ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತ ಕ್ರಮ ಕೈಗೊಳ್ಳಬೇಕು: ಆರ್ ಬಿಐ ಗವರ್ನರ್ 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯವಾಗಿ ಸಂಘಟಿತ ಕ್ರಮಗಳನ್ನು ತೆಗೆದುಕೊಂಡು ಜನಸಾಮಾನ್ಯರ ಸಂಚಾರ ಸಾರಿಗೆ ಇಂಧನ ಬೆಲೆಯನ್ನು ತಗ್ಗಿಸುವತ್ತ ಗಮನ ಹರಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

Published: 25th February 2021 01:54 PM  |   Last Updated: 25th February 2021 02:03 PM   |  A+A-


RBI governor Shaktikanth Das

ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್

Posted By : Sumana Upadhyaya
Source : ANI

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯವಾಗಿ ಸಂಘಟಿತ ಕ್ರಮಗಳನ್ನು ತೆಗೆದುಕೊಂಡು ಜನಸಾಮಾನ್ಯರ ಸಂಚಾರ ಸಾರಿಗೆ ಇಂಧನ ಬೆಲೆಯನ್ನು ತಗ್ಗಿಸುವತ್ತ ಗಮನ ಹರಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಬಾಂಬೆ ಚೇಂಬರ್ ಆಫ್ ಕಾಮರ್ಸ್ ನಲ್ಲಿ ಇಂದು ಮಾತನಾಡಿದ ಅವರು, ಡೀಸೆಲ್ ಮತ್ತು ಪೆಟ್ರೋಲ್ ನ್ನು ಕೇವಲ ಪ್ರಯಾಣಿಕರು ಮಾತ್ರ ಬಳಸುವುದಲ್ಲ, ಉತ್ಪಾದನೆ ವೆಚ್ಚದ ಮೇಲೆ ಸಹ ಇದು ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಬೆಲೆಗಳ ಸಮನ್ವಯ ಮತ್ತು ಮಾಪನಾಂಕ ನಿರ್ಣಯದ ಕಡಿತದ ಅಗತ್ಯವಿದೆ ಎಂದರು.

ಕೋವಿಡ್-19 ಬಂದ ಮೇಲೆ ಕೇಂದ್ರ ಮತ್ತು ರಾಜ್ಯಗಳು ಆದಾಯದ ಒತ್ತಡದಲ್ಲಿ ತತ್ತರಿಸುತ್ತಿವೆ ಆದರೆ ಹೆಚ್ಚಿನ ಇಂಧನ ವೆಚ್ಚವನ್ನು ಕಡಿತಗೊಳಿಸದಿದ್ದಲ್ಲಿ ಮತ್ತೆ ಹಣದುಬ್ಬರವನ್ನು ಉಂಟಾಗುವ ಸಾಧ್ಯತೆಯಿದೆ ಎಂದು ಸಹ ಅವರು ಎಚ್ಚರಿಕೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಿಂದ ಮಾತ್ರವಲ್ಲದೆ ಕೇಂದ್ರ ಮತ್ತು ರಾಜ್ಯಗಳ ಅಧಿಕ ತೆರಿಗೆಯಿಂದ ಸಹ ಇಂಧನ ಬೆಲೆ ಹೆಚ್ಚಾಗುತ್ತದೆ. ಕೇಂದ್ರವು ಒಂದು ಲೀಟರ್ ಪೆಟ್ರೋಲ್‌ಗೆ 32 ರೂಪಾಯಿ 90 ಪೈಸೆ ತೆರಿಗೆ ಮತ್ತು ಸೆಸ್ ಆಗಿ ಸಂಗ್ರಹಿಸುತ್ತದೆ; ಡೀಸೆಲ್ ಮೇಲೆ, ಸಂಚಿತ ಕೇಂದ್ರ ತೆರಿಗೆಗಳು ಮತ್ತು ಸೆಸ್ ಸೇರಿ 31 ರೂಪಾಯಿ 80 ಪೈಸೆಯಾಗುತ್ತದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಇಂಧನ ಬೆಲೆಗಳನ್ನು ಒಳಗೊಂಡಿರುವ ಪರೋಕ್ಷ ತೆರಿಗೆ ಮತ್ತು ಸೆಸ್ ಕಡಿತಕ್ಕೆ ಶಕ್ತಿಕಾಂತ್ ದಾಸ್ ಕರೆ ನೀಡಿದರು. ಕಳೆದ 10 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ತೀವ್ರ ಏರಿಕೆ ಕಂಡಿದ್ದು, ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100 ರೂಪಾಯಿಯಷ್ಟಾಗಿದೆ.

Stay up to date on all the latest ವಾಣಿಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp