ಸ್ಯಾಮ್‌ ಸಂಗ್‌ ಗ್ಯಾಲಾಕ್ಸಿ ಎಫ್‌ 62 ರಿಲಯನ್ಸ್‌ ಡಿಜಿಟಲ್‌, ಮೈ ಜಿಯೋ ಸ್ಟೋರ್‌ಗಳಲ್ಲಿ ಆಫ್‌ಲೈನ್‌ನಲ್ಲಿ ಬಿಡುಗಡೆ

2021 ಫೆಬ್ರವರಿ 22ರಿಂದ ಸ್ಯಾಮ್‌ ಸಂಗ್‌ನ ಇತ್ತೀಚಿನ ಸ್ಮಾರ್ಟ್‌ಫೋನ್ ಅನ್ನು ರಿಲಾಯನ್ಸ್‌ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದು, ನೋಡಬಹುದು ಮತ್ತು ಅದರ ಅನುಭವ ಪಡೆಯಬಹುದು.

Published: 20th February 2021 07:18 PM  |   Last Updated: 20th February 2021 08:01 PM   |  A+A-


samsung galaxy f62

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಫ್ 62

Posted By : Vishwanath S
Source : UNI

ಮುಂಬೈ: ಹೊಸ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಫ್‌62 ಗೆ ರಿಲಾಯನ್ಸ್‌ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳು ಆಫ್‌ ಲೈನ್‌ ಪಾಲುದಾರರಾಗಿರಲಿದೆ. 2021 ಫೆಬ್ರವರಿ 22ರಿಂದ ಸ್ಯಾಮ್‌ ಸಂಗ್‌ನ ಇತ್ತೀಚಿನ ಸ್ಮಾರ್ಟ್‌ಫೋನ್ ಅನ್ನು ರಿಲಾಯನ್ಸ್‌ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದು, ನೋಡಬಹುದು ಮತ್ತು ಅದರ ಅನುಭವ ಪಡೆಯಬಹುದು.

ಹೊಸ ಸ್ಯಾಮ್‌ ಸಂಗ್ ಗ್ಯಾಲಾಕ್ಸಿ ಎಫ್‌ 62 ಸ್ಯಾಮ್‌ ಸಂಗ್‌ 7ಎನ್‌ಎಂ ಎಕ್ಸಿನೋಸ್‌ 9825 ಪ್ರೋಸೆಸರ್‌ ಭರಿತ 2.73 ಗಿಗಾಹರ್ಟ್ಸ್ ಒಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, 128 ಜಿಬಿ ವಿಸ್ತರಿಸಬಹುದಾದ ಸ್ಟೊರೇಜ್‌ ಮತ್ತು ಕಲರ್ ಸೂಪರ್ ಅಮೊಲೆಡ್‌ ಸ್ಕ್ರೀನ್ ಹೊಂದಿದೆ. ಇದರ ಜೊತೆಗೆ 7000 ಎಂಎಎಚ್‌ ಬ್ಯಾಟರಿಯಿಂದಾಗಿ ಇದು ಗೇಮಿಂಗ್‌ ಗೆ ಅತ್ಯಂತ ಉತ್ತಮವಾದದ್ದಾಗಿದೆ.

ಅತ್ಯುತ್ತಮ ಗುಣಮಟ್ಟದ ಫಿಂಗರ್‌ ಪ್ರಿಂಟ್ ಸೆನ್ಸರ್‌ಗಳು ಮತ್ತು ಫೇಸ್ ಅನ್‌ ಲಾಕ್‌ ಆಯ್ಕೆಗಳನ್ನು ಈ ಫೋನ್ ಹೊಂದಿದೆ. 64 ಎಂಪಿ ಹಿಂಬದಿ ಕ್ಯಾಮೆರಾ ಮತ್ತು ಅಲ್ಟ್ರಾ ವೈಡ್‌ ಹಾಗೂ ಮ್ಯಾಕ್ರ ಶೂಟಿಂಗ್‌ ಕೂಡಾ ಇದ್ದು, 6ಜಿಬಿ ರ್ಯಾ್ಮ್‌ ಮಾದರಿಗೆ ರೂ. 21,499 ಹಾಗೂ 8ಜಿಬಿ ರ್ಯಾ8ಮ್‌ ಮಾದರಿಗೆ ರೂ. 23,499 ದರದಲ್ಲಿ ಲಭ್ಯವಿದೆ. ಐಸಿಐಸಿಐ ಬ್ಯಾಂಕ್‌ ಇನ್‌ಸ್ಟಂಟ್ ರಿಯಾಯಿತಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ರೂ. 2,500/- ಅಥವಾ ರೂ.2,500/- ವರೆಗೆ ಸಿಟಿ ಬ್ಯಾಂಕ್‌ ಇನ್‌ಸ್ಟಂಟ್ ರಿಯಾಯಿತಿ ಕ್ರೆಡಿಟ್ ಕಾರ್ಡ್‌ ಇಎಂಐ ಲಭ್ಯವಿದೆ.

ರಿಲಾಯನ್ಸ್ ಡಿಜಿಟಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬ್ರಿಯಾನ್‌ ಬೇಡ್‌ ಈ ಪಾಲುದಾರಿಕೆಯ ಬಗ್ಗೆ ಮಾತನಾಡಿದ್ದು, “ಭಾರತದಾದ್ಯಂತ ಗ್ರಾಹಕರಿಗೆ ಸ್ಯಾಮ್‌ ಸಂಗ್ ಗ್ಯಾಲಾಕ್ಸಿ ಎಫ್‌ 62 ಗಾಗಿ ನಾವು ಏಕೈಕ ಆಫ್‌ಲೈನ್‌ ಪಾಲುದಾರ ಆಗಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ರಿಲಾಯನ್ಸ್‌ ಡಿಜಿಟಲ್‌ ಮತ್ತು ಮೈ ಜಿಯೋ ಸ್ಟೋರ್‌ಗಳ ನಮ್ಮ ದೊಡ್ಡ ನೆಟ್‌ ವರ್ಕ್‌ನಿಂದಾಗಿ ದೇಶಾದ್ಯಂತ ಗ್ರಾಹಕರು ಮೊದಲಿಗೆ ಆಗಮಿಸಿ, ಫೋನ್‌ ಖರೀದಿ ಮಾಡಲು ಅನುವು ಮಾಡಲಿದೆ. ಈ ಫೋನ್‌ ನ ಕಾರ್ಯಕ್ಷಮತೆಗೆ ನಮ್ಮ ಗ್ರಾಹಕರು ಮನಸೂರೆಗೊಳ್ಳುತ್ತಾರೆ ಎಂಬುದು ನಮಗೆ ಖಚಿತವಿದೆ. ಅದರಲ್ಲೂ ವಿಶೇಷವಾಗಿ ಈ ಬೆಲೆಯು ಹಲವರಿಗೆ ಕೈಗೆಟಕುವಂತಿದೆ ಎಂದು ತಿಳಿಸಿದ್ದಾರೆ.

Stay up to date on all the latest ವಾಣಿಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp