ಬೆಳವಣಿಗೆಯ ವೇಗವನ್ನು ಬಲಪಡಿಸಬೇಕಾಗಿದೆ: ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್
ಭಾರತದ ಆರ್ಥಿಕತೆಯ ಪುನಶ್ಚೇತನಗೊಳಿಸುವುದಕ್ಕೆ ಹಾಗೂ ಕೊರೋನಾ ಪೂರ್ವದಲ್ಲಿದ್ದ ಪಥಕ್ಕೆ ಮರಳಿಸುವುದಕ್ಕಾಗಿ ಬೆಳವಣಿಗೆಯ ವೇಗವನ್ನು ಬಲಪಡಿಸಬೇಕಿದೆ ಎಂದು ಆರ್ ಬಿಐ ಗೌರ್ನರ್ ಹೇಳಿದ್ದಾರೆ.
Published: 23rd February 2021 01:18 PM | Last Updated: 23rd February 2021 02:14 PM | A+A A-

ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ಮುಂಬೈ: ಭಾರತದ ಆರ್ಥಿಕತೆಯ ಪುನಶ್ಚೇತನಗೊಳಿಸುವುದಕ್ಕೆ ಹಾಗೂ ಕೊರೋನಾ ಪೂರ್ವದಲ್ಲಿದ್ದ ಪಥಕ್ಕೆ ಮರಳಿಸುವುದಕ್ಕಾಗಿ ಬೆಳವಣಿಗೆಯ ವೇಗವನ್ನು ಬಲಪಡಿಸಬೇಕಿದೆ ಎಂದು ಆರ್ ಬಿಐ ಗೌರ್ನರ್ ಹೇಳಿದ್ದಾರೆ.
ಬಡ್ಡಿದರ ಪರಿಷ್ಕರಣೆಗಾಗಿ ಇರುವ ಹಣಕಾಸು ನೀತಿ ಸಮಿತಿಯ ಇತ್ತೀಚಿನ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಕ್ತಿಕಾಂತ್ ದಾಸ್, ಈ ಬಾರಿಯೂ ಆರ್ ಬಿಐ ನ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ಸಮಿತಿ ಒಲವು ತೋರಿದೆ ಎಂದು ಹೇಳಿದ್ದಾರೆ.
ಸಮಿತಿಯ ಎಲ್ಲಾ 6 ಸದಸ್ಯರೂ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ತೀರ್ಮಾನಿಸಿದ್ದಾರೆ. ರೆಪೋ ದರ ಶೇ.4 ರಷ್ಟರಲ್ಲೇ ಮುಂದುವರೆಸಬೇಕೆಂಬ ಅಭಿಪ್ರಾಯವನ್ನು ಸಮಿತಿಯ ಸದಸ್ಯರು ವ್ಯಕ್ತಪಡಿಸಿದ್ದಾರೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ದೇಶದಲ್ಲಿ ಲಸಿಕೆ ಅಭಿಯಾನ ಚುರುಕು ಪಡೆದಿರುವುದರಿಂದ ಬೆಳವಣಿಗೆ ಏರುಪೇರಾಗಿದ್ದರೂ ಸಹ ಚೇತರಿಸಿಕೊಳ್ಳುತ್ತಿದ್ದು, ವೇಗ ಪಡೆದುಕೊಳ್ಳುತ್ತಿದೆ ಹಾಗೂ ಗಮನಾರ್ಹವಾಗಿ ಸುಧಾರಿಸಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಆದಾಗ್ಯೂ, ಆರ್ಥಿಕತೆಯ ನಿರಂತರ ಪುನಶ್ಚೇತನಕ್ಕಾಗಿ ಬೆಳವಣಿಗೆಯ ವೇಗ ಬಲಗೊಳ್ಳಬೇಕಿದೆ ಎಂದು ಶಕ್ತಿಕ್ತಾಂತ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.
ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಹೊಂದಾಣಿಕೆಯ ದೃಷ್ಟಿಯಿಂದ ಹಣಕಾಸು ನೀತಿಗಳನ್ನು ಮುಂದುವರೆಸಬೇಕಾಗುತ್ತದೆ ಎನ್ನುವ ಮೂಲಕ ಬಡ್ಡಿದರ ಪರಿಷ್ಕರಣೆಯಲ್ಲಿ ಹೆಚ್ಚಿನ ಬದಲಾವಣೆಗಳು ಇರುವುದಿಲ್ಲವೆಂಬ ಸುಳಿವನ್ನು ನೀಡಿದ್ದಾರೆ.