ಫ್ಲಿಪ್ ಕಾರ್ಟ್ ನಲ್ಲಿ ಟೆಕ್ನೋ ಅನ್ಸ್ಟಾಪಬಲ್ ಡೇಸ್ ಸೇಲ್: ಟೆಕ್ನೋ ಸ್ಮಾರ್ಟ್ ಫೋನ್ ಗಳಿಗೆ ಭಾರಿ ರಿಯಾಯಿತಿ ಮತ್ತು ಆಫರ್

ಜಾಗತಿಕ ಪ್ರೀಮಿಯಂ ಸ್ಮಾರ್ಟ್ ಫೋನ್ ಬ್ರ್ಯಾಂಡ್  TECNO ಭಾರತದಲ್ಲಿ ವ್ಯಾಲೆಂಟೈನ್ಸ್ ಡೇ ಸಪ್ತಾಹದ ಸಂಭ್ರಮವನ್ನು ಆಚರಿಸಲು ಟೆಕ್ನೋ ಅನ್ ಸ್ಟಾಪ್ ಡೇಸ್ ಸೇಲ್ ನ್ನು ಘೋಷಿಸಿದೆ.

Published: 13th February 2021 08:52 PM  |   Last Updated: 15th February 2021 12:33 PM   |  A+A-


TECNO Unstoppable Days Sale

ಟೆಕ್ನೋ ಅನ್ ಸ್ಟಾಪ್ ಡೇಸ್ ಸೇಲ್

Posted By : Srinivas Rao BV
Source : Online Desk

ಬೆಂಗಳೂರು: ಜಾಗತಿಕ ಪ್ರೀಮಿಯಂ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಟೆಕ್ನೋ (TECNO) ಭಾರತದಲ್ಲಿ ವ್ಯಾಲೆಂಟೈನ್ಸ್ ಡೇ ಸಪ್ತಾಹದ ಸಂಭ್ರಮವನ್ನು ಆಚರಿಸಲು ಟೆಕ್ನೋ ಅನ್ ಸ್ಟಾಪ್ ಡೇಸ್ ಸೇಲ್ ನ್ನು ಘೋಷಿಸಿದೆ. 

ಟೆಕ್ನೋ ನ ಈ ಹೊಸ ಅಭಿಯಾನವು ತನ್ನ ಅಭಿಮಾನಿಗಳಿಗೆ ಫೆಬ್ರವರಿ 12 ರಿಂದ 15 ರ ವರೆಗೆ ಫ್ಲಿಪ್ ಕಾರ್ಟ್ ನ ಸ್ಪಾರ್ಕ್ (SPARK), (ಕ್ಯಾಮನ್)CAMON ಮತ್ತು ಪೋವಾ (POVA) ಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮವಾದ ಆಫರ್ ಗಳನ್ನು ನೀಡುತ್ತದೆ. 

4 ವರ್ಷಗಳ ಹಿಂದೆ ಭಾರತದಲ್ಲಿ ಬ್ರ್ಯಾಂಡ್ ಆರಂಭವಾದಾಗಿನಿಂದ, ಟೆಕ್ನೊ ಪ್ರಬಲ ಬೆಳವಣಿಗೆಯನ್ನು ಕಂಡಿದೆ. 10 ಸಾವಿರ ರೂಪಾಯಿಗಳ ವಿಭಾಗದಲ್ಲಿ ಭಾರತದ ಟಾಪ್ 6 ಸ್ಮಾರ್ಟ್ ಫೋನ್ ಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಇತ್ತೀಚೆಗೆ ಬ್ರ್ಯಾಂಡ್ ಭಾರತದಲ್ಲಿ 8 ಮಿಲಿಯನ್+ ಗ್ರಾಹಕ ನೆಲೆಯನ್ನು ಸಾಧಿಸುವ ಮೈಲಿಗಲ್ಲನ್ನು ಸಾಧಿಸಿದೆ. 

ಅನ್ ಸ್ಟಾಪ್ ಡೇಸ್ ನಲ್ಲಿ ಗ್ರಾಹಕರಿಗೆ ಟೆಕ್ನೋ ಸ್ಮಾರ್ಟ್ ಫೋನ್ ಗಳಾದ ಟೆಕ್ನೋ ಪೋವಾ, ಟೆಕ್ನೋ ಕ್ಯಾಮನ್ 16, ಟೆಕ್ನೋ ಸ್ಪಾರ್ಕ್ 6 ಗೋ ಮತ್ತು ಟೆಕ್ನೋ ಸ್ಪಾರ್ಕ್ ಪವರ್ 2 ಏರ್ ಅನ್ನು ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.
 
ಟೆಕ್ನೋ ಕ್ಯಾಮನ್: 16 11,499 ಬೆಲೆಯಲ್ಲಿ ಲಭ್ಯವಿದ್ದು, '64ಎಂಪಿ ಕ್ವಾಡ್ ಕ್ಯಾಮ್ ವಿತ್ ಐ ಆಟೋಫೋಕಸ್ ಫೀಚರ್ ಮತ್ತು 12K ಅಡಿಯಲ್ಲಿರುವ ಟಿಎಐವೋಸ್ ಚಾಲಿತ ಪ್ರೀಮಿಯಂ AI-ಸಕ್ರಿಯ ಅಲ್ಟ್ರಾ ನೈಟ್ ಲೆನ್ಸ್ ನ್ನು ಹೊಂದಿದೆ. 

6.8 HD+ ಡಾಟ್ ಇನ್-ಡಿಸ್ ಪ್ಲೇಯನ್ನು ಡಿವೈಸ್, 16MP AI ಫ್ರಂಟ್ ಕ್ಯಾಮೆರಾ, ಮತ್ತು ಲೈಟ್ ಸೆನ್ಸಾರ್ ಅನ್ನು ಈ ಮೊಬೈಲ್ ಹೊಂದಿದೆ. ಮೀಡಿಯಾಟೆಕ್ ಹೀಲಿಯೊ G70 ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್ ಫೋನ್ ಹೈಪರ್ ಎಂಜಿನ್ ಫಾಸ್ಟ್ AI ಪ್ರೊಸೆಸರ್, ಗೇಮಿಂಗ್ ಮತ್ತು ದೈನಂದಿನ ಬಳಕೆಗೆ ಉತ್ತಮವಾಗಿದೆ. ಅಲ್ಲದೇ 5,000 ಎಂಎಹೆಚ್ ಬ್ಯಾಟರಿ ಮತ್ತು 4GB RAM + 64GB ಸ್ಟೋರೇಜ್ ಹೊಂದಿದೆ.

ಟೆಕ್ನೋ ಪೋವಾ ಪ್ರಸ್ತುತ ಅತ್ಯಂತ ಸ್ಪರ್ಧಾತ್ಮಕ ಸ್ಮಾರ್ಟ್ ಫೋನ್ ಆಗಿರುವ ಹೆಲಿಯೊ G80 ಪ್ರೊಸೆಸರ್ 6000 mAh ಬ್ಯಾಟರಿ, 18W ಡ್ಯುಯಲ್ ಐಸಿ ಫಾಸ್ಟ್ ಚಾರ್ಜರ್, 6.8 ಡಾಟ್ ಇನ್-ಡಿಸ್ ಪ್ಲೇ ಮತ್ತು 4GB LPDDR4x RAM ನ್ನು ಹೊಂದಿದ್ದು 10499 ರೂಪಾಯಿಗಳಲ್ಲಿ ಲಭ್ಯವಿದೆ. AI ಕ್ವಾಡ್ ರಿಯರ್ ಕ್ಯಾಮೆರಾ (16 MP + 2MP + 2MP + AI ಲೆನ್ಸ್) ಜೊತೆಗೆ 8MP ಸೆಲ್ಫಿ ಕ್ಯಾಮೆರಾ ವನ್ನು ಅಳವಡಿಸಲಾಗಿದೆ.

ಟೆಕ್ನೋ ಸ್ಪಾರ್ಕ್ 6 Go: ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಜನಪ್ರಿಯ ಸ್ಪಾರ್ಕ್ ಸರಣಿಯ ಸ್ಮಾರ್ಟ್ ಫೋನ್ ಇದಾಗಿದ್ದು, 4GB + 64GB ಸ್ಟೋರೇಜ್ ಸ್ಮಾರ್ಟ್ ಫೋನ್ ಅನ್ನು ಹೊಂದಿದೆ. 

6.52 HD+ ಡಾಟ್ ನಾಚ್ ಡಿಸ್ ಪ್ಲೇ,5000 mAh ಬ್ಯಾಟರಿ ಮತ್ತು 13MP ಡ್ಯುಯಲ್ ಹಿಂಭಾಗದ ಕ್ಯಾಮೆರಾ ವನ್ನು ಹೊಂದಿದ್ದು, ಕಡಿಮೆ ಬೆಳಕಿನಲ್ಲಿಯೂ ಸಹ ಕ್ಲಿಯರಿಂಗ್ ಮತ್ತು ಕ್ಲಿಯರ್ ಫೋಟೋಗಳನ್ನು ಸೆರೆಹಿಡಿಯಲಿದೆ.  8 MP AI ಸೆಲ್ಫಿ ಕ್ಯಾಮೆರಾ, ಮೈಕ್ರೋ ಸ್ಲಿಟ್ ಫ್ರಂಟ್ ಫ್ಲಾಷ್ ಅನ್ನು ಇದು ಹೊಂದಿದೆ.

ಟೆಕ್ನೋ ಸ್ಪಾರ್ಕ್ ಪವರ್ 2 ಏರ್: 6000 mAh ಬ್ಯಾಟರಿ, ಎಐ  ಪವರ್ ಚಾರ್ಜಿಂಗ್ ಮತ್ತು ಸುರಕ್ಷಿತ ಚಾರ್ಜಿಂಗ್, 6.95- ಇಂಚಿನ ಡಾಟ್ ನಾಚ್ ಡಿಸ್ ಪ್ಲೇ ಮತ್ತು 13MP AI ಪವರ್ಡ್ ಕ್ವಾಡ್ ಕ್ಯಾಮೆರಾ ಇರುವ ಈ ಮೊಬೈಲ್ ರೂ. 7999 ಗಳಿಗೆ ಲಭ್ಯವಿದ್ದು, ಸ್ಟಿರಿಯೊ ಸೌಂಡ್ ಜೊತೆಗೆ ಡ್ಯುಯಲ್ ಸ್ಪೀಕರ್ ಗಳನ್ನು ಹೊಂದಿದೆ. 3GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಇದು ಲಭ್ಯವಿದೆ.


Stay up to date on all the latest ವಾಣಿಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp