2021 ರಲ್ಲಿ ಭಾರತೀಯ ಕಂಪನಿಗಳಿಂದ ಶೇ.7.7 ರಷ್ಟು ವೇತನ ಹೆಚ್ಚಳ!

2021 ರಲ್ಲಿ ಭಾರತೀಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಶೇ.7.7 ರಷ್ಟು ವೇತನ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. 

Published: 23rd February 2021 04:36 PM  |   Last Updated: 23rd February 2021 04:50 PM   |  A+A-


Indian firms may offer 7.7% pay hike in 2021

2021 ರಲ್ಲಿ ಭಾರತೀಯ ಕಂಪನಿಗಳಿಂದ ಶೇ.7.7 ರಷ್ಟು ವೇತನ ಹೆಚ್ಚಳ!

Posted By : Srinivas Rao BV
Source : PTI

ನವದೆಹಲಿ: 2021 ರಲ್ಲಿ ಭಾರತೀಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಶೇ.7.7 ರಷ್ಟು ವೇತನ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. 

ಈ ಪ್ರಮಾಣದ ವೇತನ ಪರಿಷ್ಕರಣೆ BRIC ರಾಷ್ಟ್ರಗಳ ಪೈಕಿ ಅತಿ ಹೆಚ್ಚಿನದ್ದಾಗಿರಲಿದ್ದು, 2020 ರಲ್ಲಿ ಮಾಡಲಾಗಿದ್ದ ಶೇ.6.1 ರಷ್ಟು ವೇತನ ಹೆಚ್ಚಳಕ್ಕಿಂತಲೂ ಅಧಿಕವಾಗಿರಲಿದೆ ಎಂದು ಸಮೀಕ್ಷೆ ತಿಳಿಸಿದೆ. 

ಜಾಗತಿಕ ವೃತ್ತಿಪರ ಸೇವೆಗಳ ಸಂಸ್ಥೆ ಅಯಾನ್ ಪಿಎಲ್ಸಿ ಸಂಸ್ಥೆ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಭಾರತೀಯ ಕಂಪನಿಗಳ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ.88 ರಷ್ಟು ಕಂಪನಿಗಳು ವೇತನ ಹೆಚ್ಚಳಕ್ಕೆ ಒಲವು ತೋರಿವೆ. 2020 ರಲ್ಲಿ ಶೇ.75 ರಷ್ಟು ಕಂಪನಿಗಳಷ್ಟೇ ವೇತನ ಹೆಚ್ಚಳ ಮಾಡುವತ್ತ ಒಲವು ತೋರಿದ್ದವು. 

20ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿರುವ 1,200 ಕಂಪನಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ವೇತನ ಹೆಚ್ಚಳಕ್ಕೆ ಕಂಪನಿಗಳು ಚಿಂತನೆ ನಡೆಸಿರುವುದು ಚೇತರಿಕೆಯ ಲಕ್ಷಣವಾಗಿದ್ದು, ಇದೇ ವೇಳೆ ಕಾರ್ಮಿಕ ವೇತನ ಸಂಹಿತೆಗಳೂ ಸಹ ಪರಿಸ್ಥಿತಿಗಳನ್ನು ಬದಲಾವಣೆ ಮಾಡಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಮುಂಬರುವ ಬದಲಾವಣೆಯ ಹಾಗೂ ಅಸ್ಥಿರತೆಗಳಿಗೆ ಸಂಬಂಧಿಸಿದಂತೆ 2021 ರ ವೇತನ ಹೆಚ್ಚಳ ದೀರ್ಘಾವಧಿಯಲ್ಲಿ ಪರಿಣಾಮ ಹೊಂದಿರಲಿದೆ ಎಂದು ಅಯಾನ್ ಪಿಎಲ್ಸಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿತಿನ್ ಸೇಥಿ ಹೇಳಿದ್ದಾರೆ. 

Stay up to date on all the latest ವಾಣಿಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp