ಎಲ್ ಪಿಜಿ ತುಟ್ಟಿ: ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿ!

ಎಲ್ ಪಿಜಿ ಅಡುಗೆ ಅನಿಲ ದರ ಏರಿಕೆ ಮಾಡಲಾಗಿದ್ದು, ಫೆ.14 ರ ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. 

Published: 14th February 2021 11:05 PM  |   Last Updated: 14th February 2021 11:05 PM   |  A+A-


LPG Gas

ಎಲ್ ಪಿ ಜಿ ಗ್ಯಾಸ್

Posted By : Srinivas Rao BV
Source : PTI

ನವದೆಹಲಿ: ಎಲ್ ಪಿಜಿ ಅಡುಗೆ ಅನಿಲ ದರ ಏರಿಕೆ ಮಾಡಲಾಗಿದ್ದು, ಫೆ.14 ರ ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. 

14.2 ಕೆಜಿ ಸಿಲಿಂಡರ್ ದರ 50 ರೂಪಾಯಿ ಏರಿಕೆ ಮಾಡಲಾಗಿದ್ದು,  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಸಿಲಿಂಡರ್ ದರ 769 ರೂಪಾಯಿಯಷ್ಟಾಗಲಿದೆ. 

ಸಬ್ಸಿಡಿ ರಹಿತ ಎಲ್ ಪಿ ಜಿ ಸಿಲಿಂಡರ್ ದರವನ್ನು ಸಾಮಾನ್ಯವಾಗಿ ತಿಂಗಳಿಗೊಮ್ಮೆ ಏರಿಕೆ ಮಾಡಲಾಗುತ್ತದೆ. ಸ್ಥಳೀಯ ತೆರಿಗೆ ಆಧಾರದಲ್ಲಿ ದೇಶಾದ್ಯಂತ ಎಲ್ ಪಿಜಿ ದರ ವ್ಯತ್ಯಯವಾಗಲಿದೆ. 

ಫೆ. 4 ರಂದು ಸಬ್ಸಿಡಿ ರಹಿತ ಸಿಲಿಂಡರ್ ದರವನ್ನು 25 ರೂಪಾಯಿಗಳನ್ನು ಏರಿಕೆ ಮಾಡಲಾಗಿತ್ತು. ಸರ್ಕಾರ ಪ್ರತಿ ವರ್ಷ 12 ಸಬ್ಸಿಡಿ ಸಹಿತ ಸಿಲಿಂಡರ್ ಗಳನ್ನು ನೀಡಲಿದೆ. 


Stay up to date on all the latest ವಾಣಿಜ್ಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp