ಸತತ 11ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ: ಇಂದಿನ ದರ ಹೀಗಿದೆ...

ತೈಲ ಉತ್ಪನ್ನಗಳ ಬೆಲೆ ದೇಶದಲ್ಲಿ ಸತತ 11ನೇ ದಿನವಾದ ಶುಕ್ರವಾರ ಕೂಡ ಏರಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 90 ರೂಪಾಯಿ ಗಡಿ ದಾಟಿದೆ.

Published: 19th February 2021 08:43 AM  |   Last Updated: 19th February 2021 12:28 PM   |  A+A-


Representional image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : ANI

ನವದೆಹಲಿ: ತೈಲ ಉತ್ಪನ್ನಗಳ ಬೆಲೆ ದೇಶದಲ್ಲಿ ಸತತ 11ನೇ ದಿನವಾದ ಶುಕ್ರವಾರ ಕೂಡ ಏರಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 90 ರೂಪಾಯಿ ಗಡಿ ದಾಟಿದೆ.

ಇಂದು ಪೆಟ್ರೋಲ್ ಬೆಲೆ 31 ಪೈಸೆ ಏರಿಕೆಯಾಗಿದ್ದು, ಡೀಸೆಲ್ ದರ 33 ಪೈಸೆಯಷ್ಟು ಹೆಚ್ಚಾಗಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಆಧಾರವಾಗಿಟ್ಟುಕೊಂಡು ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸವಾಗುತ್ತದೆ. ದೇಶದ ಎಲ್ಲಾ ಮೆಟ್ರೊ ನಗರಗಳಲ್ಲಿ ಪೆಟ್ರೋಲ್ ದರ 90 ರೂಪಾಯಿ ಗಡಿ ದಾಟಿದೆ. ಡೀಸೆಲ್ ಬೆಲೆ ಲೀಟರ್ ಗೆ 80 ರೂಪಾಯಿ ದಾಟಿದೆ.

ಪ್ರೀಮಿಯಂ ಪೆಟ್ರೋಲ್ ದರ ರಾಜಸ್ತಾನ, ಮಧ್ಯ ಪ್ರದೇಶ, ಮಹಾರಾಷ್ಟ್ರಗಳಲ್ಲಿ ಲೀಟರ್ ಗೆ 100 ರೂಪಾಯಿ ದಾಟಿದೆ.

ಕಳೆದ 9 ದಿನಗಳಿಂದ ಪೆಟ್ರೋಲ್ ದರ ಲೀಟರ್ ಗೆ 2.61 ರೂಪಾಯಿ ಏರಿಕೆಯಾದರೆ ಡೀಸೆಲ್ ದರ 3 ರೂಪಾಯಿ 16 ಪೈಸೆಯಷ್ಟು ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಬಹುದು. 

ಛತ್ತೀಸ್ ಗಢ ರಾಜ್ಯದಲ್ಲಿ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಪೆಟ್ರೋಲ್ ದರ ಲೀಟರ್ ಗೆ 12 ರೂಪಾಯಿ ಮತ್ತು ಡೀಸೆಲ್ ದರ ಲೀಟರ್ ಗೆ 4 ರೂಪಾಯಿ ಕಡಿಮೆಯಿದೆ.

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಲೀಟರ್ ಗೆ 93 ರೂಪಾಯಿ 21 ಪೈಸೆಯಾದರೆ, ಡೀಸೆಲ್ ದರ ಲೀಟರ್ ಗೆ 85 ರೂಪಾಯಿ 44 ಪೈಸೆಯಾಗಿದೆ.

ಹಿಂದಿನ ಸರ್ಕಾರವನ್ನು ಆರೋಪಿಸಿದ ಪ್ರಧಾನಿ ಮೋದಿ: ಹಿಂದಿನ ಯುಪಿಎ ಸರ್ಕಾರ ಇಂಧನ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಬಗ್ಗೆ ಗಮನ ನೀಡುತ್ತಿದ್ದರೆ ಇಂದು ಮಧ್ಯಮ ವರ್ಗದ ಮೇಲೆ ಇಷ್ಟೊಂದು ಹೊರೆ ಬೀಳುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.

Stay up to date on all the latest ವಾಣಿಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp