ್ಥಿತಿಗಳನ್ನು ಸೃಷ್ಟಿಸಬೇಕೆಂದು ಆರ್ ಬಿಐ  ಬಯಸಿದೆ.

'ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿತ ಮಾಡುವುದರಿಂದ ವೆಚ್ಚ-  ಹಣದುಬ್ಬರದ ಒತ್ತಡಗಳು ಕಡಿಮೆಯಾಗಬಹುದು' ಎಂದು ಹಣಕಾಸು ನೀತಿ ಸಮಿತಿ (ಎಂಪಿಸಿ) ಶುಕ್ರವಾರ ಹೇಳಿದೆ.

ಕೇಂದ್ರವು ಇಂಧನದ ಮೇಲೆ ಫ್ಲಾಟ್ ಮತ್ತು ಜಾಹೀರಾತು ಮೌಲ್ಯದ ದರಗಳನ್ನು ವಿಧಿಸುತ್ತದೆ. ಉದಾಹರಣೆಗೆ, ಬ್ರಾಂಡ್ ರಹಿತ ಪೆಟ್ರೋಲ್‌ಗೆ ಶೇಕಡಾ 2.5 ರಷ್ಟು ಕಸ್ಟಮ್ಸ್ ಸುಂಕವಿದೆ. ಇದರೊಂದಿಗೆ, ಪ್ರತಿ ಲೀಟರ್‌ ಗೆ 14.90 ರೂ. ಕೌಂಟರ್‌ ವೈಲಿಂಗ್ ಡ್ಯೂಟಿ, 18 ರೂ. ಹೆಚ್ಚುವರಿ ಕಸ್ಟಮ್ಸ್ ಸುಂಕ, 1.40 ರೂ. ಮೂಲ ಅಬಕಾರಿ ಸುಂಕ, 11 ರೂ. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಹೊಸದಾಗಿ ವಿಧಿಸಲಾದ ಸೆಸ್‌ನ 2.5 ರೂ. ಇದೆ. ಅಲ್ಲದೆ, ರಾಜ್ಯಗಳಲ್ಲಿನ ತೆರಿಗೆಗಳಲ್ಲಿ ಏಕರೂಪತೆಯಿಲ್ಲ ಎಂಪಿಸಿ ಅಭಿಪ್ರಾಯಪಟ್ಟಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಐಸಿಆರ್ ಎ ರೇಟಿಂಗ್ಸ್‌ನ ಪ್ರಧಾನ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಅವರು, 'ಇಂಧನಗಳ ಮೇಲಿನ ಪರೋಕ್ಷ ತೆರಿಗೆಯನ್ನು ಕಡಿತಗೊಳಿಸಿದರೆ ಹಣದುಬ್ಬರವನ್ನು ತೀವ್ರವಾಗಿ ನಿಯಂತ್ರಿಸಬಹುದು ಎಂದು ಹೇಳಿದ್ದಾರೆ.


Stay up to date on all the latest ವಾಣಿಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp